ETV Bharat / state

ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ರಾಣಿ ಚೆನ್ನಮ್ಮ ವಿವಿ; ಪರೀಕ್ಷೆ ಮುಂದೂಡಿಕೆ - Rani chennamma vv

ಪರಿಷ್ಕೃತ ವೇಳಾಪಟ್ಟಿಯಂತೆ, ಸೆ.17ರಿಂದ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಹಾಗೂ 20ರಿಂದ ಬಿ.ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರ ವಿವಿ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Rani chennamma vv exams postponed
ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ರಾಣಿ ಚೆನ್ನಮ್ಮ ವಿವಿ; ಪರೀಕ್ಷೆ ಮುಂದೂಡಿಕೆ
author img

By

Published : Sep 13, 2021, 10:06 PM IST

ಬೆಳಗಾವಿ: ರಾಣಿ ಚನ್ನಮ್ಮ ವಿವಿಯಲ್ಲಿ ಸೆ.13ರಿಂದ ನಡೆಯಬೇಕಿದ್ದ ಸ್ನಾತಕೋತ್ತರ ಪದವಿ, ಪದವಿ(ಕ್ರಿಮಿನಾಲಜಿ) ಹಾಗೂ ಸೆ.15ರಿಂದ ನಡೆಯಬೇಕಿದ್ದ ಬಿ.ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಹುರಕಡ್ಲಿ ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಪರಿಷ್ಕೃತ ವೇಳಾಪಟ್ಟಿಯಂತೆ, ಸೆ.17ರಿಂದ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಹಾಗೂ 20ರಿಂದ ಬಿ.ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರ ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಲೂಕಿನ ಭೂತರಾಮನಟ್ಟಿ ಬಳಿಯಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೀಮೆಎಣ್ಣೆ ಬಾಟಲ್ ಹಿಡಿದುಕೊಂಡು ಪ್ರತಿಭಟಿಸಿದ್ದರು. ಈ ವೇಳೆ ಸೆ‌.18ರವರೆಗೆ ಪಿಎಸ್ಐ ದೈಹಿಕ ಸದೃಢತೆ ಪರೀಕ್ಷೆ ಹಾಗೂ ಸೆ.18, 19ರಂದು ಎಸ್‌ಡಿಎ ಲಿಖಿತ ಪರೀಕ್ಷೆ ಇದೆ. ಹಾಗಾಗಿ ಈ ಪರೀಕ್ಷೆ ಮುಂದೂಡಬೇಕೆಂದು ಒತ್ತಾಯ ಮಾಡಿದ್ದಲ್ಲದೇ ಪರೀಕ್ಷೆ ಮುಂದೂಡದಿದ್ದರೆ ಆತ್ಮಹತ್ಯೆ ಬೆದರಿಕೆವೊಡ್ಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.