ಚಿಕ್ಕೋಡಿ: ವಿದ್ಯಾರ್ಥಿನಿಯೊಬ್ಬರಿಗೆ 100ಕ್ಕೆ 101 ಅಂಕ ನೀಡುವ ಮೂಲಕ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಡವಟ್ಟು ಮಾಡಿದೆ.
![BGM](https://etvbharatimages.akamaized.net/etvbharat/prod-images/3538337_cri.jpg)
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಿ.ಕಾಂ 6ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶೈಲಶ್ರೀ ಸಾಂವಗಾಂವ ಅವರಿಗೆ ಮಾಡರ್ನ್ ಆಡಿಟಿಂಗ್ ಆ್ಯಂಡ್ ಪ್ರಾಕ್ಟೀಸಸ್ ವಿಷಯದಲ್ಲಿ 100 ಕ್ಕೆ 101 ಅಂಕ ನೀಡಿರುವುದು ಕಾಲೇಜಿನ ಆಡಳಿತ ಮಂಡಳಿಗೆ, ವಿದ್ಯಾರ್ಥಿನಿ ಹಾಗೂ ಪಾಲಕರ ಅಚ್ಚರಿಗೆ ಕಾರಣವಾಗಿದೆ.
ವೆಬ್ಸೈಟ್ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಈ ಮಾಹಿತಿ ಇತ್ತು. ವಿಷಯ ತಿಳಿದ ನಂತರ ವಿದ್ಯಾರ್ಥಿನಿಯ ರಿಸಲ್ಟ್ ಶೀಟ್ ಅಳಿಸಿ ಹಾಕಲಾಗಿದೆ. ಸದ್ಯ ವಿದ್ಯಾರ್ಥಿನಿ ವೆಬ್ಸೈಟ್ನಲ್ಲಿ ಫಲಿತಾಂಶಕ್ಕಾಗಿ ತನ್ನ ರಿಜಿಸ್ಟರ್ ನಂಬರ್ ಹಾಕಿದರೆ ಇನ್ ವ್ಯಾಲಿಡ್ ರಿಜಿಸ್ಟರ್ ನಂಬರ್ ಎಂದು ಬರುತ್ತಿದೆ. ಹೀಗಾಗಿ ತಾನು ಎಷ್ಟು ಅಂಕ ಗಳಿಸಿದ್ದೇನೆ ಎಂದು ತಿಳಿಯದೇ ವಿದ್ಯಾರ್ಥಿನಿ ಗೊಂದಲಕ್ಕೆ ಒಳಗಾಗಿದ್ದಾರೆ.