ETV Bharat / state

ಬೆಳಗಾವಿ ಲೋಕಸಭೆ ಉಪಚುನಾವಣೆ: ಬಿಜೆಪಿಗೆ ಬಿಸಿ ತುಪ್ಪವಾಗುತ್ತಾ ರಮೇಶ್​ ಜಾರಕಿಹೊಳಿ ಪ್ರಕರಣ?

author img

By

Published : Mar 8, 2021, 12:24 PM IST

Updated : Mar 8, 2021, 1:57 PM IST

ಕೇಂದ್ರ ಸಚಿವ ದಿವಂಗತ ಸುರೇಶ್​ ಅಂಗಡಿಯವರಿಂದ ತೆರವಾಗಿರುವ ಬೆಳಗಾವಿ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ಆದರೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಾ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ
belgum

ಬೆಳಗಾವಿ: ಸಿಡಿ ಬಹಿರಂಗಗೊಂಡ ಬಳಿಕ ರಮೇಶ್​​ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬೆಳಗಾವಿ ಲೋಕಸಭೆ ಉಪಚುನಾವಣೆ ಮುನ್ನವೇ ನಡೆದಿರುವ ಈ ಬೆಳವಣಿಗೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹಿರಿಯ ‌ಪತ್ರಕರ್ತ ಅಶೋಕ ‌ಚಂದರಗಿ ಮಾಹಿತಿ

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಚುನಾವಣೆ ಎದುರಿಸುವುದು ಕೂಡ ಬಿಜೆಪಿಗೆ ದೊಡ್ಡ ಟಾಸ್ಕ್​ ಆಗಿದೆ. ಈ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಹಾಕಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಸುರೇಶ್​​ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ಈ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು. ರಾಜಕೀಯವಾಗಿ ಸಾಕಷ್ಟು ಪ್ರಾತಿನಿಧ್ಯ ಬೆಳಗಾವಿಗೆ ಸಿಕ್ಕಿದ್ದು, ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎಲ್ಲರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತಾರೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ರಮೇಶ್​​ ಜಾರಕಿಹೊಳಿ ಸಿಡಿ ಪ್ರಕರಣದಿಂದ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ. ಅಲ್ಲದೆ ಈ ಪ್ರಕರಣ ಸಂಬಂಧ ನಡೆಯಲಿರುವ ಕಾನೂನು ಹೋರಾಟದಲ್ಲಿ ಮಾಜಿ ಸಚಿವ ರಮೇಶ್​ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿರತವಾಗಲಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಈ ಇಬ್ಬರೂ ನಾಯಕರಿಗೆ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಅವರು ಸಕ್ರಿಯವಾದರೂ ಬಿಜೆಪಿಗೆ ಮುಜುಗರ ತಪ್ಪಿದ್ದಲ್ಲ. ಈ ಕಾರಣಕ್ಕೆ ಕ್ಷೇತ್ರದಲ್ಲಿ ಚಿರಪರಿಚಿತ ಹಾಗೂ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆಯಲ್ಲಿ ತೊಡಗಿದ್ದು, ಅದಕ್ಕಾಗಿ ತಲಾಶ್​ ಕೂಡ ಆರಂಭಿಸಿದ್ದಾರೆ.

ಶ್ರದ್ಧಾ ಶೆಟ್ಟರ್​ಗೆ ಸಿಗುತ್ತಾ ಟಿಕೆಟ್ :

ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್​ ಕ್ಷೇತ್ರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಭಾವಿ ಕ್ಷೇತ್ರ ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೆ ಜಾರಕಿಹೊಳಿ ಕುಟುಂಬ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತನ್ನದೇ ಪ್ರಭಾವ ಹೊಂದಿದೆ. ಇದೀಗ ಸಿಡಿ ಪ್ರಕರಣದಡಿ ರಮೇಶ್​ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಕರಣ ಹಲವು ತಿರುವು ಪಡೆಯುತ್ತಿದ್ದು, ಸದ್ಯಕ್ಕೆ ರಮೇಶ್​ ಸಂಪುಟ ಸೇರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ಜೊತೆಗಿರುವ ಮೂವರು ಜಾರಕಿಹೊಳಿ ಸಹೋದರರನ್ನು ಚುನಾವಣೆಯಿಂದ ದೂರ ಇಡುವುದು ಕೂಡ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಒಂದು ವೇಳೆ ಜಾರಕಿಹೊಳಿ ಸಹೋದರರು ಚುನಾವಣೆಯಿಂದ ದೂರ ಉಳಿದರೆ ಬಿಜೆಪಿಗೆ ತುಸು ನಷ್ಟವಾಗಬಹುದು. ಸುರೇಶ್​ ಅಂಗಡಿ ಅವರ ನಿಧನದಿಂದ ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಅನುಕಂಪದ ಅಲೆ ಸೃಷ್ಟಿ ಆಗುತ್ತದೆ. ಸುರೇಶ್​​ ಅಂಗಡಿ ಅವರ ಪತ್ನಿ ಹಾಗೂ ಹಿರಿಯ ಪುತ್ರಿ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್​​ ಶೆಟ್ಟರ್ ಅವರ ಸೊಸೆ ಹಾಗೂ ಸುರೇಶ್​​ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

ಓದಿ: ರಾಜ್ಯ ಬಜೆಟ್​: ಸಿಎಂ ಬಿಎಸ್​ವೈಗೆ ಆರತಿ ಬೆಳಗಿ ಶುಭ ಕೋರಿದ ಸಚಿವೆ ಶಶಿಕಲಾ ಜೊಲ್ಲೆ

ಗಟ್ಟಿ ಅಭ್ಯರ್ಥಿಗಾಗಿ ತಲಾಶ್​:

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದುಕೊಂಡಿದ್ದ ಬಿಜೆಪಿ ಇದೀಗ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಪ್ರಭಾವಿ ಅಭ್ಯರ್ಥಿಗಳಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕೀಳಿಯಬೇಕು ಎಂದುಕೊಂಡಿದ್ದ ರಮೇಶ್​ ಕತ್ತಿಗೆ ಅವಕಾಶ ಸಿಕ್ಕಿರಲಿಲ್ಲ. ಐದು ಅವಧಿವರೆಗೆ ​​ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ಈಗಲೂ ಅವರೆ ಇದ್ದಾರೆ. ಅಲ್ಲದೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಚಿರಪರಿಚಿತರೂ ಆಗಿದ್ದಾರೆ. ಉಮೇಶ್​​ ಕತ್ತಿ ಅವರೂ ಸಚಿವರಾಗಿದ್ದು, ಈ ಹಿಂದೆ ಮೂರು ಸಲ ಬೆಳಗಾವಿ ಉಸ್ತುವಾರಿ ಸಚಿವರೂ ಆಗಿದ್ದರು. ಈ ಪ್ರಭಾವ ಕತ್ತಿ ಗೆಲುವಿಗೆ ಪೂರಕವಾಗಲಿದ್ದು, ಕತ್ತಿ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸು ಮಾಡಲಾಗಿದೆ.

ಮಾಜಿ ಸಂಸದ ಅಮರಸಿಂಹ ಪಾಟೀಲ ಕೂಡ ಬೆಳಗಾವಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಒಮ್ಮೆ ಜಿಪಂ ಅಧ್ಯಕ್ಷರಾಗಿ ಹಾಗೂ ಒಮ್ಮೆ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕುರುಬ ಸಮಾಜದ ಅಮರಸಿಂಹ ಪಾಟೀಲ ಜಾರಕಿಹೊಳಿ ಕುಟುಂಬದ ಜೊತೆಗೆ ಒಳ್ಳೆಯ ಒಡನಾಟ ಇದೆ. ಮತ್ತೊಂದೆಡೆ ಮಾಜಿ ಶಾಸಕರಾದ ಸಂಜಯ್ ಪಾಟೀಲ ಹಾಗೂ ಡಾ.ವಿಶ್ವನಾಥ ಪಾಟೀಲ ಕೂಡ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಇನ್ನು ವೈದ್ಯರಾದ ಡಾ. ಗಿರೀಶ ಸೋನವಾಲ್ಕರ್ ಹಾಗೂ ಡಾ. ರವಿ ಪಾಟೀಲ ಕೂಡ ಟಿಕೆಟ್‍ಗೆ ಲಾಬಿ ಮುಂದುವರೆಸಿದ್ದಾರೆ. ಜಾರಕಿಹೊಳಿ ಪ್ರಕರಣ ಬಿಜೆಪಿ ನಾಯಕರಿಗೆ ತಲೆನೋವಾಗಿರುವುದು ಸುಳ್ಳಲ್ಲ.

ಕಾಂಗ್ರೆಸ್‍ಗೆ ಲಾಭವಾಗಲಿದೆಯೇ ಸಿಡಿ ಪ್ರಕರಣ:

ರಮೇಶ್​ ಪ್ರಕರಣದಿಂದ ಬಿಜೆಪಿಯಲ್ಲಿ ಉಂಟಾದ ಬೆಳವಣಿಗೆಯ ಲಾಭವನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಡೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಜಾರಕಿಹೊಳಿ ಸಹೋದರರು ಚುನಾವಣೆಯಿಂದ ದೂರ ಉಳಿದು ಹಾಗೂ ಸಾಮಾನ್ಯ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದ್ದೇ ಆದರೆ ಕಾಂಗ್ರೆಸ್‍ಗೆ ಲಾಭವಾಗಲಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಹಾಗೂ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಕೂಡ ಬೆಳಗಾವಿ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಜಾರಕಿಹೊಳಿ ಅವರ ಪ್ರಕರಣವನ್ನೇ ಕಾಂಗ್ರೆಸ್ ಲಾಭವಾಗಿ ಪಡೆದುಕೊಂಡು ಬಿಜೆಪಿ ಸೋಲಿಸಲು ತಂತ್ರ ಹೆಣೆಯುತ್ತಿದೆ. ಯಾರೇ ಅಭ್ಯರ್ಥಿ ಆದರೂ ಮುಂಬರುವ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಜಾರಕಿಹೊಳಿ ಸಿಡಿ ಪ್ರಕರಣದಿಂದ ಪಕ್ಷ ಮುಜುಗರ ಅನುಭವಿಸುವಂತಾಗಿದ್ದು, ಮುಂಬರುವ ಚುನಾವಣೆಯ ಉಭಯ ಪಕ್ಷಗಳ ಮಧ್ಯೆ ಫೈಟ್‍ಗೆ ಬೆಳಗಾವಿ ಕ್ಷೇತ್ರ ಸಾಕ್ಷಿಯಾಗಲಿದೆ.

Last Updated : Mar 8, 2021, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.