ETV Bharat / state

ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ: ರಮೇಶ್ ‌ಜಾರಕಿಹೊಳಿ ಯೂಟರ್ನ್

ರಾಜೀನಾಮೆ ಹೇಳಿಕೆ ವಿಚಾರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯೂಟರ್ನ್ ಹೊಡೆದಿದ್ದಾರೆ. ಹಿತೈಷಿಗಳು, ಮಠಾಧೀಶರ ಸಲಹೆ ಮೇರೆಗೆ ನಿರ್ಧಾರ ಕೈ ಬಿಟ್ಟಿದ್ದೇನೆ ಎಂದಿದ್ದಾರೆ.

ರಮೇಶ್ ‌ಜಾರಕಿಹೊಳಿ
ರಮೇಶ್ ‌ಜಾರಕಿಹೊಳಿ
author img

By

Published : Jul 10, 2021, 2:17 PM IST

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ‌ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಈಗ ಮುಗಿದ ಅಧ್ಯಾಯ ಎಂದಿದ್ದಾರೆ.

ಜಿಲ್ಲೆಯ ಗೋಕಾಕ್ ತಾಲೂಕಿನ ‌ಅಂಕಲಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ‌ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ‌ ನಿಶ್ಚಯಿಸಿದ್ದು ನಿಜ. ಕೆಲವು ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ. ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರದಲ್ಲಿ ರಮೇಶ್ ‌ಜಾರಕಿಹೊಳಿ ಯೂಟರ್ನ್!

‘ಹಿತೈಷಿಗಳ ನಿರ್ಧಾರಕ್ಕೆ ಸುಮ್ಮನಿದ್ದೇನೆ’

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ರಾಜಕಾರಣ ಇರಲಿಲ್ಲ. ವೈಯಕ್ತಿಕವಾಗಿ ಬೇರೆ ಕಾರಣ ಇತ್ತು. ಹಿತೈಷಿಗಳು, ಮಠಾಧೀಶರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದು ಬೇಡ ಎಂದಿದ್ದಕ್ಕೆ ತಡೆ ಹಿಡಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ರು.

‘ನಾ ಒಂಟಿಯಾಗಿಲ್ಲ’

ಜಂಟಿ ಮಾಧ್ಯಮಗೋಷ್ಟಿ ನಡೆಸುವುದಾಗಿ ಹೇಳಿದ್ದ ಬಾಲಚಂದ್ರ ಜಾರಕಿಹೊಳಿ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗೋಷ್ಟಿ ಮಾಡುವ ಸಂದರ್ಭ ಈಗಿಲ್ಲ. ಆ ರೀತಿಯ ಸಂದರ್ಭ ಬಂದಾಗ ಮಾಡೋಣ. ಈ ವಿಚಾರ ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ನಾನಿರಲಿಲ್ಲ. ಬೆಂಗಳೂರಿಂದ ಗೋಕಾಕ್‌ಗೆ ಬರಬೇಕಿತ್ತು, ನೇರವಾಗಿ ಮುಂಬೈಗೆ ಹೋಗಿದ್ದೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿ‌ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಎರಡ್ಮೂರು ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ‌ ಜೊತೆ ಮಾತನಾಡುತ್ತೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರಕ್ಕೂ, ನಾ‌ ಒಂಟಿಯಾಗಿದ್ದೇನೆ ಎಂಬುದಕ್ಕೂ ಸಂಬಂಧವಿಲ್ಲ. ನಾನೇ ಯಾರನ್ನೂ ಭೇಟಿಯಾಗ್ತಿಲ್ಲ ಎಂದು ಸ್ಪಷ್ಟಪಡಿಸಿದರು.

‘ಹೆಚ್​ಡಿಕೆ ಪರ ಬ್ಯಾಟಿಂಗ್’

ಮಾಜಿ ಸಿಎಂ ಹೆಚ್‌ಡಿಕೆ - ಸಂಸದೆ ಸುಮಲತಾ ಟಾಕ್ ವಾರ್​ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ‌ಜಾರಕಿಹೊಳಿ ಹೆಚ್​ಡಿಕೆ ಪರ ಬ್ಯಾಟಿಂಗ್ ಮಾಡಿದ್ರು. ಹೆಚ್‌ಡಿಕೆ - ಸುಮಲತಾ ವಾಗ್ವಾದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಅಂತಾ ನಿಗಮದ ಎಂಡಿ ಜಯಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ, ತಾಂತ್ರಿಕವಾಗಿ ತೊಂದರೆ ಇಲ್ಲ. ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಸುಮಲತಾ ಯಾಕೆ ಹೇಳಿದ್ರೋ ಗೊತ್ತಿಲ್ಲ. ಸ್ಥಳೀಯವಾಗಿ ಚರ್ಚಿಸಿ ಈ ಬಗ್ಗೆ ಮಾತನಾಡಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.