ETV Bharat / state

ದೋಸ್ತಿ ಪತನಕ್ಕೆ ಕಾರಣ ಇದು... ಸತ್ಯ ಬಿಚ್ಚಿಟ್ಟ ರಮೇಶ್‌ ಸಾಹುಕಾರ್​... ಇದು ಈಟಿವಿ ಎಕ್ಸ್​ಕ್ಲ್ಯೂಸಿವ್​!

ಸಮ್ಮಿಶ್ರ ಸರ್ಕಾರ ಪತನಕ್ಕೆ ಅಥಣಿಯಿಂದಲೇ ವೇದಿಕೆ ಸಿದ್ಧವಾಯ್ತಾ.. ಇದನ್ನ ಸ್ವತಃ ರೆಬೆಲ್‌ ಸ್ಟಾರ್‌ ರಮೇಶ್ ಜಾರಕಿಹೊಳಿಯೇ ಹೇಳಿಕೊಂಡಿದ್ದಾರೆ. ಜತೆಗೆ ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷವೇ ಹೊರಹಾಕಿದೆ ಎಂದು ಜಾರಕಿಹೊಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಮೇಶ್​ ಜಾರಕಿಹೊಳಿ
author img

By

Published : Sep 28, 2019, 8:01 AM IST

Updated : Sep 28, 2019, 9:06 PM IST

ಬೆಳಗಾವಿ : ಸಮ್ಮಿಶ್ರ ಸರ್ಕಾರ ಪತನಕ್ಕೆ ಅಥಣಿ ಇಂದಾನೆ ಬಂಡಾಯ ಪ್ರಾರಂಭಯ್ತು. ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷವೇ ಹೊರಹಾಕಿದೆ ಎಂದು ಬಂಡಾಯ ಚಟುವಟಿಕೆಗಳಿಗೆ ನಾಯಕತ್ವವಹಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ ಹೇಳಿಕೊಂಡಿದ್ದಾರೆ.

ಮೈತ್ತಿ ಸರ್ಕಾರ ಕೆಡವಲು ಕಾರಣ ಬಿಚ್ಚಿಟ್ಟ ರಮೇಶ್‌ ಸಾಹುಕಾರ್​..

ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಸಭೆ ನಡೆಸಿದ ರಮೇಶ್‌ ಸಾಹುಕಾರ್​, ಕಳೆದ ಚುನಾವಣೆ ವೇಳೆ ಅಥಣಿ ಜನಕ್ಕೆ ನೀರಾವರಿ ಯೋಜನೆಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಅಥಣಿ ಜನತೆ ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಯಾವುದೇ ಸರ್ಕಾರ ಬರಲಿ ಕರಿಮಸೂತಿ ಕಾಲುವೆ ನೀರಾವರಿ ಯೋಜನೆಗೆ ಪ್ರತಿ ವರ್ಷ 40 ಲಕ್ಷದಿಂದ ಒಂದು ಕೋಟಿವರೆಗೆ ಹಣ ಬಿಡುಗಡೆಯಾಗುತ್ತಿತ್ತು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಕರಿಮಸೂತಿ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಲಿಲ್ಲ. ಇದೇ ನನ್ನ ಅಸಮಾಧಾನಕ್ಕೆ ಕಾರಣ ಎಂದು ತಿಳಿಸಿದರು.

ಬೆಳಗಾವಿಗೆ 800 ಕೋಟಿ ಹಣ ಬಿಡುಗಡೆ ಆಗುತ್ತೆ. ಅಥಣಿ, ಗೋಕಾಕ್​ಗೆ ಕೇವಲ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಮೀನಮೇಷ ಮಾಡುತ್ತಿದ್ದರು. ಕೊಟ್ಟಲಗಿ ಗ್ರಾಮಕ್ಕೆ ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ನೀರಾವರಿ ಸಚಿವರು ಯಾವುದೇ ಹಣ ಬಿಡುಗಡೆ ಮಾಡದೆ ಇರುವುದರಿಂದ ರಾಜೀನಾಮೆಗೆ ರೆಡಿಯಾದೆ. ದೋಸ್ತಿ ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲಿ ನಾವು ರಾಜೀನಾಮೆಗೆ ಸಿದ್ಧತೆ ನಡೆಸಿದ್ದೆವು ಎಂದು ಹೇಳಿದರು.

ಮನೆಯ ಅಣ್ಣ-ತಮ್ಮಂದಿರು ಮೋಸ ಮಾಡುತ್ತಾರೆ. ಆದರೆ, ಮಹೇಶ್ ಕುಮಟಳ್ಳಿ ನನ್ನ ನಂಬಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ಅನ್ಯಾಯವಾಗಲು ತಾನು ಬಿಡುವುದಿಲ್ಲ ಎಂದರು.

Intro:ಸಮಿಶ್ರ ಸರ್ಕಾರ ಪತನಕ್ಕೆ ಅಥಣಿ ಇಂದಾನೆ ಬಂಡಾಯ ಪ್ರಾರಂಭ ಕಾರಣವಂತೆ ದರೂರ್ ನಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆBody:ಎಕ್ಸ್ಕ್ಯೂಸ್ ಈಟಿವಿ ಭಾರತ್ ವಿಡಿಯೋ

ಅಥಣಿ

ಸಮಿಶ್ರ ಸರ್ಕಾರ ಬೀಳೋಕೆ ಅಥಣಿ ಕಾರಣ ಅಂತೆ ಕಾಂಗ್ರೆಸ್ ಪಕ್ಷ ಅನರ್ಹರಾದ ಶಾಸಕರನ್ನು ಕಾಂಗ್ರೆಸ್ ಪಕ್ಷವೇ ಹೊರಹಾಕಿದೆ ಅಂತೆ

ಅಥಣಿ ತಾಲೂಕು ದರೂರು ಗ್ರಾಮದಲ್ಲಿ ಅಭಿಮಾನಿಗಳ ಜೊತೆ ಮನದಾಳದ ಮಾತು ಹಚ್ಚಿಕೊಂಡ ರಮೇಶ್ ಜಾರಕಿಹೊಳಿ

ಕಳೆದ ಚುನಾವಣೆ ವೇಳೆ ಅಥಣಿ ಜನಕ್ಕೆ ನೀರಾವರಿ ಯೋಜನೆಗಳು ನೀಡುತ್ತೇನೆ ಎಂಬ ಭರವಸೆ ನೀಡಿದ್ದೆ
ಅದರಲ್ಲೂ ಕಳೆದ ಚುನಾವಣೆಯಲ್ಲಿ ಅಥಣಿ ಜನತೆ ಪ್ರಮುಖ ಮೂರು ಬೇಡಿಕೆ ಮುಂದಿಟ್ಟಿದ್ದರುನೀರು ಹಾಗೂ ಸವಳು ಜವಳು ಅಥಣಿ ಭಾಗದ ಜನರ ಬೇಡಿಕೆ ಯಾಗಿತ್ತು

ಕಳೆದ ಬಾರಿ ಚುನಾವಣೆಯ ನಾನು ಅಥಣಿ ಜನರ ಬೇಡಿಗಳು ಈಡೇರಿಸುವುದೇ ಎಂಬ ಮಾತು ಕೊಟ್ಟಿದ್ದೆ ಯಾವುದೇ ಸರ್ಕಾರ ಬರಲಿ ಕರಿಮಸೂತಿ ಕಾಲುವೆ ನೀರಾವರಿ ಯೋಜನೆಗೆ ಪ್ರತಿ ವರ್ಷ ರಿ ಯಾವುದೇ ಸರ್ಕಾರ ಬರಲಿ 40 ಲಕ್ಷದಿಂದ ಒಂದು ಕೋಟಿವರೆಗೆ ಹಣ ಬಿಡುಗಡೆಯಾಗುತ್ತಿದ್ದು ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಕರಿಮಸೂತಿ ನೀರಾವರಿ ಯೋಜನೆ ಹಣ ನೀರಾವರಿ ಸಚಿವರು ನಿಲ್ಲಿಸಿದರು ಹಣ ಬಿಡುಗಡೆ ಮಾಡಕ್ಕೂ ರೆಡಿಯಿಲ್ಲ ಮತ್ತು ನಿರಾವರಿ ಗೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಹಣ ಬಿಡುಗಡೆ ಮಾಡಲಿಲ್ಲ

ಮತ್ತು ಬೆಳಗಾವಿಗೆ 800 ಕೋಟಿ ಹಣ ಬಿಡುಗಡೆ ಆಗುತ್ತೆ ಅಥಣಿ ಗೋಕಾಕ್ ಬರಿ 40 ಲಕ್ಷ ರೂಪಾಯಿ ಬಿಡುಗಡೆ ಮಾಡಕ್ಕೂ ಮೀನಾಮೇಷ ಮಾಡುತೀತ್ತು ಈ
ಸಮ್ಮಿಶ್ರ ಸರ್ಕಾರದ ನೀರಾವರಿ ಸಚಿವರು

ಕೊಟ್ಟಲಗಿ ಗ್ರಾಮಕ್ಕೆ ಕುಡಿಯುವ ಹಾಗೂ ಕೃಷಿ ನೀರಾವರಿ ವ್ಯವಸ್ಥೆ ಮಾಡಬೇಕಾಗಿತ್ತು ಆದರೆ ನೀರಾವರಿ ಸಚಿವರು ಯಾವುದೇ ಹಣ ಬಿಡುಗಡೆ ಮಾಡದೆ ಇರುವುದರಿಂದ ರಾಜೀನಾಮೆಗೆ ರೆಡಿಯಾದೆ

ಸಮಿಶ್ರ ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲಿ ನಾವು ರಾಜೀನಾಮೆಗೆ ಸಿದ್ಧತೆ ನಡೆಸಿದ್ದೆವು

ಇದೇ ಸಮಯದಲ್ಲಿ ಗೋಕಾಕ್ ಉಪಚುನಾವಣೆಯ ನೆನಪಿಸಿಕೊಂಡು ಮನೆಯ ಅಣ್ಣ-ತಮ್ಮಂದಿರ ಮೋಸ ಮಾಡುತ್ತಾರೆ ಆದರೆ ಮಹೇಶ್ ಕುಮಟಳ್ಳಿ ನನ್ನ ನಂಬಿ ರಾಜೀನಾಮೆ ನೀಡಿದ್ದಾರೆ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ
ಎಂದು ಹೇಳಿದರು

Conclusion:ಶಿವರಾಜ್ ನೇಸರ್ಗಿ ಅಥಣಿ
Last Updated : Sep 28, 2019, 9:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.