ಚಿಕ್ಕೋಡಿ: ಇಂತಹ ದೊಡ್ಡ ಪ್ರವಾಹ ಬಂದರೂ ಅದನ್ನ ಮರೆತು ಕಾಗವಾಡ, ಅಥಣಿ, ಗೋಕಾಕ್ ಕ್ಷೇತ್ರದ ಜನತೆ ನಮಗೆ ಆಶೀರ್ವದಿಸಿದ್ದಾರೆ ಎಂದು ನೂತನ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಈಗ್ಲೂ ನಮ್ಮ ನಾಯಕ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿ ಆರ್ಪಿಡಿ ಕಾಲೇಜಿನಲ್ಲಿ ಉಪಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ ಅವರು, ನಾವು ಅರ್ಹರೆಂದು ಜನತೆ ತೀರ್ಪು ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಇಷ್ಟೊಂದು ವಯಸ್ಸಾದರೂ ನಮ್ಮ ಕ್ಷೇತ್ರಕ್ಕೆ ಎರಡು ಬಾರಿ ಬಂದು ಕಾರ್ಯಕರ್ತರಂತೆ ಪ್ರಚಾರ ಮಾಡಿದ್ದರು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು, ಸಿದ್ದರಾಮಯ್ಯ ಈಗ್ಲೂ ನಮ್ಮ ನಾಯಕ ಅಂತಾ ರಮೇಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದರು. ಅಲ್ಲದೆ ಸೋತಿರುವ ಎಂಟಿಬಿ ನಾಗರಾಜ್ ಅವರ ಜೊತೆ ನಾವೂ ಇರುತ್ತೇವೆ. ನಾವು ಕೆಟ್ಟ ಸರ್ಕಾರ ತೆಗೆಯಲು ಅಲ್ಲಿಂದ ಹೊರ ಬಂದಿದ್ದೇವೆ ಎಂದರು.
ಲಖನ್ ಜಾರಕಿಹೊಳಿ ಇಂದಿನಿಂದ ನಮ್ಮ ತಮ್ಮ ಅವನಿಗೆ ದೇವರು ಬುದ್ಧಿ ಕೊಡಲಿ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಓರ್ವ ಹೆಣ್ಣು ಮಗಳಾಗಿ ಇದ್ದರೆ ಒಳ್ಳೆಯದು. ಅವರಿಗೆ ಮರಾಠ ಜನ ಮತ ಹಾಕಿದ್ದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕಿಯಾಗಿದ್ದಾರೆ. ಕುಮಟಳ್ಳಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಗಂಡಸರೇ.. ಎಂದು ಹೆಬ್ಬಾಳ್ಕರ್ಗೆ ರಮೇಶ್ ಟಾಂಗ್ ಕೊಟ್ಟರು.