ಬೆಳಗಾವಿ: ಮಹಾರಾಷ್ಟ್ರದ ಚಂದಗಡದಲ್ಲಿ ಅಳಿಯನನ್ನು ಕಣಕ್ಕಿಳಿಸುವಾಗ ಮರಾಠಿಗರು ನೆನಪಾಗಲಿಲ್ವೇ? ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟ್ವಿಟ್ಟರ್ ಮೂಲಕ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.
- — Laxmi Hebbalkar (@laxmi_hebbalkar) December 30, 2019 " class="align-text-top noRightClick twitterSection" data="
— Laxmi Hebbalkar (@laxmi_hebbalkar) December 30, 2019
">— Laxmi Hebbalkar (@laxmi_hebbalkar) December 30, 2019
ಮಹಾರಾಷ್ಟ್ರದ ಚಂದಗಡ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅಳಿಯ ಅಪ್ಪಿರಾವ್ ಪಾಟೀಲ್ ಚುನಾವಣೆಗೆ ಸ್ಪರ್ಧಿಸಿದ್ದರು. ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟಿದ್ದರೂ ಅಳಿಯ ಅಪ್ಪಿರಾವ್ ಪಾಟೀಲ್‌ನನ್ನು ನೀವೇಕೆ ಚುನಾವಣೆಗೆ ನಿಲ್ಲಿಸಿದ್ರಿ? ಆಗ ಮರಾಠಿಗರ ಹಕ್ಕುಚ್ಯುತಿ ಆಗಲಿಲ್ವೇ?' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಪ್ರಶ್ನೆಗಳನ್ನು ಹಾಕಿದ್ದಾರೆ.
ಆಸೆ ಆಮಿಷಕ್ಕೆ ಜನರು ನನಗೆ ಮತ ಹಾಕಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಮತದಾರರಲ್ಲಿ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಲಕ್ಷ್ಮೀ ಆಗ್ರಹಿಸಿದ್ದಾರೆ.