ಚಿಕ್ಕೋಡಿ: ಕಾಗವಾಡ ಮತಕ್ಷೇತ್ರ ನನ್ನ ತವರು ಮನೆ ಇದ್ದ ಹಾಗೆ ನನಗೆ ಅಥಣಿಗೆ ಹೋಗಲು ಇಷ್ಟವಿಲ್ಲ ಎಂದು ರಾಜು ಕಾಗೆ ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸ್ವೀಕರಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದಾಗ ಅಲ್ಲಿಯೂ ಸಹ ನನ್ನ ಹಿಡಿತದಲ್ಲಿರುವ ಅಥಣಿ ಮತಕ್ಷೇತ್ರದ 25 ಹಳ್ಳಿಗಳಿವೆ. ಆದರೆ, ನನಗೆ ಅಲ್ಲಿಗೆ ಹೋಗಲು ಮನಸಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಹೇಳಿದ್ದಾರೆ.
ಸದ್ಯ ಕಾಗವಾಡದಲ್ಲಿ ಚುಣಾವಣೆ ಎದುರಿಸಬೇಕೊ ಅಥವಾ ಅಥಣಿಗೆ ಹೋಗಬೇಕೊ ಎಂದು ಗೊಂದಲದಲ್ಲಿರುವ ರಾಜು ಕಾಗೆಗೆ ಕಾಗಾವಾಡದಲ್ಲೇ ಸ್ಪರ್ಧೆ ಮಾಡಬೇಕು ಎಂದು ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟ ಮಾಡಲಿರುವ ರಾಜು ಕಾಗೆ, ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.