ETV Bharat / state

ಉಪಚುನಾವಣೆ ಘೋಷಣೆ: ಅಖಾಡಕ್ಕಿಳಿಯುವ ತಯಾರಿಯಲ್ಲಿ ಮಾಜಿ ಶಾಸಕ ರಾಜು ಕಾಗೆ - ಕಾಗವಾಡ ಕ್ಷೇತ್ರ

ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಎಲ್ಲ ಕ್ಷೇತ್ರಗಳಲ್ಲೂ ರಾಜಕೀಯ ಕ್ಷೇತ್ರದಲ್ಲಿ ಚುನಾವಣೆ ರಂಗುಪಡೆದಿದ್ದು, ಕಾಗವಾಡ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಶಾಸಕ ರಾಜು ಕಾಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಮಾಜಿ ಶಾಸಕ ರಾಜು ಕಾಗೆ, ಶ್ರೀಮಂತ ಪಾಟೀಲ
author img

By

Published : Sep 23, 2019, 11:34 AM IST

ಚಿಕ್ಕೋಡಿ: 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಕಾಗವಾಡ ಕ್ಷೇತ್ರದಲ್ಲಿ ರಾಜಕೀಯ ಚಟುವಟೆಕೆಗಳು ಗರಿಗೆದರಿವೆ. ತೀವ್ರ ಕುತೂಹಲ ಕೆರಳಿಸಿರುವ ಈ ಕ್ಷೇತ್ರದಿಂದ ಮಾಜಿ ಶಾಸಕ ರಾಜು ಕಾಗೆ ಅಖಾಡಕ್ಕಿಳಿಯಲು ತಯಾರಿ‌ ನಡೆಸುತ್ತಿದ್ದಾರೆ.

Raju Kage
ಮಾಜಿ ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಏಕೆಂದರೆ ಉಪಚುನಾವಣೆ ಘೋಷಣೆಯಾದರೂ ಯಾರು, ಯಾವ ಪಕ್ಷದ ಅಭ್ಯರ್ಥಿಗಳಾಗುತ್ತಾರೆ ಎಂಬ ಗೊಂದಲ, ಚರ್ಚೆ ನಡೆಯತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಉಚ್ಛಾಟನೆಗೊಂಡು ಅನರ್ಹಗೊಂಡಿರುವ ಶ್ರೀಮಂತ ಪಾಟೀಲ್​​​ ಅವರು ಮತ್ತೆ ಕಾಂಗ್ರೆಸ್​ ಅಭ್ಯರ್ಥಿಯಾಗುವ ಅವಕಾಶ ಇಲ್ಲದಂತಾಗಿದೆ.

srimantha patil
ಅನರ್ಹ ಶಾಸಕ ಶ್ರೀಮಂತ ಪಾಟೀಲ್​

ಆಯೋಗ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್​ ಅವರ ಪುತ್ರ ಶ್ರೀನಿವಾಸ ಪಾಟೀಲ್​​​ಗೆ​​ ಬಿಜೆಪಿ ಮಣೆ ಹಾಕಿದರೆ ಟಿಕೆಟ್​​​ಗ್ಯಾರಂಟಿ. ಇತ್ತ ರಾಜು ಕಾಗೆ ಅವರನ್ನೂ ಪಕ್ಷ ಕೈ ಬಿಡಲಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶ್ರೀಮಂತ ಪಾಟೀಲರ ಸ್ಥಿತಿ ಅತಂತ್ರವಾಗಿದ್ದು, ಸುಪ್ರೀಂಕೋರ್ಟ್​ನಲ್ಲಿ ಕೇಸ್ ಬಾಕಿ ಇರುವುದರಿಂದ ಕ್ಷೇತ್ರದ ಜನರಿಗೆ ಮುಖ ತೋರಿಸದ ಸ್ಥಿತಿ ನಿರ್ಮಾಣವಾಗಿದೆ. ಅನರ್ಹಗೊಂಡ ಬಳಿಕ‌ ಕಾರ್ಯಕರ್ತರ ಮುಂದೆ ಹಲವು ಬಾರಿ ಮುಖಭಂಗ ಅನುಭವಿಸಿದ್ದ ಶ್ರೀಮಂತ ಪಾಟೀಲ್​​ ಅವರ ಪಾಲಿಗೆ ಚುನಾವಣೆ ಘೋಷಣೆ ಆಗಿರುವುದು ನುಂಗಲಾರದ ತುತ್ತಾಗಿದೆ.

ಅನರ್ಹ ಶಾಸಕರ ಈ ಸ್ಥಿತಿಯ ಲಾಭ ಪಡೆಯಲು ಮಾಜಿ ಶಾಸಕ ರಾಜು ಕಾಗೆ ಮತ್ತೆ ಹಿಡಿತ ಸಾಧಿಸಲು ಸನ್ನದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಬಿಡುವಿಲ್ಲದಂತೆ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಅವರು ಪ್ರತಿಯೊಂದು ಹಳ್ಳಿಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಿದ್ದು, ಸ್ಪರ್ಧೆಗೆ ತಾವು ಸಿದ್ದ ಎಂಬ ಸಂದೇಶ ರವಾನಿಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಮತ್ತೊಂದು ಸುತ್ತಿನ ಮಿನಿ ಸಮರಕ್ಕೆ ಕಾಗವಾಡ ಸಜ್ಜಾಗಿದೆ. ಆದರೆ ರಾಜು ಕಾಗೆ ಯಾವ ಪಕ್ಷದಿಂದ ಸ್ಪರ್ದಿಸುತ್ತಾರೆ ಅವರ ಎದುರಾಳಿಗಳು ಯಾರು ಎಂಬುವುದು ಈಗ ಪ್ರಶ್ನೆಯಾಗಿ ಉಳಿದಿದೆ.

Intro:ಚುನಾವಣೆ ಘೋಷಣೆ : ಅಖಾಡಕ್ಕೆ ತಯಾರಿ ನಡೆಸಿದ ಮಾಜಿ ಶಾಸಕ ರಾಜು ಕಾಗೆBody:

ಚಿಕ್ಕೋಡಿ :

ರಾಜ್ಯದ ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆಯೇ ಕಾಗವಾಡ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟೆಕೆಗಳು ಗರಿಗೇದರಿವೆ. ತೀವ್ರ ಕುತುಹಲ ಕೆರಳಿಸಿರುವ ಈ ಕ್ಷೇತ್ರದ ಮಾಜಿ ಶಾಶಕ ರಾಜು ಕಾಗೆ ಅಖಾಡಕ್ಕೆ ಇಳಿಯಲು ತಯಾರಿ‌ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಏಕೆಂದರೆ ಉಪಚುನಾವಣೆ ಘೋಷಣೆಯಾದರೂ ಸಹ ಇಲ್ಲಿ ಯಾರು ಯಾವ ಪಕ್ಷದಿಂದ ಅಭ್ಯರ್ಥಿಗಳಾಗುತ್ತಾರೆ ಎಂಬ ಗೊಂದಲ, ಚರ್ಚೆ ಜನರು ಹಾಗೂ ಕಾರ್ಯಕರ್ತರಲ್ಲಿ ಕಂಡು ಬರುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಂಡಿರುವ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರ ಪ್ರಕರಣ ಸುಪ್ರಿಂ ಕೋರ್ಟಿನಲ್ಲಿದೆ. ಕಾಂಗ್ರಸ್‍ನಿಂದ ಉಚ್ಚಾಟನೆಗೊಂಡು ಅನರ್ಹಗೊಂಡಿರುವದರಿಂದ ಮತ್ತೇ ಕಾಂಗ್ರಸ್ ಅಭ್ಯರ್ಥಿ ಆಗುವ ಅವಕಾಶ ಕ್ಷೀಣವಾಗಿದೆ.

ಈಗಾಗಲೇ ಚುನಾವಣೆ ಆಯೋಗ ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧೀಸಲು ಅವಕಾಶ ನೀಡಿಲ್ಲ ಅದಕ್ಕಾಗಿ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಪಾಟೀಲ ಬಿಜೆಪಿ ಮನೆ ಹಾಕಿದರೆ ಟಿಕೇಟ್ ಗ್ಯಾರಂಟಿ. ಆದರೆ, ಇತ್ತ ರಾಜು ಕಾಗೆಯವರನ್ನು  ಪಕ್ಷ ಕೈ ಬಿಡಲಿಕ್ಕಿಲ್ಲ ಎಂಬ ಮಾತು ಮತಕ್ಷೇತ್ರದ ಮತದಾರರಿಂದ ಕೇಳಿ ಬರುತ್ತಿದೆ.

ಕಾಗವಾಡ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳ ಮದ್ಯೆಯೇ ದಿನಾಂಕ ನಿಗದಿಯಾಗಿದೆ. ಅಭ್ಯರ್ಥಿಗಳು ಯಾರು ಯಾವ ಪಕ್ಷ ಎಂಬುದು ನಿರ್ದಾರವಾಗುವ ಮೊದಲೇ ಚುನಾವಣೆ ದಿನಾಂಕ ಘೋಷಣೆ ಆಗಿರುವುದು ಇನ್ನಷ್ಟು ಕುತುಹಲ ಕೆರಳಿಸಿದೆ.

ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶ್ರೀಮಂತ ಪಾಟೀಲರ ಸ್ಥಿತಿ ಅತಂತ್ರವಾಗಿದ್ದು, ಸುಪ್ರಿಂಕೋರ್ಟನಲ್ಲಿ ಕೇಶ್ ಬಾಕಿ ಇರುವದರಿಂದ ಜನರಿಗೆ ಮುಖ ತೋರಿಸದಂತ ಸ್ಥಿತಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಅನರ್ಹವಾದ ಬಳಿಕ‌ ಹಲವಾರು ಬಾರಿ ಕಾರ್ಯಕರ್ತರು ಮುಖಭಂಗ ಮಾಡಿದ್ದು ಕ್ಷೇತ್ರದಲ್ಲಿ ನಡೆದಿದೆ. ಈ ಮದ್ಯೆ ಈ ಚುನಾವಣೆ ಘೋಷಣೆ ಆಗಿರುವುದು ಶ್ರೀಮಂತ ಪಾಟೀಲರ ಪಾಲಿಗೆ ನುಂಗಲಾರದಂತಾ ತುತ್ತಾಗಿದೆ.

ಅನರ್ಹ ಶಾಸಕರ ಈ ಸ್ಥಿತಿಯ ಲಾಭ ಪಡೆಯಲು ಮಾಜಿ ಶಾಸಕ ರಾಜು ಕಾಗೆ ಮತ್ತೇ ಹಿಡಿತ ಸಾಧಿಸಲು ಸನ್ನದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಬಿಡುವಿಲ್ಲದಂತೆ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಅವರು ಪ್ರತಿಯೊಂದು ಹಳ್ಳಿಯ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಿರುವ ರಾಜು ಕಾಗೆ ಚುನಾವಣೆ ಸ್ಪರ್ಧೆಗೆ ತಾವು ಸಿದ್ದ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಮತ್ತೊಂದು ಸುತ್ತಿನ ಮಿನಿ ಸಮರಕ್ಕೆ ಕಾಗವಾಡ ಸಜ್ಜಾಗಿದೆ. ಆದರೆ ರಾಜು ಕಾಗೆ ಯಾವ ಪಕ್ಷದಿಂದ ಸ್ಪರ್ದಿಸುತ್ತಾರೆ ಅವರ ಎದುರಾಳಿಗಳು ಯಾರು ಎಂಬುವುದು ಈಗ ಪ್ರಶ್ನೆಯಾಗಿ ಉಳದಿದೆ.

ಪೋಟೋ 1 : ರಾಜು ಕಾಗೆ - ಮಾಜಿ ಶಾಸಕರು

ಪೋಟೋ 2 : ಶ್ರೀಮಂತ ಪಾಟೀಲ - ಅನರ್ಹ ಶಾಸಕ
 
Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.