ETV Bharat / state

ಸವದಿಗೆ ಟಿಕೆಟ್ ಕೊಟ್ಟರೆ, ನನಗೂ ಕೊಡಲೇಬೇಕು: ರಾಜು ಕಾಗೆ ಪಟ್ಟು

ಒಂದು ವೇಳೆ ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಗೆ ಟಿಕೆಟ್ ಕೊಟ್ಟರೆ ನನಗೂ ಸಹ ಟಿಕೆಟ್ ನೀಡಲೇ ಬೇಕು ಎಂದು ರಾಜು ಕಾಗೆ ಪಟ್ಟು ಹಿಡಿದಿದ್ದಾರೆ.

ರಾಜು ಕಾಗೆ
author img

By

Published : Sep 24, 2019, 8:31 PM IST

ಚಿಕ್ಕೋಡಿ : ಒಂದು ವೇಳೆ ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಗೆ ಟಿಕೆಟ್ ಕೊಟ್ಟರೆ ನನಗೂ ಸಹ ಟಿಕೆಟ್ ನೀಡಲೇ ಬೇಕು ಎಂದು ರಾಜು ಕಾಗೆ ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಬಳಿ ಶಿವಣಗಿ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ರಾಜು ಕಾಗೆ, ನನಗೆ ಪಕ್ಷ ಬೇಡ ಎಂದರೆ ನಾನು ಸ್ಪರ್ಧಿಸುವುದಿಲ್ಲ. ನಾನು ಲಕ್ಷ್ಮಣ ಸವದಿ ಅವರು ತ್ಯಾಗ ಮಾಡುತ್ತೇವೆ. ಒಂದು ವೇಳೆ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್​ ನೀಡಿದರೆ ಬಿಜೆಪಿ ಪಕ್ಷ ತನ್ನ ಎರಡು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ನಾನು ಇಂದು ಬೆಂಗಳೂರಿಗೆ ಹೋರಟ್ಟಿದ್ದೇನೆ. ಒಂದು ವೇಳೆ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಿದರೆ, ನನಗೂ ಸಹ ಟಿಕೇಟ್ ನೀಡಬೇಕು. ನನಗೇಕೆ ಮಲತಾಯಿ ಧೋರಣೆ ತೋರುತ್ತಾರೆ. ನಮ್ಮ ಬೇಡಿಕೆ ಒಂದೇ ಅಥಣಿಯಲ್ಲಿ ಲಕ್ಷ್ಮಣ ಸವದಿ ಅವರಿಗೆ ನೀಡಿದರೆ ನನಗೂ ಟಿಕೆಟ್​ ನೀಡಬೇಕು ಎಂದು ತಿಳಿಸಿದರು.

ಲಕ್ಷ್ಮಣ ಸವದಿಗೆ ಟಿಕೆಟ್ ಕೊಟ್ಟರೆ, ನನಗೂ ಕೊಡಲೇಬೇಕು

ಶ್ರೀಮಂತ ಪಾಟೀಲ್ ಪಕ್ಷ ಬಿಟ್ಟು ಬಂದ್ರಲ್ಲ. ನಾನು ಯಾವ‌ ಮಠದ ಸ್ವಾಮೀಜಿ ಅಲ್ಲ. ಬ್ರಹ್ಮಚಾರಿಯೂ ಅಲ್ಲ. ರಾಷ್ಟ್ರೀಯ ನಾಯಕರು ಅನರ್ಹರಿಗೆ ಟಿಕೆಟ್ ಕೊಡಬೇಕು ಎನ್ನುವ ವಿಚಾರದಲ್ಲಿದ್ದಾರೆ. ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿದರೆ ನಾನು ಸಹ ತ್ಯಾಗ ಮಾಡಲು ಸಿದ್ದನಿದ್ದೇನೆ. ಆದರೆ ಇವತ್ತಿನ ಸನ್ನಿವೇಶದಲ್ಲಿ ಅವರಿಗೆ ಟಿಕೆಟ್ ಕೊಟ್ಟರೆ 2 ಸೀಟ್ ಕಳೆದುಕೊಳ್ಳುತ್ತೇವೆ ಎಂದರು.

ಬೆಂಗಳೂರು ಪ್ರಯಾಣ ಬೆಳಸಿದ ರಾಜು ಕಾಗೆ :

ಕಾಗವಾಡ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ ರಾಜು ಕಾಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿ ಎಂದು ಪಕ್ಷದ ವರಿಷ್ಠರಿಗೆ ಒತ್ತಾಯಿಸಲಿದ್ದಾರೆ.

Intro:ಅಥಣಿಗೆ ಲಕ್ಷ್ಮಣ ಸವದಿಗೆ ಟಿಕೇಟ್ ಕೊಟ್ಟರೆ ನನಗೂ ಸಹ ಟಿಕೇಟ್ ಕೊಡಲೆಬೇಕು : ರಾಜು ಕಾಗೆBody:

ಚಿಕ್ಕೋಡಿ :

ಒಂದು ವೇಳೆ ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಗೆ ಟಿಕೇಟ್ ಕೊಟ್ಟರೆ ನನಗೂ ಸಹ ಟಿಕೇಟ್ ನೀಡಲೇ ಬೇಕು ಎಂದು ರಾಜು ಕಾಗೆ ಮಾಧ್ಯಮದರಿಗೆ ಪ್ರತಿಕ್ರಿಯೆ‌ ನೀಡಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಬಳಿ ಶಿವಣಗಿ ಸಮುದಾಯ ಭವನದಲ್ಲಿ ಕಾರ್ಯಕರ್ತರ ನಡೆದ ಸಭೆಯ ಬಳಿಕ ಮಾಧ್ಯಮದರಿಗೆ ಪ್ರತಿಕ್ರಿಯೆ‌ ನೀಡಿದ ಅವರು, ನನಗೆ ಪಕ್ಷ ಬೇಡ ಎಂದರೆ ನಾನು ಸ್ಪರ್ಧಿಸುವುದಿಲ್ಲ ನಾನು ಲಕ್ಷ್ಮಣ ಸವದಿ ಅವರು ತ್ಯಾಗ ಮಾಡುತ್ತೇವೆ.

ಒಂದು ವೇಳೆ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಅವರಿಗೆ ಟಿಕೇಟ ನೀಡಿದರೆ. ಬಿಜೆಪಿ ಪಕ್ಷ ತನ್ನ ಎರಡು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ನಾನು ಇಂದು ಬೆಂಗಳೂರಿಗೆ ಹೋರಟ್ಟಿದ್ದೇನೆ.

ಒಂದು ವೇಳೆ ಲಕ್ಷ್ಮಣ ಸವದಿ ಅವರಿಗೆ ಟಿಕೇಟ್ ನೀಡಿದರೆ ನನಗೂ ಸಹ ಟಿಕೇಟ್ ನೀಡಬೇಕು ನನಗೆಕ್ಕೆ ಮಲತಾಯಿ ಧೋರಣೆ ತೋರುತ್ತಾರೆ ನಮ್ಮ ಬೇಡಿಕೆ ಒಂದೇ ಅಥಣಿಯಲ್ಲಿ ಲಕ್ಷ್ಮಣ ಸವದಿ ಅವರಿಗೆ ನೀಡಿದರೆ ನನಗೂ ಟಿಕೇಟ್ ನೀಡಬೇಕು ನನ್ನ ಬೇಡಿಕೆ ಕೂಡಾ ಇದೆ ಎಂದು ಹೇಳಿದರು

ಶ್ರೀಮಂತ ಪಾಟೀಲ್ ಪಕ್ಷ ಬಿಟ್ಟು ಬಂದ್ರಲ್ಲ, ನಾನು ಯಾವ‌ ಮಠದ ಸ್ವಾಮೀಜಿ ಅಲ್ಲ ಬ್ರಹ್ಮಚಾರಿಯೂ ಅಲ್ಲ, ರಾಷ್ಟ್ರೀಯ ನಾಯಕರು ಅನರ್ಹರಿಗೆ ಟಿಕೇಟ್ ಕೊಡಬೇಕು ಎನ್ನುವ ವಿಚಾರದಲ್ಲದ್ದಾರೆ, ಅವರಿಗೆ ಟಿಕೇಟ್ ಕೊಡಲು ನಿರ್ಧರಿಸಿದರೆ ನಾನು ಸಹ ತ್ಯಾಗ ಮಾಡಲು ಸಿದ್ದನಿದ್ದೆನೆ, ಆದರೆ ಇವತ್ತಿನ ಸನ್ನಿವೇಶದಲ್ಲಿ ಅವರಿಗೆ ಟಿಕೇಟ್ ಕೊಟ್ಟರೆ ಎರಡು ಸೀಟ್ ಕಳೆದುಕೊಳ್ಳುತ್ತೆವೆ,

ಕಾಂಗ್ರೇಸ್ ಆಹ್ವಾನ‌ ನೀಡಿದರೆ ಕಾಂಗ್ರೇಸ್ಗೆ ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲು ಕಾಗೆ ನಕಾರ, ಶ್ರೀಮಂತ ಪಾಟೀಲ್ ಮೋದಿ ಅಮೀತ್ ಷಾ ಗೆ ಬಂದಿದ್ದಾರೆ ಈಗ ಅವರು ಇವರಿಗೆ ಹೇಗೆ ಟಿಕೇಟ್ ಕೊಡ್ತಾರೆ ನೋಡೊಣ ಎಂದು ರಾಜು ಕಾಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.