ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಗೆ ಗೋಡೆಯೊಂದು ಕಾರಿನ ಮೇಲೆ ಕುಸಿದ ಘಟನೆ ಬೆಳಗಾವಿ ನಗರದ ಬಸವಣ ಗಲ್ಲಿಯಲ್ಲಿ ನಡೆದಿದೆ.
ಕಳೆದೆರಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಶಿಥಿಲಗೊಂಡಿರುವ ಮನೆಯ ಗೋಡೆಗಳು ನೆಲಕ್ಕುರಳುತ್ತಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಗೋಡೆ ಕುಸಿದು ಬಿದ್ದು ಕಾರು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾರಿ ಮಳೆಗೆ ಬೆಳಗಾವಿ ತಾಲೂಕಿನ ಎಲ್ಲ ಹಳ್ಳಗಳು ಭರ್ತಿಯಾಗಿವೆ.
ಮಂಡೋಳಿ - ಬೆಳಗಾವಿ ಮಾರ್ಗಮಧ್ಯದ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.