ಬೆಳಗಾವಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗ ಅಥಣಿಯಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ ನಡೆಯಿತು. ಈ ವೇಳೆ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದ್ರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡುತ್ತಾ, ಈ ಹಿಂದೆ ಅಥಣಿ ಭಾಗದಲ್ಲಿ ಬರಡು ಭೂಮಿ ಕಾಣಸಿಗುತ್ತಿತ್ತು. ಆದರೆ ಲಕ್ಷ್ಮಣ ಸವದಿಯವರು ಶಾಸಕರಾಗಿ ಬಳಿಕ ಮಂತ್ರಿಗಳಾದ ಮೇಲೆ ಕೃಷ್ಣಾ ನದಿಯಿಂದ ಕೆನಾಲ್ ಸಿಸ್ಟಮ್ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸಿದರು. ಸದ್ಯ ಡಿಸಿಎಂ ಸ್ಥಾನದಲ್ಲಿರುವ ಸವದಿಯವರು ಇನ್ನೂ ಮೂರೂವರೆ ವರ್ಷ ಮುಂದುವರೆಯಬೇಕು. ಆ ಕಾರಣ ಉಪಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.