ETV Bharat / state

ತಗ್ಗಿದ ಕೃಷ್ಣೆಯ ಅಬ್ಬರ : ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತ - flood in krishna river

ಮಹಾರಾಷ್ಟ್ರದಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ.

ಕುಡಚಿ ಸೇತುವೆ
author img

By

Published : Sep 15, 2019, 5:02 AM IST

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ರಾಜ್ಯದಲ್ಲಿನ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಮಹಾರಾಷ್ಟ್ರದಿಂದ ವೇದಗಂಗಾ ಮತ್ತು ದೂಧಗಂಗಾ ನದಿಗಳ ಮೂಲಕ 12,360 ಕ್ಯೂಸೆಕ್​ ಮತ್ತು ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 65,250 ಕ್ಯೂಸೆಕ್ ಸೇರಿ ಒಟ್ಟು 77,570 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಕಲ್ಲೋಳ ಬಳಿ ಹರಿದು ಬರುತ್ತಿದೆ. ಕುಡಚಿ ಸೇತುವೆಯ ಚಿಂಚಲಿ-ರಾಯಬಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಚಾರಕ್ಕೆ ಮುಕ್ತವಾಗಿವೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಜಲಾವೃತ್ತಗೊಂಡಿರುವ ಎಲ್ಲ ಸೇತುವೆಗಳು ಹಾಗೂ ರಸ್ತೆಗಳು ಭಾನುವಾರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತ

ನಿಪ್ಪಾಣಿ ತಾಲೂಕಿನ 4 ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ–ಭೀವಶಿ ಮತ್ತು ಭೋಜವಾಡಿ–ಕುನ್ನೂರ ಸೇತುವೆಗಳು ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ–ಭೋಜ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿವೆ.

Intro:ಶಾಂತವಾದ ಕೃಷ್ಣಾ ನದಿ ತೀರ : ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತBody:

ಚಿಕ್ಕೋಡಿ : 

ಮಹಾರಾಷ್ಟ್ರದಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಎಲ್ಲ ನದಿಗಳ ನೀರಿನ ಮಟ್ಟ ಮತ್ತಷ್ಟು ಇಳಿದಿದ್ದು ನದಿ ತೀರದ ಜನರಲ್ಲಿ ಮಂದಹಾಸ ಮೂಡಿದೆ. 

ಮಹಾರಾಷ್ಟ್ರದಿಂದ ವೇದಗಂಗಾ ಮತ್ತು ದೂಧಗಂಗಾ ನದಿಗಳ ಮೂಲಕ 12,360 ಕ್ಯುಸೆಕ್‌ ಮತ್ತು ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 65,250 ಕ್ಯುಸೆಕ್‌ ಸೇರಿ ಒಟ್ಟು 77,570 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಕಲ್ಲೋಳ ಬಳಿ ಹರಿದು ಬರುತ್ತಿದೆ.

ಕುಡಚಿ ಸೇತುವೆ, ಚಿಂಚಲಿ-ರಾಯಬಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಚಾರಕ್ಕೆ ಮುಕ್ತವಾಗಿವೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಜಲಾವೃತ್ತಗೊಂಡಿರುವ ಎಲ್ಲ ಸೇತುವೆಗಳು ಹಾಗೂ ರಸ್ತೆಗಳು ರವಿವಾರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. 

ನಿಪ್ಪಾಣಿ ತಾಲ್ಲೂಕಿನ ನಾಲ್ಕೂ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ–ಭೀವಶಿ ಮತ್ತು ಭೋಜವಾಡಿ–ಕುನ್ನೂರ ಸೇತುವೆಗಳು ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ–ಭೋಜ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿವೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.