ETV Bharat / state

ಪಿಯುಸಿ‌ ಕಲಾ ವಿಭಾಗದಲ್ಲಿ ರೈತನ ಮಗಳಿಗೆ 3ನೇ ರ‍್ಯಾಂಕ್‌ - ವಿಜಯಪುರ ಜಿಲ್ಲೆಗೆ ಟಾಪರ್​ ಆದ ಬಡ ವಿದ್ಯಾರ್ಥಿ

ರೈತಾಪಿ‌ ಕುಟುಂಬದ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 591 ಅಂಕ ಗಳಿಸಿದ್ದಾರೆ.

farmer-daughter-got-state-3rd-rank-in-arts
ಪಿಯುಸಿ‌ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದ ರೈತನ ಮಗಳು..
author img

By

Published : Apr 21, 2023, 6:33 PM IST

ಬೆಳಗಾವಿ: ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದ ಕೃಷಿ ಕುಟುಂಬದ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು 600ಕ್ಕೆ 591 ಅಂಕ ಗಳಿಸಿದ್ದಾರೆ. ಈ ಸಾಧಕಿಯ ಹೆಸರು ಸಹನಾ ಉಳವಪ್ಪ ಕಡಕೋಳ.

ಇವರು ಎಸ್ಸೆಸ್ಸೆಲ್ಸಿಯಲ್ಲಿ ಶೇ 98.56ರಷ್ಟು ಅಂಕ ಪಡೆದಿದ್ದರು. ಇದೀಗ ಪಿಯುಸಿಯಲ್ಲಿ ಶೇ.98.5ರಷ್ಟು ಅಂಕ‌ ಗಳಿಸಿದ್ದಾರೆ. ತಂದೆ ಉಳವಪ್ಪ, ತಾಯಿ‌ ಪುಷ್ಪಾ ಸಂತಸ ವ್ಯಕ್ತಪಡಿಸಿ, ಮಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಸಹನಾ, "ತುಂಬಾ ಖುಷಿಯಾಗುತ್ತಿದೆ. ನಾನು ರಾಜ್ಯಕ್ಕೆ ಮೊದಲ‌ ರ‍್ಯಾಂಕ್‌ ಬರಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಆದರೆ ನಾಲ್ಕು ಅಂಕಗಳಿಂದ ತಪ್ಪಿತು. ಬೆಳಗ್ಗೆ 4ರಿಂದ 8 ಗಂಟೆಯವರೆಗೆ ಓದುತ್ತಿದ್ದೆ. ಕಾಲೇಜು ಮುಗಿಸಿ ಬಂದು 10 ತಾಸು ಓದುತ್ತಿದ್ದೆ. ಕುಟುಂಬಸ್ಥರು, ಉಪನ್ಯಾಸಕರಿಗೆ ಅಂಕಗಳನ್ನು ಅರ್ಪಿಸುತ್ತೇನೆ. ಬಿಎ ಮಾಡಿ, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತೇನೆ" ಎಂದರು.

ಬೈಲಹೊಂಗಲ‌ ಸರ್ಕಾರಿ‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ‌ಯಾಗಿರುವ ಸಹನಾರನ್ನು ಕಾಲೇಜಿಗೆ ಕರೆಸಿದ ಅಧ್ಯಾಪಕ ವೃಂದ, ಸತ್ಕರಿಸಿ ಗೌರವಿಸಿದೆ. ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಸಹನಾ ಸತತ ನಾಲ್ಕು ವರ್ಷ 12 ಸಾವಿರ ರೂ ಸ್ಕಾಲರ್‌ಶಿಪ್‌ ಪಡೆದಿದ್ದರು. ಸಹೋದರ ಶಿವಬಸಪ್ಪ ಪದವಿ ಶಿಕ್ಷಣ ಪಡೆದಿದ್ದಾರೆ. ಸತತ ಪರಿಶ್ರಮ, ಓದಲೇಬೇಕೆಂಬ ಛಲ ಇದ್ದುದರಿಂದ‌ ಸಹನಾ ತಮ್ಮ ಸಾಧನೆ ಮುಖಾಂತರ ಇಂದು ರಾಜ್ಯದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಯೇ 600ಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕೊಡಗಿನ ಕುವರಿ ಅನನ್ಯ

ಬಡ ವಿದ್ಯಾರ್ಥಿ ಟಾಪರ್: ವಿಜಯಪುರ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ರಾಹುಲ್ ರಾಠೋಡ ಎಂಬ ವಿದ್ಯಾರ್ಥಿ ಜಿಲ್ಲೆಗೆ ಟಾಪರ್ ಆಗಿದ್ದಾರೆ. ತಾಳಿಕೋಟೆಯ ಎಸ್‌ಕೆಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ರಾಹುಲ್ 600 ಅಂಕಗಳಿಗೆ 592 ಅಂಕಗಳಿಸಿದ್ದಾರೆ. ರಾಹುಲ್ ರಾಠೋಡ ಬಡತನದಲ್ಲಿ ಅರಳಿರುವ ಪ್ರತಿಭೆ. ತಂದೆ, ತಾಯಿ ದುಡಿಯಲು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.

ತಂದೆ ಮೂತಿಲಾಲ್ ರಾಠೋಡ, ತಾಯಿ ಸವಿತಾ ದಂಪತಿಗೆ ರಾಹುಲ್ ಸೇರಿ ಮೂವರು ಮಕ್ಕಳಿದ್ದಾರೆ. ಪ್ರಸ್ತುತ ಪೋಷಕರು ಮಹಾರಾಷ್ಟ್ರದಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.