ETV Bharat / state

ನೆರೆ ಪರಿಹಾರಕ್ಕೆ ಆಗ್ರಹಿಸಿ 4ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ.. - ಅಥಣಿ ಉಪವಾಸ ಸತ್ಯಾಗ್ರಹ

ನೆರೆ ಪರಿಹಾರದಲ್ಲಿ ಜಿಲ್ಲಾಡಳಿತದ ತಾರತಮ್ಯ ಹೋಗಲಾಡಿಸುವುದು, ಪುನರ್ವಸತಿ ಹಾಗೂ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಪ್ರತಿಭಟನಾಕಾರರಿಗೆ ನೀರು ಕುಡಿಸುವ ಮುಖಾಂತರ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

ನೆರೆ ಪರಿಹಾರಕ್ಕೆ ಆಗ್ರಹಿಸಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಭೇಟಿ
author img

By

Published : Nov 3, 2019, 10:16 AM IST

ಅಥಣಿ: ನೆರೆ ವಿಷಯದಲ್ಲಿ ಜಿಲ್ಲಾಡಳಿತದ ತಾರತಮ್ಯ ನಿವಾರಣೆ, ಪುನರ್ವಸತಿ, ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಉಪವಾಸ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಅವರು ಪ್ರತಿಭಟನಕಾರರಿಗೆ ನೀರು ಕುಡಿಸುವ ಮುಖಾಂತರ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಜಿಲ್ಲಾಧಿಕಾರಿ ಮನವಿ..

ಹಿಪ್ಪರಗಿ ಅಣೆಕಟ್ಟೆಯ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ನೂರಾರು ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ, ಜಿಲ್ಲೆಯ ಅಥಣಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ನೆರೆ ಸಂತ್ರಸ್ತರಿಗೆ ಮಾಡ್ತಿರುವ ತಾರತಮ್ಯ ವಿರೋಧಿಸಿ ಹೋರಾಟಗಾರರು ನಡೆಸುತ್ತಿರುವ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿತು.

ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬರುವವರಿಗೆ ನಾವು ಉಪವಾಸ ಸತ್ಯಾಗ್ರಹ ಮುಂದೂಡುತ್ತೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು. ಸಮಾಧಾನದಿಂದ ನೆರೆ ಸಂತ್ರಸ್ತರ ಗೋಳನ್ನು ಆಲಿಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರ ಹಲವು ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ಮುಖ್ಯ ಉದ್ದೇಶ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಕೊಡಬೇಕು, ಯಾರು ನಿರ್ಣಾಯಕರಾಗಿ ಉಳಿಯಬಾರದು ಎಂಬುದೇ ಆಗಿದೆ ಎಂದರು.

ಸರ್ಕಾರ ಎಲ್ಲಾ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಆದಷ್ಟು ಬೇಗ ಪರಿಹಾರ ನೀಡುತ್ತೇವೆ. ₹10,000 ತುರ್ತು ಹಣ ಕೆಲವರಿಗೆ ದೊರೆತಿಲ್ಲ. ಬ್ಯಾಂಕ್ ಖಾತೆಗಳ ಸರಿಯಾದ ದಾಖಲಾತಿ ಇಲ್ಲದೆ ಸಮಸ್ಯೆಯಾಗಿದೆ. ಎರಡು ದಿನಗಳಲ್ಲಿ ₹10,000 ಎಲ್ಲರಿಗೂ ಸಂಪೂರ್ಣವಾಗಿ ನೀಡುತ್ತೇವೆ. ಮನೆಗಳ ಸರ್ವೆ ಮಾಡುವಾಗ ಎ,ಬಿ,ಸಿ ವರ್ಗ ಏನೋ ಲೋಪದೋಷವಾಗಿದೆ. ಅದನ್ನು ಕೂಡ ಈ ವಾರದಲ್ಲಿ ಸಂಪೂರ್ಣವಾಗಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಬೆಳೆ ಪರಿಹಾರ: ನೆರೆಯಿಂದ ಏನು ಬೆಳೆ ಹಾಳಾಗಿದೆ. ಇನ್ನೂ ಮೂರು ದಿನಗಳಲ್ಲಿ ತಂತ್ರಾಂಶದಲ್ಲಿ ದಾಖಲೆ ಕಾರ್ಯ ಮುಗಿಯುತ್ತೆ. ಜಿಲ್ಲೆಯಲ್ಲಿ 4 ಕೋಟಿ ರೂಪಾಯಿ ಜಮಾ ಆಗಿದೆ. ಇಂದು 3000 ರೈತರ ಖಾತೆಗೆ ಹಣ ಸಂದಾಯ ಮಾಡಿದ್ದೇವೆ. ಇನ್ನು, 7 ದಿನಗಳಲ್ಲಿ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಸಂದಾಯವಾಗುತ್ತದೆ ಎಂದು ಭರವಸೆ ನೀಡಿದರು.

Intro:ನೆರೆ ವಿಷಯದಲ್ಲಿ ಜಿಲ್ಲಾಡಳಿತ ತಾರತಮ್ಯ ಹಾಗೂ ಪುನರ್ವಸತಿ ಶಾಶ್ವತ ಪರಿಹಾರಕ್ಕಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹಕ್ಕೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ
ಕೈಬಿಡುವಂತೆ ಮನವಿ ಮಾಡಿ ಪ್ರತಿಭಟನಕಾರರಿಗೆ ನೀರು ಕುಡಿಸುವ ಮುಖಾಂತರ ಪ್ರತಿಭಟನೆ ಕೈಬಿಟ್ಟರು.....
Body:ಅಥಣಿ:

*ನೆರೆ ವಿಷಯದಲ್ಲಿ ಜಿಲ್ಲಾಡಳಿತ ತಾರತಮ್ಯ ಹಾಗೂ ಪುನರ್ವಸತಿ ಶಾಶ್ವತ ಪರಿಹಾರಕ್ಕಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ*

ಹಿಪ್ಪರಗಿ ಆಣೆಕಟ್ಟೆಯ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ನೂರಾರು ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಜಿಲ್ಲೆಯ ಅಥಣಿ ತಾಲೂಕಿನ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ, ಹಾಗೂ ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ತಾರತಮ್ಯ ವಿರೋಧಿಸಿ ಹೋರಾಟಗಾರರು ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು,

ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬರುವರಿಗೆ ನಾವು ಉಪವಾಸ ಸತ್ಯಾಗ್ರಹ ಮುಂದೂಡುತ್ತೇವೆ.
ಶಾಶ್ವತ ಪರಿಹಾರ ಕಂಡುಕೊಳ್ಳುವರಿಗು ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ್ದ ಪ್ರತಿಭಟನೆ ಕಾರರು.
ಇಂದು ಪ್ರತಿಭಟನೆ ಕಾರರ ತೀವ್ರ ಪ್ರತಿಭಟನೆಗೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಅಥಣಿಯ ತಾಲೂಕು ಆಡಳಿತ ಮುಂಭಾಗದಲ್ಲಿ ಏನು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿನೀಡಿದರು.

ಸರಿ ಸುಮಾರು ೮:೩೫ ಗಂಟೆಗೆ ಬಂದ ಜಿಲ್ಲಾ ಅಧಿಕಾ ಬೊಮ್ಮನಹಳ್ಳಿ ಅವರಿಗೆ ಪ್ರತಿಭಟನಾಕಾರರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು, ಸಮಾಧಾನದಿಂದ ನೆರೆ ಸಂತ್ರಸ್ತರ ಗೋಳನ್ನು ಆಲಿಸಿದ ಜಿಲ್ಲಾಧಿಕಾರಿ ನಂತರವಾಗಿ ಮಾತನಾಡಿದ ಅವರು ನೆರೆ ಸಂತ್ರಸ್ತರ ಹಲವು ಬೇಡಿಕೆ ನನ್ನ ಗಮನಕ್ಕೆ ಬಂದಿದೆ ,ಸರ್ಕಾರ ಮುಖ್ಯ ಉದ್ದೇಶ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಕೊಡಬೇಕು ಯಾರು ನಿರ್ಣಾಯಕರಾಗಿ ಉಳಿಯಬಾರದು ಸರ್ಕಾರ ಅವರಿಗೆ ಆಶ್ರಯವಾಗಿ ಉಳಿಯಬೇಕು ಎಂದು ಸರ್ಕಾರ ಉದ್ದೇಶವಿದೆ.

ಸರ್ಕಾರ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವಿದೆ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡುತ್ತೇವೆ, ಹಾಗೂ ಇನ್ನು ಹತ್ತು ಸಾವಿರ ತುರ್ತು ಹಣ ಕೆಲವರಿಗೆ ದೊರೆತಿಲ್ಲ ಬ್ಯಾಂಕ್ ಖಾತೆಗಳ ಸರಿಯಾದ ದಾಖಲಾತಿ ಇಲ್ಲದೆ ಸಮಸ್ಯೆಯಾಗಿದೆ, ಎರಡು ದಿನಗಳಲ್ಲಿ 10000 ಎಲ್ಲರಿಗೂ ಸಂಪೂರ್ಣವಾಗಿ ನೀಡುತ್ತೇವೆ ಎಂದು ಹೇಳಿದರು.

ಮನೆಗಳ ಸರ್ವೆ ಮಾಡುವಾಗ ಲೋಪದೋಷಗಳು ಎ,ಬಿ,ಸಿ ವರ್ಗ ಏನೋ ಲೋಪದೋಷ ವಾಗಿದೆ ಅದನ್ನು ಕೂಡ ಈ ವಾರದಲ್ಲಿ ಸಂಪೂರ್ಣವಾಗಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಮಾನ್ಯ ಮುಖ್ಯಮಂತ್ರಿಗಳಾದ ನಿರ್ದೇಶನದಂತೆ ಎ,ಬಿ ಕೆಟಗೇರಿ ಎರಡನ್ನೂ ಒಂದೇ ಗುಡಿಸಿ ಎರಡು ಒಂದೇ ಪರಿಹಾರ ಕೊಡಬೇಕೆಂದು ಸರ್ಕಾರದ ಆದೇಶ ಜಾರಿಯಾಗಿದೆ

ಮನೆಗಳ ಸರ್ವೆಯಲ್ಲಿ ಕೆಲವೊಂದು ಲೋಪದೋಷಗಳು ನನ್ನ ಗಮನಕ್ಕೆ ಬಂದಿದೆ ಹಾಗಾಗಿ ಹಳೆ ಸರ್ವೆಯನ್ನು ಸಂಪೂರ್ಣ ನಾವು ತಟಸ್ಥ ಮಾಡಿ ನಾಳೆಯಿಂದಲೇ ಹೊಸ ಸರ್ವೆ ಮಾಡಲು ಜಿಲ್ಲಾಮಟ್ಟದ ತಂಡ ರಚನೆ ಮಾಡಿ ಪೂರ್ಣ ಸರ್ವೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಏನು ಹಿಪ್ಪರಗಿ ಅಣೆಕಟ್ಟಿನ ಹಿನ್ನೀರು ನಿಂದ ಗ್ರಾಮಗಳಿಗೆ ಪುನರ್ವಸತಿ ಒದಗಿಸಲು ಕರ್ನಾಟಕ ನೀರಾವರಿ ನಿಗಮದ ಜೊತೆ ನಾನು ಸಭೆ ನಡೆಸಿ ಮುಂದಿನ 15 ದಿನಗಳಲ್ಲಿ ಪೂರ್ಣ ಮಾಹಿತಿ ಜೊತೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಬೆಳೆ ಪರಿಹಾರ: ನೆರೆ ನೆರೆಯಿಂದ ಏನು ಬೆಳೆ ಹಾಳಾಗಿದೆ, ಇನ್ನು ಮೂರು ದಿನಗಳಲ್ಲಿ ತಂತ್ರಾಂಶದಲ್ಲಿ ದಾಖಲೆ ಕಾರ್ಯ ಮುಗಿಯುತ್ತೆ ಹಾಗೂ ಜಿಲ್ಲೆಯಲ್ಲಿ ನಾಲ್ಕು ಕೋಟಿ ರೂಪಾಯಿ ಜಮಾ ಆಗಿದೆ ಇವತ್ತು 3000 ರೈತರ ಖಾತೆಗೆ ಹಣ ಸಂದಾಯ ಮಾಡಿದ್ದೇವೆ ಇನ್ನು ಏಳು ದಿನಗಳಲ್ಲಿ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಸಂದಾಯವಾಗುತ್ತದೆ ಎಂದು ಹೇಳಿದರು

ನಂತರದಲ್ಲಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿ ಪ್ರತಿಭಟನಕಾರರಿಗೆ ನೀರು ಕುಡಿಸುವ ಮುಖಾಂತರ ಪ್ರತಿಭಟನೆ ಕೈಬಿಟ್ಟರು...Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.