ETV Bharat / state

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಚಿಕ್ಕೋಡಿಯಲ್ಲಿ ಪ್ರತಿಭಟನೆ

author img

By

Published : Dec 24, 2019, 8:52 AM IST

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಚಿಕ್ಕೋಡಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು.

protest in chikkodi
ಪೌರತ್ವ ತಿದ್ದುಪಡಿ ಕಾಯ್ದೆ

ಚಿಕ್ಕೋಡಿ : ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ನಿನ್ನೆ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಿಎಎ ಮತ್ತು ಎನ್​ಆರ್​ಸಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನೂರಾರು ಸಂಖ್ಯೆಯಲ್ಲಿ ಸಭೆ ನಡೆಸಿ, ಬಳಿಕ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹೋರಾಟಗಾರ ಮಹಾವೀರ ಮೋಹಿತೆ, ದೇಶದ ಆರ್ಥಿಕ‌ ಪರಿಸ್ಥಿತಿ ಹದಗೆಟ್ಟು ಹೋಗುತ್ತಿದೆ. ಹೀಗಿರುವಾಗ ಕಾಯ್ದೆಯ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ್ರು. ಈಗಾಗಲೇ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ. ಹೀಗೆ ಮುಂದುವರೆದರೆ ನಮ್ಮ ಜನರು ಪಾಕಿಸ್ತಾನ ಇಲ್ಲ ಅಫ್ಘಾನಿಸ್ತಾನಕ್ಕೋ ಹೋಗಬೇಕಾಗುತ್ತದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಈ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿ, ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸಹಕರಿಸಿ ಪ್ರತಿಭಟನಾಕಾರರು ಸುವ್ಯವಸ್ಥೆಯಿಂದ ಪ್ರತಿಭಟನೆಯನ್ನು ಮುಗಿಸಿದ್ದಾರೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿ ಹೇಳಲಾಗುತ್ತಿದೆ ಎಂದು ಹೇಳಿದರು.

Intro:ಚಿಕ್ಕೋಡಿಯಲ್ಲಿ ನೂರಾರು ಮುಸ್ಲಿಂರಿಂದ ಪ್ರತಿಭಟನೆBody:

ಚಿಕ್ಕೋಡಿ :

ಪೌರತ್ವ ಮಸೂದೆ ವಿರೋಧಿಸಿ ಚಿಕ್ಕೋಡಿ ಪಟ್ಟಣದಲ್ಲಿ ಇಂದು ವಿವಿಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಕೆಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು CAA ಮತ್ತು NRC ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನೂರಾರು ಸಂಖ್ಯೆಯಲ್ಲಿ ‌ಜಮಾವಣೆಗೊಂಡು ಸಭೆ ನಡೆಸಿದ ಬಳಿಕ ಭವನದ ಆವರಣದಲ್ಲಿ ಎರಡೂ ಬಿಲ್ ಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಅಂಗವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೂರಕ್ಕು ಹೆಚ್ಚು ಪೋಲಿಸ್ ಸಿಬ್ಬಂದಿ ನೇಮಕ ಮಾಡಿಲಾಗಿತ್ತಲ್ಲದೆ ಅಧಿಕಾರಿಗಳು ಪ್ರತಿಭಟನಾಕಾರರ ಮನ ಒಲಿಸಿದ್ದರಿಂದ ಸಭೆಯ ಬಳಿಕ ಅಂಬೇಡ್ಕರ್ ಭವನದ ಆವರಣದಲ್ಲಿ NRC ಮತ್ತು CAA ಬಿಲ್ ವಾಪಸ್ ಪಡೆಯುವಂತೆ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ ಬಳಿಕ‌ ಮಾತನಾಡಿದ ಹೋರಾಟಗಾರ ಮಹಾವೀರ ಮೋಹಿತೆ ದೇಶದ ಆರ್ಥಿಕ‌ ಪರಸ್ಥಿತಿ ಹಾಳಗಿ ಹೋರಟಿದೆ. ನಾನು ಅಮೀತ ಷಾ, ಮೋದಿಗೆ ವಿನಂತಿ ಮಾಡತ್ತೀನಿ ಈ ಕೆಲಸ ಎಲ್ಲಾ ಬಿಟ್ಟು ಅರ್ಥಿಕ ಪರಸ್ಥಿತಿ ದಿವಾಳಿಯಾಗುತ್ತಿದೆ. ನೀವು ಇನೊಂದಿಷ್ಟ ದಿನ ಹೀಗೆ ಮಾಡಿದರೆ ನಮ್ಮ ಜನ ಅಫ್ಘಾನಿಸ್ತಾನಕ್ಕೆ ಹೋಗಬೇಕಾಗುತ್ತದೆ.

ನಮ್ಮ ದೇಶದಲ್ಲಿ ಏನಾಗಿದೆ ಗೊತ್ತಾ ದನಕಡಿಯವರನ್ನ ಜೈಲಿಗೆ ಹಾಕಿದರು, ಮನುಷ್ಯರನ್ನು ಕಡಿಯವರನ್ನ ದೇಶ ಆಳಾತಾರು ಎಂದು ಮೋದಿ ವಿರುದ್ದ ವಾಗ್ವಾದ ನಡೆಸಿದ ಹೋರಾಟಗಾರ ಮಾಹಾವೀರ ಮೋಹಿತೆ, ನಮ್ಮಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ. ಎಲ್ಲರೂ ಶಿಕ್ಷಣ ಕಲಿಯುವಂತಾಗಬೇಕು ಆಗ ಪ್ರತಿಭಟನೆ ಎಂದರೇನು, ಪೌರತ್ವ ಕಾಯ್ದೆ ಎಂದರೇನು ನಾವೂ ಭಾರತೀಯರು. ಆದರೆ, ನಮ್ಮಗೆ ಭಾರತ ಇತಿಹಾಸ ಎಂದರೇನು ಗೊತ್ತಿಲ್ಲ. ಈ ಪೌರತ್ವ ಕಾಯ್ದೆ ಏನ್ನು ಎಂಬುವುದನ್ನು ಮೊದಲು ಜನರಿಗೆ ತಿಳಿ ಹೇಳಿ ಇದರಿಂದ ಜನರಿಗೆ ತಿಳಿಸಿ ಎಂದು ಹೇಳಿ ಎಂದು ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

ಬೈಟ್ 1 : ಮಹಾವೀರ ಮೋಹಿತೆ - ಹೋರಾಟಗಾರ

ಬೆಳಗಾವಿ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಜನರು ಸಹಕರಿಸುವಂತೆ ಮನವಿ ಮಾಡಿಲಾಗಿತ್ತು, ಅದಕ್ಕೆ ತಕ್ಕ ಹಾಗೆ ಪ್ರತಿಭಟನಾಕಾರರೂ ಸುವ್ಯವಸ್ಥೆಯಿಂದ ಪ್ರತಭಟನೆಯನ್ನು ಮುಗಿಸಿದರು. ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೋಲಿಸ್ ಬಂದೋಬಸ್ತ ನಿಯೋಜನೆ ಮಾಡಲಾಗಿತ್ತು. ಈಗಾಗಲೇ ಪ್ರತಿಭಟನೆ ಮುಗಿದಿದ್ದು ಸಹಕರಿಸಿದ ಪ್ರತಿಭಟನಾಕಾರರಿಗೆ ಧನ್ಯವಾದ ಸಲ್ಲಿಸಿದ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ.

ಇನ್ನು ಈ ವರೆಗೂ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರತಿಯೊಂದು ಪೋಲಿಸ್ ಠಾಣೆಯಲ್ಲಿ ಇದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿ ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವಂತ ಸಂದೇಶಗಳ ಬಗ್ಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು

ಬೈಟ್ 2 : ಲಕ್ಷ್ಮಣ ನಿಂಬರಗಿ-ಬೆಳಗಾವಿ ಎಸ್ ಪಿ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.