ಬೆಳಗಾವಿ: ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಕಿರಿಯ ಮಹಿಳಾ ವೈದ್ಯಕೀಯ ಸಿಬ್ಬಂದಿ ಯ ಸೇವೆ ಖಾಯಂ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಪ್ರತಿಭಟಿಸಿದರು.
ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡ ಪ್ರತಿಭಟನಾನಿರತರು, ಕೋವಿಡ್ನಿಂದ ನಾಲ್ಕೈದು ತಿಂಗಳಿನಿಂದ ರಜೆ ಪಡೆಯದೇ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದ್ರೆ, ಹಿರಿಯ ಅಧಿಕಾರಿಗಳು ವೇತನ ವಿಸ್ತರಣೆ ಮಾಡುತ್ತಿಲ್ಲ. ಇದರಿಂದಾಗಿ ಜೀವನ ನಡೆಸುವುದೇ ದೊಡ್ಡ ಸಮಸ್ಯೆ ಆಗಿದೆ. ಹೀಗಾಗಿ ಈ ಕೂಡಲೇ ವೇತನ ವಿಸ್ತರಣೆ, ಸೇವಾ ಭದ್ರತೆ ಒದಗಿಸಿ, ಸೂಕ್ತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಸ್ನೇಹಾ ಪಾಟೀಲ, ಆಶಾ ಪೂಜಾರಿ, ಶ್ರೀದೇವಿ ಮಡಿಮನಿ, ಶಕುಂತಲಾ ರೆಡ್ಡಿ, ಕಾಶಿಬಾಯಿ ದಾಸರ್ ಸೇರಿದಂತೆ ಇತರರರು ಉಪಸ್ಥಿತರಿದ್ದರು.