ಬೆಳಗಾವಿ: ಕೊಲೆ ಆರೋಪಿಯ ಸಂಬಂಧಿಯೋರ್ವ ವಿಷ ಸೇವಿಸಿರುವುದಾಗಿ ಹೈಡ್ರಾಮಾ ಮಾಡಿದ ಘಟನೆ, ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಸಂಜು ಕೊಡ್ಲಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವನು. ಈತ ಪೊಲೀಸರ ಜೊತೆಗೆ ರಸ್ತೆಯಲ್ಲೇ ವಾಗ್ವಾದ ನಡೆಸಿದ. ಬಳಿಕ ಯುವಕನನ್ನು ಪೊಲೀಸರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೈಲಹೊಂಗಲ: ಪತ್ನಿ ಜೊತೆ ಅನೈತಿಕ ಸಂಬಂಧ... ಪತಿಯಿಂದ ಯುವಕನ ಬರ್ಬರ ಹತ್ಯೆ
ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಬುಧವಾರ ನಾಗಪ್ಪ ವನ್ನೂರ (22) ಎಂಬಾತನ ಹತ್ಯೆಯಾಗಿತ್ತು. ಈ ಪ್ರಕರಣ ಸಂಬಂಧ ಬೈಲಹೊಂಗಲ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಪೊಲೀಸರ ಕ್ರಮ ಪ್ರಶ್ನಿಸಿ ಸಂಜು ಕೊಡ್ಲಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ. ಈ ವೇಳೆ ವಿಷ ಸೇವಿಸಿರುವುದಾಗಿ ಸಂಜು ಹೈಡ್ರಾಮಾ ಮಾಡಿದ್ದಾನೆ.