ಅಥಣಿ: ಕೆಲವೇ ದಿನಗಳಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಅಥಣಿ ತಾಲೂಕು ಆಡಳಿತ ಚುನಾವಣೆ ಪೂರ್ವ ತಯಾರಿ ಜೋರಾಗಿ ನಡೆಸುತ್ತಿದೆ.
ಉಪ ತಹಶೀಲ್ದಾರ್ ರಾಜು ಬುರ್ಲಿ ಅವರ ನೇತೃತ್ವದಲ್ಲಿ 5 ವರ್ಷಗಳಿಂದ ಒಂದೇ ಕೊಠಡಿಯಲ್ಲಿದ್ದ ಮತ ಡಬ್ಬಿಗಳ ಸ್ವಚ್ಛತೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 41 ಪಂಚಾಯತಿಗಳ ಚುನಾವಣೆ ನಡೆಯಲ್ಲಿದ್ದು, ಇದರಲ್ಲಿ ನಂದೇಶ್ವರ, ದರೂರ, ಮಹೇಷವಾಡಗಿ, ತೇಲಸಂಗ ನಾಲ್ಕು ಪಂಚಾಯಿತಿಗಳಿಗೆ ಮುಂದಿನ ವರ್ಷ (2021) ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಕಳೆದ ವರ್ಷದ ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾವು ಕಡಿಮೆಯಾಗುವ ಮೊದಲೇ ಮತ್ತೆ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆ ರಂಗು ಪಡೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಮತದಾರರು.