ETV Bharat / state

ಬೆಳಗಾವಿ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ; ಮಹಿಳಾ ಮತದಾರರೇ ನಿರ್ಣಾಯಕ - Belgaum palike election latest enws

ಮಹಾನಗರ ಪಾಲಿಕೆ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇತ್ತ ಕಾಂಗ್ರೆಸ್ ಕೂಡ ಬಿಜೆಪಿಗೆ ಠಕ್ಕರ್ ಕೊಡಲು ಕಾರ್ಯತಂತ್ರ ರೂಪಿಸಿದೆ. ಮತ್ತೊಂದೆಡೆ, ಆಪ್ ಹಾಗೂ ಇತರೆ ಪಕ್ಷಗಳು ಖಾತೆ ತೆರೆಯುವ ಉತ್ಸಾಹದಲ್ಲಿವೆ. ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ನಾಡದ್ರೋಹಿ ಎಂಇಎಸ್ ಕಂಗಾಲಾಗಿದೆ.

Prepare for Belgaum palike election
ಬೆಳಗಾವಿ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ
author img

By

Published : Sep 2, 2021, 4:20 PM IST

Updated : Sep 2, 2021, 4:42 PM IST

ಬೆಳಗಾವಿ: ರಾಷ್ಟ್ರೀಯ ಪಕ್ಷಗಳ ರಂಗಪ್ರವೇಶದಿಂದ ಗಮನ ಸೆಳೆದಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಭಾಷೆಯ ಆಧಾರ ಮೇಲೆ ನಡೆಯುತ್ತಿದ್ದ ಪಾಲಿಕೆ ಚುನಾವಣೆ ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಆಮ್ ಆದ್ಮಿ ಪಾರ್ಟಿ, ಜೆಡಿಎಸ್, ಎಐಎಂಐಎಂ,‌ ಎಂಇಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಳೆದೊಂದು ವಾರದಿಂದ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದ ನಾಯಕರೆಲ್ಲರೂ ನಿನ್ನೆಯೇ ನಗರದಿಂದ ಕಾಲ್ಕಿತ್ತಿದ್ದಾರೆ. ಮತದಾನ ಮುನ್ನಾ ದಿನವಾದ ಇಂದು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚನೆಯ ಕೊನೆಯ ಹಂತದ ಕಸರತ್ತಿನಲ್ಲಿ ತೊಡಗಿದ್ದಾರೆ.

ಯಾವ ಪಕ್ಷದಿಂದ ಎಷ್ಟು ಅಭ್ಯರ್ಥಿಗಳು ಕಣಕ್ಕೆ?

ಮಹಾನಗರ ಪಾಲಿಕೆ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇತ್ತ ಕಾಂಗ್ರೆಸ್ ಕೂಡ ಬಿಜೆಗೆ ಠಕ್ಕರ್ ಕೊಡಲು ಕಾರ್ಯತಂತ್ರ ರೂಪಿಸಿದೆ. ಮತ್ತೊಂದೆಡೆ, ಆಪ್ ಹಾಗೂ ಎಂಐಎಂ ಖಾತೆ ತೆರೆಯುವ ಉತ್ಸಾಹದಲ್ಲಿವೆ. ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ನಾಡದ್ರೋಹಿ ಎಂಇಎಸ್ ಕಂಗಾಲಾಗಿದೆ.

- 58 ವಾರ್ಡ್ ಪೈಕಿ ಬಿಜೆಪಿ 55 ವಾರ್ಡ್, ಕಾಂಗ್ರೆಸ್ 45 ವಾರ್ಡ್, ಆಪ್ 27 ವಾರ್ಡ್, ಜೆಡಿಎಸ್ 11, ಎಂಐಎಂ 6 ಹಾಗೂ ಎಂಇಎಸ್ 21 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

- 285 ಅಭ್ಯರ್ಥಿಗಳು ಪಕ್ಷತರರಾಗಿ ಕಣಕ್ಕಿಳಿದಿದ್ದು, ಕಣದಲ್ಲಿ 385 ಅಭ್ಯರ್ಥಿಗಳಿದ್ದಾರೆ.

ಬೆಳಗಾವಿ ಪಾಲಿಕೆ ಚುನಾವಣೆಗೆ ನಡೆದಿರುವ ಸಿದ್ಧತೆಯ ಬಗ್ಗೆ ಡಿಸಿಪಿ ಮಾಹಿತಿ ನೀಡಿದರು.

ಮಹಿಳಾ ಮತದಾರರೇ ನಿರ್ಣಾಯಕ:

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ. ಒಟ್ಟು 4,28,364 ಮತದಾರರಿದ್ದು, 2,13,526 ಪುರುಷ ಮತದಾರರು ಹಾಗೂ 2,14,838 ಮಹಿಳಾ ಮತದಾರರಿದ್ದಾರೆ. ನಗರದಲ್ಲಿ 415 ಮತಗಟ್ಟೆ ತೆರೆಯಾಗಿದ್ದು, 142 ಸೂಕ್ಷ್ಮ ಹಾಗೂ 207 ಮತಗಟ್ಟೆಗಳಿವೆ. 457 ತಂಡಗಳ ಜೊತೆಗೆ 1828 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ವಾಹನಗಳ ಮೇಲೆಯೂ ದಾಳಿ ನಡೆಸಲಾಗಿದೆ. 1400 ಲೀಟರ್ ಮದ್ಯ, 228 ಬೀಯರ್ ಹಾಗೂ 260 ಲೀಟರ್ ಕಳ್ಳಬಟ್ಟಿ ಮದ್ಯ ವಶಪಡಿಸಿಕೊಂಡು 6 ವಾಹನಗಳನ್ನು ‌ಜಪ್ತಿ ಮಾಡಲಾಗಿದೆ.

ಪೊಲೀಸ್​ ಭದ್ರತೆ:

ಮೊದಲ‌ ಬಾರಿಗೆ ಬೆಳಗಾವಿ ‌ಮಹಾನಗರ ಪಾಲಿಕೆ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದೆ. ಹೀಗಾಗಿ ನಗರ ಪೊಲೀಸ್ ‌ಆಯುಕ್ತ ತ್ಯಾಗರಾಜನ್ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಚುನಾವಣೆಗೆ ನಿಯೋಜಿಸಲಾಗಿದೆ. ಅಲ್ಲದೆ ಎಲ್ಲ ಪೊಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ಪಥಸಂಚಲನ ‌ನಡೆಸಿ, ಮತದಾರರಲ್ಲಿ ಧೈರ್ಯ ಮೂಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 600 ಕ್ಕೂ ಅಧಿಕ ರಿವಾಲ್ವರ್ ವಾಪಸ್​ ಪಡೆಯಲಾಗಿದ್ದು, ಎಲ್ಲ ಠಾಣೆಗಳಲ್ಲಿ ರೌಡಿ ಪರೇಡ್​ ನಡೆಸಿ ಎಚ್ಚರಿಕೆ ನೀಡಲಾಗಿದೆ.

Last Updated : Sep 2, 2021, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.