ETV Bharat / state

ಬೆಳಗಾವಿ: ಪ್ರತಿಭಟ‌ನಾ ವೇದಿಕೆಯಲ್ಲಿ ಕೊರೊನಾ ನಿಯಮಾವಳಿ ಉಲ್ಲಂಘಿಸಿದ ರಾಜಕೀಯ ನಾಯಕರು

author img

By

Published : Oct 28, 2020, 5:01 PM IST

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟ‌ನಾ ವೇದಿಕೆಯಲ್ಲಿ ರಾಜಕೀಯ ನಾಯಕರುಗಳೇ ಸಾಮಾಜಿಕ ಅಂತರವನ್ನು ಮರೆತು ಕೊರೊನಾ ನಿಯಮಾವಳಿ ಉಲ್ಲಂಘಿಸಿದ್ದಾರೆ.

Basava Jayamritunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಸುವರ್ಣಸೌಧ ಎದುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟ‌ನಾ ವೇದಿಕೆಯಲ್ಲಿ ರಾಜಕೀಯ ನಾಯಕರುಗಳೇ ಸಾಮಾಜಿಕ ಅಂತರವಿಲ್ಲದೇ ಶ್ರೀಗಳ ಸುತ್ತ ಕುಳಿತುಕೊಂಡು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ.

ಕೊರೊನಾ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗಳು

ಪ್ರತಿಭಟನಾ ಸ್ಥಳಕ್ಕೆ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಇತರರು ಸಾಮಾಜಿಕ ಅಂತರವಿಲ್ಲದೇ ಗುಂಪಾಗಿ ಸೇರಿ ಕೊರೊನಾ ನಿಯಮಾವಳಿ ಉಲ್ಲಂಘಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಸ್ಕ್​ ಧರಿಸದೇ ಕುಳಿತಿದ್ದರು. ಮಾಸ್ಕ್ ಹಾಕಿಕೊಳ್ಳಿ ಎಂದು ವಿನಯ್ ಕುಲಕರ್ಣಿಗೆ ಸಚಿವ ರಮೇಶ್ ಜಾರಕಿಹೊಳಿ‌ ಸಲಹೆ ನೀಡಿದರೂ, ಕೆಲ ಕಾಲ ಮಾಸ್ಕ್​​ ಹಾಕಿಕೊಂಡು ಮತ್ತೆ ಮಾಸ್ಕ್ ತೆಗೆದು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.