ETV Bharat / state

ಅಥಣಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಇನ್ನೂ ತಾಲೂಕಿನ ಕಡೆ ಮುಖ ಮಾಡದ ಜನಪ್ರತಿನಿಧಿಗಳು!

ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕಳೆದ ಕೊರೊನಾ ಕಷ್ಟಕಾಲದಲ್ಲಿ ಮೂರು ಸಲ ಅಥಣಿಗೆ ಬಂದು ಅಧಿಕಾರಿಗಳ ಸಭೆ ನಡೆಸಿ ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಿದರೆಂದು ಅಥಣಿ ಜನತೆ ಸ್ಮರಿಸಿಕೊಂಡರು..

Athani
Athani
author img

By

Published : May 8, 2021, 10:00 PM IST

ಅಥಣಿ(ಬೆಳಗಾವಿ): ಅಥಣಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರೊಂದಿಗೆ ಸಾವಿನ ಪ್ರಕರಣಗಳ ಏರಿಕೆ ಆಗುತ್ತಿದ್ದು, ನಿತ್ಯ ಗ್ರಾಮಗಳಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಕಷ್ಟಕಾಲದಲ್ಲಿ ಚುನಾಯಿತ ಪ್ರತಿನಿಧಿಗಳು ನಮ್ಮ ನೆರವಿಗೆ ಬರುತ್ತಾರೆ ಎಂಬ ಅಥಣಿ ಜನತೆ ನಿರೀಕ್ಷೆ ಅಕ್ಷರಶಃ ಸುಳ್ಳಾಗಿದೆ. ಜನರು ಅನಾಥವಾಗಿರುವ ವಾತಾವರಣ ಮೂಡಿದೆ.

ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಬ್​ ಜೊಲ್ಲೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಅಥಣಿಗೆ ಈವರೆಗೆ ಭೇಟಿ ನೀಡಿಲ್ಲ. ಅಧಿಕಾರಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ, ಇದರಿಂದ ಅಧಿಕಾರಿಗಳಿಗೆ ಯಾರು ಮಾರ್ಗದರ್ಶನ ನೀಡುವವರು ಎಂಬಂತಾಗಿದೆ.

ಕಳೆದ ಮೂರು ವರ್ಷಗಳಿಂದ ಆಯ್ಕೆಯಾದ ಚಿಕ್ಕೋಡಿ ಸಂಸದರು ಅಥಣಿಗೆ ಬರುವುದು ಅಪರೂಪ ಹಾಗೂ ಕಳೆದ ಒಂದು ವಾರದ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಗೋವಿಂದ ಕಾರಜೋಳ ಅಥಣಿಗೆ ಭೇಟಿ ನೀಡಿಲ್ಲ.

ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕಳೆದ ಕೊರೊನಾ ಕಷ್ಟಕಾಲದಲ್ಲಿ ಮೂರು ಸಲ ಅಥಣಿಗೆ ಬಂದು ಅಧಿಕಾರಿಗಳ ಸಭೆ ನಡೆಸಿ ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಿದರೆಂದು ಅಥಣಿ ಜನತೆ ಸ್ಮರಿಸಿಕೊಂಡರು.

ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳು ಬೆಳಗಾವಿ ನಗರಕ್ಕೆ ಮಾತ್ರ ಸೀಮಿತವಾಗಿದ್ದು ಅಥಣಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.