ETV Bharat / state

ಬೆಳಗಾವಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ : ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್

ಬೆಳಗಾವಿ ನಗರದ ಬಿ ಕೆ ಮಾಡೆಲ್​​ ಶಾಲೆಯಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದಾಟಿ ಸಂಭ್ರಮಿಸಿದ್ದಾರೆ. ಬೆಂಬಲಿಗರು ಅಪಾರ ಸಂಖ್ಯೆಯಲ್ಲಿದ್ದ ಕಾರಣ ಅವರನ್ನು ಪೊಲೀಸರು ಲಾಠಿ ಬೀಸುವ ಮೂಲಕ ಚದುರಿಸಿದರು.

ಪೊಲೀಸರಿಂದ ಲಾಠಿ ಚಾರ್ಜ್
ಪೊಲೀಸರಿಂದ ಲಾಠಿ ಚಾರ್ಜ್
author img

By

Published : Sep 6, 2021, 12:36 PM IST

ಬೆಳಗಾವಿ: ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 38ರಲ್ಲಿ ಪಕ್ಷೇತರ ಅಭ್ಯರ್ಥಿ ಅಜೀಂ ಪಟವೇಕರ್​ ಗೆಲುವು ಸಾಧಿಸಿದ ಬಳಿಕ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್​ ನಡೆಸಿದ್ದಾರೆ.

ಪೊಲೀಸರಿಂದ ಲಾಠಿ ಚಾರ್ಜ್

ಅಜೀಂ ಪಟವೇಕರ್​ ಜಯ ಸಾಧಿಸುತ್ತಿದ್ದಂತೆ ಬೆಂಬಲಿಗರು, ಬೆಳಗಾವಿ ನಗರದ ಬಿ ಕೆ ಮಾಡೆಲ್​​ ಶಾಲೆಯಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದಾಟಿ ಸಂಭ್ರಮಿಸಿದ್ದಾರೆ. ಬೆಂಬಲಿಗರು ಅಪಾರ ಸಂಖ್ಯೆಯಲ್ಲಿದ್ದ ಕಾರಣ ಅವರನ್ನು ಪೊಲೀಸರು ಲಾಠಿ ಬೀಸುವ ಮೂಲಕ ಚದುರಿಸಿದರು.

ಕಾರ್ಯಕರ್ತರು ನಿಷೇಧದ ನಡುವೆಯೂ ಸಂಭ್ರಮಾಚರಣೆ ನಡೆಸಿದ್ದರು. ಗೆದ್ದ ಅಭ್ಯರ್ಥಿ ಅಜೀಂ ಪಟವೇಕರ್​ ಪರ ಘೋಷಣೆ ಕೂಗಿ, ಗುಲಾಲ ಎರಚಿ ಸಂಭ್ರಮಿಸುತ್ತಿದ್ದರು. ಸ್ಥಳಕ್ಕಾಗಮಿಸಿ ಪೊಲೀಸರು ಲಾಠಿ ಬೀಸುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದರು.

ಇದನ್ನೂ ಓದಿ : ಬೆಳಗಾವಿಯಲ್ಲಿ MES ಗೆ ತೀವ್ರ ಮುಖಭಂಗ.. ಬಿಜೆಪಿಗೆ ತೆಕ್ಕೆಗೆ ಕುಂದಾನಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.