ETV Bharat / state

ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸ್ ದಾಳಿ: ಒಬ್ಬನ ಬಂಧನ - Athani police attack

ಅರಳಿಕಟ್ಟಿ ಗ್ರಾಮದ ಕಲಬೆರಕೆ ಹಾಲಿನ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಹಾಲಿನ ಕಲಬೆರಕೆಗೆ ಬಳಸುವ ಅಪಾರ ಪ್ರಮಾಣದ ಮಿಶ್ರಣ ಪದಾರ್ಥಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Police attack on adulterated milk production plant: one arrested
ಕಲಬೆರಿಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸ್ ದಾಳಿ: ಒಬ್ಬನ ಬಂಧನ
author img

By

Published : Feb 28, 2020, 9:19 AM IST

ಅಥಣಿ(ಬೆಳಗಾವಿ): ಅರಳಿಕಟ್ಟಿ ಗ್ರಾಮದ ಕಲಬೆರಕೆ ಹಾಲಿನ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಕಲಬೆರಕೆಗೆ ಬಳಸುವ ಅಪಾರ ಪ್ರಮಾಣದ ಮಿಶ್ರಣ ಪದಾರ್ಥಗಳನ್ನು ವಶಕ್ಕೆ ಪಡೆದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮಾಣಿಕ್ ಸಂತ್ರಾಮ ಜಾಧವ್ ಬಂಧಿತ ಆರೋಪಿ. ಪೊಲೀಸರು ಕಾರ್ಯಾಚರಣೆ ವೇಳೆ ಸುಮಾರು 29,260 ರೂಪಾಯಿ ಮೌಲ್ಯದ ಕಲಬೆರಕೆ ಮಾಡುವ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಎಸ್​ಪಿ ಹಾಗೂ ಅಥಣಿ ಡಿವೈಎಸ್​ಪಿ ಎಸ್.ವಿ.ಗಿರೀಶ್ ಮಾರ್ಗದರ್ಶನದಂತೆ ಡಿಸಿಪಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನೊಳಗೊಂಡ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ.

ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ಹೊರವಲಯದಲ್ಲಿನ ಶೆಡ್​ ಒಂದರಲ್ಲಿ ಕಲಬೆರಕೆ ಹಾಲು ತಯಾರಿಸಲಾಗುತ್ತಿತ್ತು. ಈ ಬಗ್ಗೆ ಸುಳಿವು ಪಡೆದ ಪೊಲೀಸರು ಘಟಕದ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಪಾಮ್ ಎಣ್ಣೆ, ಹಾಲು ಮಂದವಾಗಲೆಂದು ಬೆರೆಸುವ ವಿಷಕಾರಿ ಬಿಳಿ ಪದಾರ್ಥ ಹಾಗೂ ಹಾಲು ಸಂಗ್ರಹಣೆಯ ಕ್ಯಾನುಗಳು, ಮಿಕ್ಸರ್ ಗಳು ದೊರತಿವೆ.

ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ವಾರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.