ಚಿಕ್ಕೋಡಿ: ಮಹಾಮಾರಿ ಕೊರೊನಾ ವೈರಸ್ ಅಂಟಿಕೊಂಡಿದ್ದನ್ನು ಹೇಗೆ ಗುರುತಿಸಿಕೊಳ್ಳುವುದು ಹಾಗೂ ರೋಗವನ್ನು ತಡೆಗಟ್ಟಲು ಹೇಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ನಿಪ್ಪಾಣಿ ತಾಲೂಕು ವೈದ್ಯಾಧಿಕಾರಿ ಸೀಮಾ ಗೊಂಜಾಳ ಮಾಹಿತಿ ನೀಡಿದರು.
ಮಾಧ್ಯಮದವರ ಜೊತೆ ಮಾತನಾಡಿದ ವೈದ್ಯಾಧಿಕಾರಿ ಸೀಮಾ, ದಯವಿಟ್ಟು ಸಾರ್ವಜನಿಕರು ತಮ್ಮ ಪ್ರಾಣವನ್ನು ಮಹಾಮಾರಿಯಿಂದ ಕಾಪಾಡಿಕೊಳ್ಳಲು ಯಾರೂ ಮನೆಯಿಂದ ಹೊರ ಬರಬೇಡಿ. ಸರ್ಕಾರದ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿ. ನೀವು ಮನೆಯಿಂದ ಹೊರ ಬರಲೇಬೇಕು ಎಂದರೆ ತಪ್ಪದೆ ಮಾಸ್ಕ್ ಧರಿಸಿ ಹೊರಬನ್ನಿ. ಆಗಾಗ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಅಥವಾ ಸಾಬುನಿನಿಂದ ತೊಳೆಯುತ್ತಿರಿ ಎಂದು ಸಲಹೆ ನೀಡಿದರು.