ETV Bharat / state

ಛಾಯಾಗ್ರಾಹಕ ಮಲ್ಲಿಕಾರ್ಜುನ ದಾನನ್ನವರ ವಿಧಿವಶ!

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸ್ನೇಹ ಜೀವಿಯಾಗಿದ್ದ,  ಅಪರೂಪದ ಛಾಯಾಗ್ರಾಹಕ ಮಲ್ಲಿಕಾರ್ಜನ ಶಂಕರ ದಾನನ್ನವರ ಹೃದಯಾಘಾತದಿಂದ ನಿಧನರಾಗಿದ್ದಾರೆ.

author img

By

Published : Aug 6, 2019, 3:23 AM IST

ಛಾಯಾಗ್ರಾಹಕ ಮಲ್ಲಿಕಾರ್ಜುನ ದಾನನ್ನವರ ವಿಧಿವಶ

ಚಿಕ್ಕೋಡಿ: ಛಾಯಾಗ್ರಾಹಕ ಮಲ್ಲಿಕಾರ್ಜನ ಶಂಕರ ದಾನನ್ನವರ(36) ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸ್ನೇಹ ಜೀವಿಯಾಗಿದ್ದ, ಮಲ್ಲಿಕಾರ್ಜುನ ಪ್ರಾಣಿ ಪಕ್ಷಿ ಮತ್ತು ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಅನೇಕ ರಾಜ್ಯಮಟ್ಟದ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇವರ ಅಪರೂಪದ ಚಿತ್ರ ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಗಿದ್ದವು. ಚಿಕ್ಕೋಡಿ ಭಾಗದಲ್ಲಿ ತಮ್ಮದೇಆದ ಪ್ರತೀತಿಯನ್ನು ಪಡೆದಿದ್ದ ಮಲ್ಲಿಕಾರ್ಜುನ ಈಗ ಇಲ್ಲ ಎಂಬುದೇ ಬೇಸರದ‌ ಸಂಗತಿ.

ಚಿಕ್ಕೋಡಿ ಭಾಗದ ಎಲ್ಲ ವರದಿಗಾರರು ಇವರ ಅಗಲಿಕೆಗೆ ಕಂಬನಿ ಮಿಡದಿದ್ದಾರೆ. ಮೃತರು ತಂದೆ ತಾಯಿ, ಪತ್ನಿ, ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11ಕ್ಕೆ ಸ್ವಗ್ರಾಮದಲ್ಲಿ ನಡೆಯಲಿದೆ.

Intro:ಛಾಯಾಗ್ರಾಹಕ ಮಲ್ಲಿಕಾರ್ಜುನ ದಾನನ್ನವರ ಇನ್ನಿಲ್ಲBody:

ಚಿಕ್ಕೋಡಿ : 

ಅಪರೂಪದ ಛಾಯಾಗ್ರಾಹಕ ಮಲ್ಲಿಕಾರ್ಜನ ಶಂಕರ ದಾನನ್ನವರ(36) ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸ್ನೇಹ ಜೀವಿಯಾಗಿದ್ದ ಮಲ್ಲಿಕಾರ್ಜುನ ಪ್ರಾಣಿ-ಪಕ್ಷಿ ಮತ್ತು ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಅನೇಕ ರಾಜ್ಯಮಟ್ಟದ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.

ಈತನ ಅಪರೂಪದ ಚಿತ್ರ-ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಗಿದ್ದವು. ಚಿಕ್ಕೋಡಿ ಭಾಗದಲ್ಲಿ ತಮ್ಮದೆಯಾದ ಪ್ರತಿತಿಯನ್ನ ಪಡೆದಿದ್ದ ಮಲ್ಲಿಕಾರ್ಜುನ ಈಗ ಇಲ್ಲ ಎಂಬುದೇ ಬೇಸರದ‌ ವಿಷಯ. ಚಿಕ್ಕೋಡಿ ಭಾಗದ ಎಲ್ಲ ವರದಿಗಾರರು ಕಂಬನಿ ಮಿಡದಿದ್ದಾರೆ.

ಮೃತರು ತಂದೆ-ತಾಯಿ, ಪತ್ನಿ, ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 11ಕ್ಕೆ ಉಮರಾಣಿಯಲ್ಲಿ ನಡೆಯಲಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.