ETV Bharat / state

ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಗಳ ಬೇಡಿಕೆ ಎಷ್ಟಿದೆ, ವಿತರಣೆಯಾಗಿರುವುದೆಷ್ಟು?

ರಾಜ್ಯದಲ್ಲಿ ಹಿಂಗಾರು ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ. ಬೀಜ ಖರೀದಿ ದರಗಳು ಹಾಗೂ ಗರಿಷ್ಠ ಎಪಿಎಂಸಿ ಮಾರಾಟ ದರಗಳ ಪ್ರಕಾರ ಮಾರಾಟ ಮಾಡಲಾಗುತ್ತಿದೆ.

sowing
ಕೃಷಿ ಕಾಯಕದಲ್ಲಿ ತೊಡಗಿರುವ ರೈತ (ETV Bharat)
author img

By ETV Bharat Karnataka Team

Published : Oct 12, 2024, 7:28 AM IST

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಚುರುಕಾಗಿದ್ದು, 2024ರ ಹಿಂಗಾರು ಹಂಗಾಮಿನಲ್ಲಿ 2.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆಗೆ, 4.29 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದೆ. ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಗುರುವಾರದವರೆಗೆ 85,392 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ 1.51 ಲಕ್ಷ ಕ್ವಿಂಟಾಲ್‌ಗಳಷ್ಟು ದಾಸ್ತಾನು ಇದೆ. ಉಳಿದ ದಾಸ್ತಾನು ಸಂಬಂಧಿಸಿದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿತ್ತನೆ ಬೀಜ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತವಾಗಿ ಯಾವುದೇ ಬಿತ್ತನೆ ಬೀಜದ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೋಳ, ನೆಲಗಡಲೆ, ಕಡಲೆ ಮತ್ತು ಗೋಧಿ ಬೆಳೆಗಳ ಬಿತ್ತನೆ ಬೀಜಗಳ ಬೇಡಿಕೆ ಮತ್ತು ಲಭ್ಯತೆ ಈ ಕೆಳಕಂಡಂತೆ ಇದೆ.

ಬೆಳೆಗಳು ಬೇಡಿಕೆ ಲಭ್ಯತೆ
1.ಜೋಳ6,861 ಕ್ವಿಂಟಾಲ್‌10,690 ಕ್ವಿಂ.
2. ನೆಲಗಡಲೆ60,747 ಕ್ವಿಂ.1,30,662 ಕ್ವಿಂ.
3.ಕಡಲೆ2,14,359 ಕ್ವಿಂ.2,50,000 ಕ್ವಿಂ.
4.ಗೋಧಿ 8,218 ಕ್ವಿಂ.8,990 ಕ್ವಿಂ.

ವಿವಿಧ ಬೆಳೆಗಳ ಮಾರಾಟ ದರಗಳಲ್ಲಿ ಏರಿಕೆ: ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ, ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ ಎಪಿಎಂಸಿ ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2023-24ನೇ ಸಾಲಿಗೆ ಹೋಲಿಸಿದಾಗ, 2024-25ನೇ ಸಾಲಿನಲ್ಲಿ ವಿವಿಧ ಬೆಳೆಗಳ ಮಾರಾಟ ದರಗಳಲ್ಲಿ ಶೇ.13.07ರಿಂದ 15.88ರಷ್ಟು ಏರಿಕೆ ಕಂಡಿದೆ.

ಬೀಜೋತ್ಪಾದನೆಯನ್ನು ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ರಾಜ್ಯ ಬೀಜ ನಿಗಮ, ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ರೈತರ ಜಮೀನಿನಲ್ಲಿಯೇ ಕೈಗೊಂಡು ಸರಬರಾಜು ಮಾಡುವುದರಿಂದ ಖರೀದಿ ದರ ಹೆಚ್ಚಳ ಮೊತ್ತವು ಬೀಜೋತ್ಪಾದನೆ ಕೈಗೊಳ್ಳುವ ರೈತರಿಗೆ ವರ್ಗಾವಣೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದಾಗ, 2024-25ನೇ ಸಾಲಿನಲ್ಲಿ ವಿವಿಧ ಬೆಳೆಗಳ ಎಪಿಎಂಸಿ ಮಾರಾಟ ದರಗಳಲ್ಲಿ ಗರಿಷ್ಠ ಶೇ.0.73ರಿಂದ 31.52ವರೆಗೆ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2023-24ನೇ ಸಾಲಿನಲ್ಲಿ ಬರಗಾಲದಿಂದ ಕಡಲೆ ಮತ್ತು ಗೋಧಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದ್ದು, ಬೀಜೋತ್ಪಾದಕರಿಂದ ಬಿತ್ತನೆ ಬೀಜಗಳನ್ನು ಪಡೆಯಲು ಖರೀದಿ ದರಗಳು ಸಹ ಗಣನೀಯವಾಗಿ ಏರಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗೋಧಿಯ ಖರೀದಿ ದರ ಶೇ.22.73ರಷ್ಟು ಹೆಚ್ಚಳವಾಗಿದ್ದರೂ ಸಹ ಮಾರಾಟ ದರ ಶೇ.13.64ರಿಂದ ಶೇ.15.38ರಷ್ಟು ಮಾತ್ರ ಹೆಚ್ಚಳವಾಗಿದೆ.

ಕಡಲೆಯ ಖರೀದಿ ದರ ಶೇ.30.08ರಷ್ಟು ಹೆಚ್ಚಳವಾಗಿದ್ದರೂ ಸಹ ಮಾರಾಟ ದರ ಶೇ.15.88ರಷ್ಟು ಮಾತ್ರ ಹೆಚ್ಚಾಗಿದೆ. ಉಳಿದ ಬೆಳೆಗಳಾದ ನೆಲಗಡಲೆ, ಹಿಂಗಾರಿ ಜೋಳ ಮತ್ತು ಕುಸುಬೆ ಬೆಳೆಗಳ ಬಿತ್ತನೆ ಬೀಜಗಳ ಖರೀದಿ ದರಗಳು ಕಳೆದ ಸಾಲಿಗೆ ಹೋಲಿಸಿದಾಗ ಶೇ.0.0ರಿಂದ ಶೇ.2.41ರಷ್ಟು ಹೆಚ್ಚಳವಾಗಿದ್ದರೂ ಸಹ ಸದರಿ ಬೆಳೆಗಳ ಮಾರಾಟ ದರಗಳು ಶೇ.0.0ರಿಂದ ಶೇ.13.07ರಷ್ಟು ಕಡಿಮೆಯಾಗಿದೆ ಹಾಗೂ ಸೂರ್ಯಕಾಂತಿ ದರಗಳು ಕಳೆದ ಸಾಲಿನಷ್ಟೇ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 'ಆಕಾಶದತ್ತ ಚಿಗುರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್': ಕಾರ್ಣಿಕ ನುಡಿದ ಗೊರವಯ್ಯ

ಕೃಷಿ ಇಲಾಖೆಯು ಬೆಳೆವಾರು ಎಲ್-1 ದರಗಳ ಆಧಾರದ ಮೇಲೆ ರಿಯಾಯಿತಿ ದರಗಳನ್ನು ನಿಗದಿಪಡಿಸುವುದಿಲ್ಲ. ಬದಲಾಗಿ ಬೆಳೆವಾರು ನಿರ್ದಿಷ್ಟ ರಿಯಾಯಿತಿ ದರಗಳನ್ನು ನಿಗದಿಪಡಿಸಲಾಗಿರುತ್ತದೆ. (ಉದಾಹರಣೆಗೆ: ಹಿಂಗಾರಿ ಜೋಳ ರೂ. 20/ಕೆ.ಜಿ, ನೆಲಗಡಲೆ(TMV-2) ರೂ.19/ಕೆ.ಜಿ., ಕುಸುಬೆ ರೂ.20/ಕೆ.ಜಿ., ಸೂರ್ಯಕಾಂತಿ ರೂ.80/ಕೆ.ಜಿ., ಗೋಧಿ ರೂ.15/ಕೆ.ಜಿ., ಮತ್ತು ಕಡಲೆ- ರೂ.25/ಕೆ.ಜಿ.) ಹೀಗಾಗಿ, ಎಲ್-1 ದರಗಳು ಬದಲಾದಂತೆ ರೈತರ ವಂತಿಕೆಯಲ್ಲೂ ಸಹ ಬದಲಾಗುತ್ತದೆ.

ರಾಗಿ, ಭತ್ತ, ಅಲಸಂದೆ, ಉದ್ದು, ಹೆಸರು, ಮೆಕ್ಕೆಜೋಳ ಬಿತ್ತನೆ ಬೀಜಗಳಿಗೆ ಮುಂಗಾರು ಹಂಗಾಮಿನಲ್ಲಿ ನಿಗದಿಪಡಿಸಿದ ದರಗಳನ್ನೇ ಮುಂದುವರೆಸಲಾಗಿದೆ. ನೆಲಗಡಲೆ, ಹಿಂಗಾರಿ ಜೋಳ, ಕುಸುಬೆ ಬೆಳೆಗಳ ದರಗಳು ಕಳೆದ ಸಾಲಿಗಿಂತ ಕಡಿಮೆಯಾಗಿವೆ. ಸೂರ್ಯಕಾಂತಿ ದರಗಳು ಕಳೆದ ಸಾಲಿನಷ್ಟೇ ಇದೆ. ಕೇವಲ ಕಡಲೆ ಹಾಗೂ ಗೋಧಿ ಬೆಳೆಗಳ ಬಿತ್ತನೆ ಬೀಜಗಳ ದರಗಳು ಮಾತ್ರ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಆನೇಕಲ್ ಗುಮ್ಮಳಾಪುರ ಜಾತ್ರೆ:​ ವರ್ಷಕ್ಕೊಮ್ಮೆ ತೆರೆಯುವ ಗುಂಡು ಗೌರಮ್ಮ ಗುಡಿಯಲ್ಲಿ ಗೌರಿ - ಗಣೇಶನಿಗೆ ಜಲಾಧಿವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.