ETV Bharat / state

ಜತ್ತ ಬಳಿಕ ಅಕ್ಕಲಕೋಟ ತಾಲೂಕಿನ ಜನರಿಂದ ಕರ್ನಾಟಕ ಸೇರಲು ಒಲವು - ಈಟಿವಿ ಭಾರತ ಕನ್ನಡ

ಮಹಾರಾಷ್ಟ್ರದ ಜತ್ತ ತಾಲೂಕಿನ ಬಳಿಕ ಇದೀಗ ಅಕ್ಕಲಕೋಟೆ ತಾಲೂಕಿನ ಜನರು ಕರ್ನಾಟಕ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

people-of-akkalakota-taluk-are-inclined-to-join-karnataka
ಜತ್ತ ಬಳಿಕ ಅಕ್ಕಲಕೋಟ ತಾಲೂಕಿನ ಜನರಿಗೆ ಕರ್ನಾಟಕ ಸೇರಲು ಒಲವು : ಮಹಾ ನೆಲದಲ್ಲೇ ಶಿಂಧೆ-ಫಡ್ನವೀಸ್‌ಗೆ ಮುಜುಗರ
author img

By

Published : Nov 28, 2022, 4:14 PM IST

ಬೆಳಗಾವಿ: ಗಡಿ ವಿವಾದ ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗುಬಾಣವಾಗುತ್ತಿದೆ. ಜತ್ತ ಬಳಿಕ ಈಗ ಅಕ್ಕಲಕೋಟ ತಾಲೂಕಿನ 40 ಗ್ರಾಮಗಳ ಜನರು ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ನೆಲದಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.

ಅಕ್ಕಲಕೋಟೆ ತಾಲೂಕಿನ 40 ಹಳ್ಳಿ ಗ್ರಾಮಸ್ಥರು: ಕರ್ನಾಟಕ ಸೇರುವ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯಿಸಲು ಅಕ್ಕಲಕೋಟ ತಾಲೂಕಿನ ಕನ್ನಡ ಭಾಷಿಕರು ನಿರ್ಧರಿಸಿದ್ದಾರೆ. ಅಕ್ಕಲಕೋಟ ತಾಲೂಕಿನ 40 ಹಳ್ಳಿಯ ಕನ್ನಡಿಗರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರುತ್ತೇವೆ. 5 ದಶಕಗಳಿಂದ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ಕುಡಿಯುವ ನೀರು, ಸುಸಜ್ಜಿತ ರಸ್ತೆ, ಕನ್ನಡ ಶಾಲೆಗಳು ಸೇರಿ ಮೂಲಸೌಕರ್ಯಗಳನ್ನು ಒದಗಿಸುತ್ತಿಲ್ಲ. ಕನ್ನಡ ಮಾಧ್ಯಮದ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರ ಕನ್ನಡದ ಪಠ್ಯ ಕೊಡುತ್ತಿಲ್ಲ. ಮಹಾರಾಷ್ಟ್ರದ ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿ ರೋಸಿ ಹೋಗಿದ್ದೇವೆ ಎಂದು ಕನ್ನಡ ಭಾಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜತ್ತ ಬಳಿಕ ಅಕ್ಕಲಕೋಟ ತಾಲೂಕಿನ ಜನರಿಗೆ ಕರ್ನಾಟಕ ಸೇರಲು ಒಲವು : ಮಹಾ ನೆಲದಲ್ಲೇ ಶಿಂಧೆ-ಫಡ್ನವೀಸ್‌ಗೆ ಮುಜುಗರ

ಮಹಾರಾಷ್ಟ್ರ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು, ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಮಹಾಜನ್ ವರದಿಯಂತೆ ನಾವು ಕರ್ನಾಟಕಕ್ಕೆ ಹೋಗುತ್ತೇವೆ. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವಂತೆ ಸಿಎಂ ಬಸವರಾಜ ಬೋಮ್ಮಾಯಿ ಅವರಿಗೆ ಭೇಟಿ ಮಾಡಿ ಮನವಿ ಮಾಡುತ್ತೇವೆ. ನಾವು ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿದ್ದೇವೆ ಎಂದ ಮಹಾರಾಷ್ಟ್ರ ಕನ್ನಡಿಗರು ಹೇಳಿದ್ದಾರೆ.

ಕನ್ನಡ ಭಾಷಿಕರಿಗೆ ಕರವೇ ಆಹ್ವಾನ: ಜತ್ ತಾಲೂಕಿನ ಕನ್ನಡದ ಭಾಷಿಕರು ಕರ್ನಾಟಕ ಸೇರ್ಪಡೆಗೆ ಒಲವು ತೋರುತ್ತಿದ್ದಂತೆ ಜತ್ ತಾಲೂಕಿನ ಕನ್ನಡ ಭಾಷಿಕ ಪ್ರದೇಶಗಳಿಗೆ ಕಾಗವಾಡ ಕರವೇ ಅಧ್ಯಕ್ಷ ಭೇಟಿ ನೀಡಿದ್ದಾರೆ. ಕನ್ನಡಾಂಬೆಯ ಭಾವಚಿತ್ರ ನೀಡಿ ಕರ್ನಾಟಕಕ್ಕೆ‌ ಬರುವಂತೆ ಆಹ್ವಾನ ನೀಡಿದ್ದಾರೆ. ಅಲ್ಲದೇ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಕರ್ನಾಟಕ ಸರ್ಕಾರದ ಗಮನ‌ ಸೆಳೆಯುವ ಭರವಸೆ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ: ಮಹಾರಾಷ್ಟ್ರ ಸಿಎಂ, ಡಿಸಿಎಂ ಪ್ರತಿಕೃತಿ ದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.