ಚಿಕ್ಕೋಡಿ: ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಅಥಣಿಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಗಳನ್ನ ಹತ್ತಿದ್ರೆ, ಅರ್ಧ ದಾರಿಯಲ್ಲಿ ಇಳಿದು ತಳ್ಳಬೇಕು. ಈ ಸಮಸ್ಯೆ ಈಗಿನದಲ್ಲ. ಕಳೆದ ಹಲವಾರು ತಿಂಗಳಿನಿಂದ ಒಂದಿಲ್ಲೊಂದು ಅವ್ಯವಸ್ಥೆಯಿಂದ ಸಾರಿಗೆ ಬಸ್ಗಳ ಕಾಟ ತಾಳದೆ, ಇಲ್ಲಿನ ಜನರು ಹೈರಾಣಾಗಿದ್ದಾರೆ.
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಎದುರಾಗಿದ್ದು ದುರಂತ. ಇನ್ನಾದ್ರೂ, ಸಚಿವರು ಇತ್ತಕಡೆ ಗಮನ ಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.