ಬೆಳಗಾವಿ: ಸರ್ಕಾರ ಸಾರಿಗೆ ಸಿಬ್ಬಂದಿಗಳೊಂದಿಗೆ ನಡೆಸಿದ ಸಂಧಾನ ಸಕ್ಸಸ್ ಆಗಿದೆ.ಇಂದಿನಿಂದಲೇ ಬಸ್ ಸಂಚಾರ ಆರಂಭವಾಗಲಿವೆ ಎಂಬ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ಹಿನ್ನೆಲೆ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಪರದಾಡುವಂತಾಗಿದ್ದು, ಸರ್ಕಾರ ಮತ್ತು ಸಾರಿಗೆ ಸಿಬ್ಬಂದಿಗಳ ನಡುವಿನ ಗುದ್ದಾಟಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.
ಓದಿ: ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ: ಲಕ್ಷ್ಮಣ ಸವದಿ
ಸಾರಿಗೆ ಸಿಬ್ಬಂದಿ ಹೋರಾಟದಿಂದ 3 ದಿನಗಳ ಕಾಲ ಸಾರ್ವಜನಿಕರು ಬಸ್‌ಗಳಿಲ್ಲದೇ ತೀವ್ರ ಪರದಾಡುವಂತಾಗಿತ್ತು. ಇದರಿಂದಾಗಿ ರಾಜ್ಯ ಸರ್ಕಾರ ಮತ್ತು ಸಾರಿಗೆ ಒಕ್ಕೂಟದ ಮುಖಂಡರೊಂದಿಗೆ ಹಲವು ಬಾರಿ ನಡೆದ ಸಂಧಾನ ಸಭೆಗಳು ವಿಫಲವಾಗಿದ್ದವು. ಆದ್ರೆ, ಇಂದು ಸಂಜೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ನಡೆಸಿದ ಸಭೆ ಸಫಲವಾಗಿತ್ತು. ಇದರಿಂದ ಇಂದಿನಿಂದಲೇ ಸಾರಿಗೆ ಬಸ್ ಸಂಚಾರ ನಡೆಸಲಿವೆ ಎಂದು ಸಾರಿಗೆ ಸಚಿವರು ಹೇಳಿಕೆ ನೀಡಿದ್ದರು. ಇದನ್ನು ಸಾರಿಗೆ ಒಕ್ಕೂಟದ ಮುಖಂಡರು ಮೊದಮೊದಲು ಅಹೋರಾತ್ರಿ ಧರಣಿ ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದರು. ಈ ಮಾತನ್ನು ನಂಬಿ ನಗರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಾರ್ವಜನಿಕರು ಬಸ್ ಗಳಿಲ್ಲದೇ ಮತ್ತೆ ಪರದಾಡುವಂತಾಗಿದೆ.
ಕೆಲವರು ಬೆಂಗಳೂರು, ಮುಂಬಯಿ, ಪುಣೆ, ಮೈಸೂರು ಸೇರಿದಂತೆ ಇತರ ಕಡೆಗೆ ಸಂಚರಿಸುವ ಪ್ರಯಾಣಿಕರ ಬಸ್ ನಿಲ್ದಾಣಕ್ಕೆ ಬಂದಿದ್ರು. ಆದ್ರೆ, ಅಷ್ಟರಲ್ಲೇ ಮತ್ತೆ ಸಾರಿಗೆ ಸಿಬ್ಬಂದಿ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.