ETV Bharat / state

ಪರಿಷತ್​ನಲ್ಲಿ ಗ್ಯಾರಂಟಿ ಸ್ಕೀಮ್​​ಗೆ ಎಸ್ಸಿ-ಎಸ್ಟಿ ಹಣ ಬಳಕೆ ಗದ್ದಲ; ಬಿಜೆಪಿ, ಜೆಡಿಎಸ್ ಧರಣಿ - Basavaraja horatti

ಗ್ಯಾರಂಟಿ ಯೋಜನೆಗೆ ಎಸ್ಸಿ-ಎಸ್ಟಿ ಹಣ ಬಳಕೆ ವಿಚಾರ ಪರಿಷತ್​ನಲ್ಲಿಂದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಯಿತು.

ಪರಿಷತ್
ಪರಿಷತ್
author img

By ETV Bharat Karnataka Team

Published : Dec 8, 2023, 3:53 PM IST

ಬೆಂಗಳೂರು: ಎಸ್ಸಿ-ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ವಿಚಾರ ಇಂದು ವಿಧಾನ ಪರಿಷತ್​ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧರಣಿ ನಡೆಸಿದರು. ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದ ನಂತರ, ಪ್ರತಿಪಕ್ಷಗಳು ಧರಣಿ ವಾಪಸ್ ಪಡೆದವು.

ಪ್ರಶ್ನೋತ್ತರ ಕಲಾಪದಲ್ಲಿ ಎಸ್​ಸಿ-ಎಸ್​​ಪಿ/ಟಿಎಸ್​ಪಿ ಯೋಜನೆಗೆ ಗ್ಯಾರಂಟಿ ಹಣ ಬಳಸಿದ ವಿಚಾರದ ಕುರಿತು ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದ ಸರ್ಕಾರ, 5 ಗ್ಯಾರಂಟಿಗೆ ಈ ಹಣ ಬಳಸಿದ್ದಾಗಿ ಸ್ಪಷ್ಟನೆ ನೀಡಿತ್ತು. ಗೃಹಲಕ್ಷ್ಮಿ ಯೋಜನೆಗೆ 5075 ಕೋಟಿ, ಅನ್ನಭಾಗ್ಯಕ್ಕೆ 2779.50 ಕೋಟಿ, ಗೃಹಜ್ಯೋತಿಗೆ 2410 ಕೋಟಿ, ಶಕ್ತಿ ಯೋಜನೆಗೆ 812 ಕೋಟಿ, ಯುವನಿಧಿಗೆ 67.5 ಕೋಟಿ, ಅನುದಾನ ಒದಗಿಸಿರೋದಾಗಿ ಸ್ಪಷ್ಟನೆ ನೀಡಿದ್ದು, ಒಟ್ಟು ಗ್ಯಾರಂಟಿ ಯೋಜನೆಗೆ 11,114 ಕೋಟಿ ರೂ. ದಲಿತರ ಹಣ ಬಳಕೆ ಮಾಡಿದ್ದಾಗಿ ಮಾಹಿತಿ ನೀಡಿತ್ತು. ಆದರೆ, ಸಚಿವ ಪ್ರಿಯಾಂಕ್ ‌ಖರ್ಗೆ ಉತ್ತರಿಸುವಾಗ ಎಸ್​ಸಿ ಎಸ್ಪಿ ಟಿಎಸ್​ಪಿ ಹಣ ಬಳಸಿಲ್ಲ ಎಂದು ವಾದಿಸಿದರು.

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎಸ್​ಸಿ-ಎಸ್‌ಪಿ ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸ್ತಿದ್ದಾರೆ. ಸೆವೆನ್ ಡಿ ನಿಯಮವನ್ನು ಸರ್ಕಾರ ತೆಗೆದು ಹಾಕಿಲ್ಲ. ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ ಹಣ ಬೇರೆ ಇಲಾಖೆಯ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಬಳಸ್ತಿದ್ದೀರಿ?. ಉಚಿತ ಬಸ್​ನಲ್ಲಿ ಪ್ರಯಾಣಿಸುವವರಿಗೆ ಜಾತಿ ನೋಡಿ ಟಿಕೆಟ್​ ಕೊಡ್ತೀರಾ? ಅನ್ನಭಾಗ್ಯ ಯೋಜನೆ ಅಡಿ ಜಾತಿ ನೋಡಿ ಅಕ್ಕಿ ಕೊಡ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಹದೇವಪ್ಪ, ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್​ಸಿ-ಎಸ್​ಪಿ ಟಿಎಸ್ಪಿ ಯೋಜನೆ ತರಲಾಯಿತು. ಇದರ ಅಡಿ ಹಣವನ್ನು ಯಾವ ರೀತಿ ಬಳಕೆ ಮಾಡಬೇಕು ಅಂತ ಸೆವೆನ್ ಎ, ಸೆವೆನ್ ಬಿ, ಸೆವನ್ ಸಿ, ಸೆವೆನ್ ಡಿ ಅಂತ ಮಾಡಲಾಗಿದೆ. ಸೆವೆನ್ ಡಿ ಸೆಕ್ಷನ್ ಅನ್ನು ನಿನ್ನೆಯ ಕ್ಯಾಬಿನೆಟ್​ನಲ್ಲಿ ತೆಗೆದು ಹಾಕಿದ್ದೇವೆ. ಅನ್ಯ ಉದ್ದೇಶಗಳಿಗೆ ಯೋಜನೆ ಹಣ ಬಳಸಲು ಸಾಧ್ಯವಿಲ್ಲ. ಅದೇ ಸಮುದಾಯಕ್ಕೆ ಹಣ ಬಳಕೆ ಆಗಲಿದೆ ಎಂದರು.

ಇದನ್ನು ಒಪ್ಪದ ಛಲವಾದಿ ನಾರಾಯಣಸ್ವಾಮಿ, ವರ್ಷದ ಪ್ರಾರಂಭದಲ್ಲೇ 11 ಸಾವಿರ ಕೋಟಿ ಅನ್ಯ ಉದ್ದೇಶಕ್ಕೆ ಬಳಸಿಬಿಟ್ಟಿದ್ದೀರಿ. ಇಟ್ಟ ಹಣದಲ್ಲಿ 35% ಬೇರೆ ಉದ್ದೇಶಕ್ಕೆ ಬಳಸಿಬಿಟ್ಟಿದ್ದೀರಿ. ಗ್ಯಾರಂಟಿಗಳಿಗೆ ಬಳಸಿದ 11 ಸಾವಿರ ಕೋಟಿ ವಾಪಸ್ ಪಡೆಯಿರಿ. ಇಲ್ಲದಿದ್ದರೆ ಎಸ್.ಸಿ ಎಸ್.ಟಿ ಜನರಿಗೆ ಅನ್ಯಾಯ ಆಗುತ್ತದೆ. ಅಂಬೇಡ್ಕರ್ ರಕ್ತ ಮಹದೇವಪ್ಪ ಮೈಯ್ಯಲ್ಲಿ ಹರಿಯುತ್ತಿದೆ. ನಮ್ಮ ಕಣ್ಣನ್ನು ನಾವೇ ಚುಚ್ಚಿಕೊಂಡ ಹಾಗಾಗಲಿದೆ. ಕೂಡಲೇ ಗ್ಯಾರಂಟಿಗಳಿಗೆ ಬಳಸಿದ ಆ ಹಣ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಛಲವಾದಿ ನಾರಾಯಣಸ್ವಾಮಿಗೆ ತಪ್ಪು ಗ್ರಹಿಕೆ ಆಗಿಕೆ. ಫಲಾನುಭವಿ ಎಸ್​ಸಿ, ಎಸ್​ಟಿ ಅಂತ ಗೊತ್ತಾದರೆ ಮಾತ್ರ ಬಳಸಲು ಸಾಧ್ಯ ಎಂದರು. ಇದಕ್ಕೆ ದನಿಗೂಡಿಸಿದ ಸಚಿವ ಮಹದೇವಪ್ಪ, ಯೋಜನೆ ಹಣ ಬೇರೆ ಉದ್ದೇಶಕ್ಕೆ ಬಳಕೆ ಆಗಲು ಸಾಧ್ಯವೇ ಇಲ್ಲ ಎಂದರು.

ದಲಿತ ವಿರೋಧಿ ಸರ್ಕಾರ: ಆದರೆ ಸಚಿವರ ಸ್ಪಷ್ಟೀಕರಣವನ್ನು ಒಪ್ಪದ ಛಲವಾದಿ ನಾರಾಯಣಸ್ವಾಮಿ, ದಲಿತ ಸಮುದಾಯಕ್ಕೆ ಎಷ್ಟು ಕಾಳಜಿ ಅವರಿಗಿದೆಯೋ ನಮಗೂ ಅಷ್ಟೇ ಇದೆ. ಉತ್ತರದಲ್ಲಿ ಸ್ಪಷ್ಟವಾಗಿ ಹಣ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಐಡೆಂಟಿಫೈ ಮಾಡದೆಯೇ ಹಣ ನೀಡಿ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ನಂತರ ಎಸ್​ಸಿ, ಎಸ್​ಪಿ, ಟಿಎಸ್ಪಿ ಹಣ ಬಳಕೆ ವಿಚಾರ ಸರ್ಕಾರದ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದರು. ದಲಿತ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿದರು.

ಬಿಜೆಪಿ ಧರಣಿ ಟೀಕಿಸಿದ ಸಚಿವ ಮಹದೇವಪ್ಪ, 8400 ಕೋಟಿ ಹಣವನ್ನು ಬಿಜೆಪಿಯೇ ಡೀಮ್ಡ್ ಎಕ್ಸ್​ಪೆಂಡಿಚರ್ ದುರ್ಬಳಕೆ ಮಾಡಿಕೊಂಡಿದೆ ಎಂದರು. ಬೆನೆಫಿಷರಿಗಳನ್ನು ಗುರುತಿಸಿಯೇ ನಾವು ಹಂಚಿಕೆ ಮಾಡಿದ್ದೇವೆ. ಅಲ್ಲಿ ಗೂಳಿಹಟ್ಟಿ ಶೇಖರ್​ಗೆ ಒಳಗಡೆ ಬಿಡುವುದಿಲ್ಲ. ಇಲ್ಲಿ ಧರಣಿ ಮಾಡ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಿಷಯಾಂತರ ಮಾಡಲು ಬಿಜೆಪಿ ಧರಣಿ ಮಾಡುತ್ತಿದೆ ಎಂದು ಟೀಕಿಸಿದರು.

10 ನಿಮಿಷಗಳ ಕಲಾಪ ಮುಂದೂಡಿಕೆ: ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯಿತು. ಸದನ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿಕೆ ಮಾಡಿದರು.

ಕಲಾಪ ಪುನರಾರಂಭಗೊಂಡರೂ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಬಿಜೆಪಿ ಸದಸ್ಯರಿಗೆ ಜೆಡಿಎಸ್ ಸದಸ್ಯರು ಸಾಥ್​ ನೀಡಿ ಧರಣಿಯಲ್ಲಿ ಭಾಗವಹಿಸಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಸದನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಪೀಠದಿಂದ ಎದ್ದುನಿಂತ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರಕ್ಕೆ ಹೀಗೆ ಉತ್ತರ ಕೊಡಿ ಅಂತ ನಾನು ಹೇಳುವುದಕ್ಕೆ ಆಗುವುದಿಲ್ಲ. ನಿಮಗೆ ಸಚಿವರ ಉತ್ತರದಿಂದ ತೃಪ್ತಿ ಆಗದಿದ್ದರೆ, ಬೇರೆ ರೂಪದಲ್ಲಿ ಚರ್ಚೆಗೆ ನೀಡುತ್ತೇನೆ. ಬೇರೆ ಬೇರೆ ವಿಚಾರಗಳು, ಉತ್ತರ ಕರ್ನಾಟಕ ಭಾಗದ ವಿಷಯಗಳು ಚರ್ಚೆಗೆ ಬರಬೇಕು. ಧರಣಿ ವಾಪಸ್ ಪಡೆಯಿರಿ ಎಂದು ಪ್ರತಿಪಕ್ಷಗಳಿಗೆ ತಾಕೀತು ಮಾಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಎಸ್​ಸಿ ಎಸ್ಟಿಗಳಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಫಲಾನುಭವಿಗಳ ಅಕೌಂಟ್​ಗೆ ಹೋಗುತ್ತಿದೆ. ಎಸ್​ಸಿ, ಎಸ್​ಟಿಗಳಿಗೆ ಮಾತ್ರ ಎಸ್ಸಿಪಿ ಟಿಎಸ್ಪಿ ಹಣ ದಲಿತರಿಗೇ ಬರುತ್ತಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇತರ ಎಲ್ಲ ಸಮುದಾಯಗಳಿಗೆ ಹೇಗೆ ನೇರ ಡಿಬಿಟಿ ಆಗುತ್ತದೋ, ಹಾಗೆಯೇ ಇದು ಆಗುತ್ತಿದೆ. ಇದು ನ್ಯಾಯ ಸಮ್ಮತ ಅಲ್ಲ. ಶಾಸನಬದ್ದ 11 ಸಾವಿರ ಕೋಟಿ ಹಣವನ್ನು ವಾಪಸ್ ಪಡೆದು ಸಮುದಾಯಕ್ಕೆ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ದಲಿತ ವಿರೋಧಿ ಹೇಗೆ ಆಗುತ್ತದೆ?: ಇದಕ್ಕೆ ಉತ್ತರಿಸಿದ ಸಚಿವ ಮಹದೇವಪ್ಪ, ಎಸ್‌ಸಿಪಿ, ಟಿಎಸ್ಪಿ ಹಣ ಬಳಕೆಗೆ ನಾವೇ ಕಾಯ್ದೆ ಮಾಡಿದ್ದೇವೆ. ಸೆಕ್ಷನ್ ಸೆವೆನ್ ಸಿ ಅಡಿ ನಾವು ಬಳಕೆ ಮಾಡಿದ್ದೇವೆ. 2021 ರಿಂದ ಬಂದ ಇವರ ಸರ್ಕಾರಗಳೂ ಇದೇ ರೀತಿ ಬಳಕೆ ಮಾಡಿದ್ದಾರೆ. ನಾವು ಅದೇ ಸಮುದಾಯಕ್ಕೆ ಬಳಕೆ ಮಾಡಿದ್ದೇವೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದಕ್ಕೆ ಹೇಗೆ ಸಾಧ್ಯ? ದಲಿತ ವಿರೋಧಿ ಹೇಗೆ ಆಗುತ್ತದೆ? ಎಂದರು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮತ್ತು ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸಚಿವ ಕೆ ಎಚ್ ಮುನಿಯಪ್ಪ, ಈ ವಿಚಾರದ ಕುರಿತು ಅರ್ಧ ಗಂಟೆಗೆ ಅವಕಾಶ ನೀಡಿದಾಗ ಚರ್ಚೆ ಮಾಡಿ ಈಗ ವಿಶೇಷವಾಗಿ ಈ ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಿ ಎಂದು ಸಲಹೆ ನೀಡಿದರು. ಆದರೂ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಪ್ರತಿಪಕ್ಷಗಳ ಧರಣಿಗೆ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ, ಇದೇ ರೀತಿ ಧರಣಿ ಮುಂದುವರಿಸಿದರೆ, ನಾನು ನನ್ನದೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನಾನು ಯಾರಿಗೂ ಅಂಜುವುದಿಲ್ಲ ಎಂದು ತಾವೇ ಪೀಠದಿಂದ ಎದ್ದು ನಿಂತು ಸದನದ ಗದ್ದಲ ನಿಯಂತ್ರಣಕ್ಕೆ ಪ್ರಯತ್ನಿಸಿದರು. ಸದನ ನಡೆಸಬೇಕೋ ಬೇಡವಾ. ಈ ರೀತಿ ಸದನ ನಡೆಸಲು ನನಗೂ ಬಹಳ ನೋವಾಗುತ್ತಿದೆ. ನನಗೇನು ಕುರ್ಚಿಗೆ ಅಂಟಿಕೊಂಡು ಕೂರಬೇಕು ಎಂದೇನಿಲ್ಲ. ಇದನ್ನೆಲ್ಲಾ ನೋಡಿದರೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಅನ್ನಿಸುತ್ತದೆ ಎಂದು ಪ್ರತಿಪಕ್ಷಗಳ ವರ್ತನೆಗೆ ಅಸಹನೆ ವ್ಯಕ್ತಪಡಿಸುತ್ತಾ, ಸದನ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಧರಣಿ ಕೈಬಿಟ್ಟ ಬಿಜೆಪಿ ಜೆಡಿಎಸ್ ಸದಸ್ಯರು: ಸೋಮವಾರ ಅರ್ದಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದರೂ ನಿಯಮ 330ರ ಅಡಿ ಚರ್ಚೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಧರಣಿ ಮುಂದುವರೆಸಿದರು. ಮತ್ತೊಮ್ಮೆ ಸಭಾಪತಿ ಎಚ್ಚರಿಕೆ ನೀಡಿ, ನಾನು ಈಗಾಗಲೇ ತೀರ್ಮಾನ ಮಾಡಿದ್ದೇನೆ. ಸೋಮವಾರ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ. ಇದರಲ್ಲಿ ಬದಲಾವಣೆ ಇಲ್ಲ. ಧರಣಿ ನಿಲ್ಲಿಸಿ ಸದನ ನಡೆಸಲು ಅನುವು ಮಾಡಿಕೊಡಿ ಎಂದು ಸೂಚಿಸಿದರು. ಸಭಾಪತಿಗಳ ನಿರ್ಧಾರವನ್ನು ಕಡೆಗೂ ಒಪ್ಪಿದ ಬಿಜೆಪಿ ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಟರು.

ಇದನ್ನೂ ಓದಿ: ಕಾರವಾರದ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ : ಸಚಿವ ಶರಣಪ್ರಕಾಶ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.