ETV Bharat / state

ಪಂಚಮಸಾಲಿ ಸಮಾಜದ ಪಂಚ ವಿರಾಟ್ ಸಮಾವೇಶ.. ಕುಂದಾನಗರಿಯಲ್ಲಿ ಜನಸಾಗರ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಆಗಮಿಸಿದ್ದಾರೆ.

ಪಂಚಮಸಾಲಿ ಸಮಾಜದ ಪಂಚ ವಿರಾಟ್ ಸಮಾವೇಶ
ಪಂಚಮಸಾಲಿ ಸಮಾಜದ ಪಂಚ ವಿರಾಟ್ ಸಮಾವೇಶ
author img

By

Published : Dec 22, 2022, 6:18 PM IST

Updated : Dec 22, 2022, 7:43 PM IST

ಪಂಚಮಸಾಲಿ ಸಮಾಜದ ಪಂಚ ವಿರಾಟ್ ಸಮಾವೇಶ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಪಂಚಮಸಾಲಿ ಶಕ್ತಿ ಪ್ರದರ್ಶಿಸಿದರು.

ಹಿರೇಬಾಗೇವಾಡಿಯಿಂದ ಬೆಳಗಾವಿಯ ಸುವರ್ಣಸೌಧ ಆವರಣದವರೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಪಾದಯಾತ್ರೆಯ ಮೂಲಕ ಆಗಮಿಸಿ ಬೃಹತ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾದಯಾತ್ರೆ ಉದ್ದಕ್ಕೂ ಸಾವಿರಾರು ಜನ ಶ್ರೀಗಳ ಜೊತೆಗೆ ಹೆಜ್ಜೆ ಹಾಕಿದರು. ಪಾದಯಾತ್ರೆ ಹಿನ್ನೆಲೆಯಲ್ಲಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಐದು ಕಿಲೋಮೀಟರ್ ಹೆಚ್ಚು ವಾಹನ ದಟ್ಟಣೆ ಅಡಚಣೆ ಉಂಟಾಗಿತ್ತು.

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ: ಸುವರ್ಣಸೌಧ ಪ್ರದೇಶದ ಹೊರಗಡೆ ಒಂದು ನೂರು ಎಕರೆ ಪ್ರದೇಶದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶದಲ್ಲಿ ಜನಸ್ತೋಮದಿಂದ ಆವರಣ ತುಂಬಿ ತುಳುಕುತ್ತಿದೆ. ಒಂದು ವೇಳೆ ಸರ್ಕಾರ ಇವತ್ತು ಸಂಜೆವರೆಗೆ 2ಎ ಮೀಸಲಾತಿ ನೀಡದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಸಿಬ್ಬಂದಿ ನೇಮಕ: ಸರ್ಕಾರದ ನಡೆಯ ಕಡೆಗೆ ಎಲ್ಲರ ಚಿತ್ತ ಮೂಡಿದ್ದು, ಸರ್ಕಾರದ ಗೆಲುವಿಗಾಗಿ ಪಂಚಮಸಾಲಿ ಸಮಾಜ ಜಾತಕಪಕ್ಷಿಯಂತೆ ಕಾಯುತ್ತಿದೆ. ಬೃಹತ್ ಸಮಾವೇಶದಲ್ಲಿ ಪಂಚಮಸಾಲಿ ಸಮಾಜದ ಹಲವು ಮುಖಂಡರು ಶ್ರೀಗಳಿಗೆ ಸಾತ್ ನೀಡಿದ್ದು, ಮುಖ್ಯಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್​ಗೆ ಏರ್ಪಡಿಸಲಾಗಿದೆ.

ಓದಿ: ಮೀಸಲಾತಿ ನೀಡದಿದ್ದರೆ ನಾಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ.. ಜಯಮೃತ್ಯುಂಜಯ ಸ್ವಾಮೀಜಿ ‌

Last Updated : Dec 22, 2022, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.