ETV Bharat / state

ಪೊಲೀಸರಿಗೆ ಊಟ ಬಡಿಸಿದ ಪಂಚಮ ಶಿವಲಿಂಗೇಶ್ವರ ಸ್ವಾಮಿ - sankeshwara police station

ಸಂಕೇಶ್ವರ ಪೊಲೀಸ್​​ ಠಾಣೆಯ ಪೊಲೀಸರಿಗೆ ನಿಡಸೋಸಿ ಸಿದ್ದ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಊಟದ ವ್ಯವಸ್ಥೆ ಮಾಡಿದರು.

Panchama Shivalingeswara swamy treats police for restless duty
ಲಾಕ್​​ಡೌನ್​​​: ಪೊಲೀಸರಿಗೆ ಊಟ ಬಡಿಸಿ ಮಾದರಿಯಾದ ಪಂಚಮ ಶಿವಲಿಂಗೇಶ್ವರ ಸ್ವಾಮಿ
author img

By

Published : Apr 9, 2020, 9:57 PM IST

ಬೆಳಗಾವಿ: ಲಾಕ್​ಡೌನ್ ಹಿನ್ನೆಲೆ ಪೊಲೀಸರು ಹಗಲು ರಾತ್ರಿ ಎನ್ನದೆ ದೇಶ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸಂಕೇಶ್ವರ ಪೊಲೀಸ್​​ ಠಾಣೆಯ ಪೊಲೀಸರಿಗೆ ನಿಡಸೋಸಿ ಸಿದ್ದ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಊಟದ ವ್ಯವಸ್ಥೆ ಮಾಡಿದರು.

ಪ್ರತಿದಿನದ ಊಟಕ್ಕೂ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಶ್ರೀಗಳು ಪೊಲೀಸ್​​ ಸಿಬ್ಬಂದಿಗೆ ಸ್ವತಃ ತಾವೇ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯರು, ದೇಶಕ್ಕೆ ಮತ್ತು ದೇಶದ ಜನತೆಗೆ ಈ ತರಹದ ತೊಂದರೆಗಳು ಉಂಟಾದ ಸಂದರ್ಭದಲ್ಲಿ ಮಠಮಾನ್ಯಗಳು, ಸಂಘ-ಸಂಸ್ಥೆಗಳು ದೇಶದ ಮತ್ತು ತುಂಬಾ ತೊಂದರೆಯಲ್ಲಿರುವ ಜನತೆಯ ಸಹಕಾರಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದರು.

ಜೊತೆಗೆ ಆದಷ್ಟು ಬೇಗ ಈ ದೇಶದಿಂದ ಅಷ್ಟೇ ಅಲ್ಲದೇ ಜಗತ್ತಿನಿಂದಲೇ ಕೊರೊನಾ ವೈರಸ್ ನಿರ್ಮೂಲನೆಯಾಗಿ ಎಲ್ಲರೂ ನಿರ್ಭೀತರಾಗಿ ಸಂತೋಷದಿಂದ ಇರುವಂತೆ ಆಗಲಿ ಎಂದು ದೇವರಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್​​​ಐ ಗಣಪತಿ ಕೊಗನೊಳ್ಳಿ, ಭೀಮಪ್ಪಾ ನಾಗನೂರೆ, ರಾಜಾಪೂರೆ, ಸಂಜು ಪಾಟೀಲ ಹಾಗೂ ಶ್ರೀಮಠದ ಸಾಧಕರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.