ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಆಗಿರುವ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಮನೆ, ಜಮೀನುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಮಗೆ ಮೂಲಭೂತ ಸೌಕರ್ಯಗಳಿಲ್ಲದೆ ಹೆಣಗಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಜನರು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಕೊಪ್ಪಳದ ಪ್ಯಾಡ್ ವುಮೆನ್ ಸಹ ಸಂತ್ರಸ್ತ ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ನೀಡಲು ಮುಂದಾಗಿದ್ದಾರೆ. ಕೊಪ್ಪಳದ ಪ್ಯಾಡ್ ವುಮೆನ್ ಎಂದು ಕರೆಸಿಕೊಳ್ಳುತ್ತಿರುವ ಭಾರತಿ ಗುಡ್ಲಾನೂರು ಅವರು ತಾವು ತಯಾರಿಸುತ್ತಿರುವ ಸ್ಯಾನಿಟರಿ ಪ್ಯಾಡ್ಗಳನ್ನು ಸಂತ್ರಸ್ತ ಮಹಿಳೆಯರಿಗೆ ಕಳಿಸಿದ್ದಾರೆ.
ಕಾಮನ್ ಸರ್ವೀಸ್ ಸೆಂಟರ್ ಪ್ರತಿನಿಧಿಗಳ ಮೂಲಕ 800 ಪ್ಯಾಡ್ ಗಳನ್ನು ಬೆಳಗಾವಿ ಜಿಲ್ಲೆಯ ಸಂತ್ರಸ್ತ ಮಹಿಳೆಯರಿಗೆ ರವಾನಿಸಿದ್ದಾರೆ. ನೆರೆ ಪ್ರದೇಶದ ಮಹಿಳೆಯರಿಗೆ ಇದು ಅಗತ್ಯ ವಸ್ತುವಾಗಿದೆ. ಹೀಗಾಗಿ, ತಮ್ಮದೂ ಒಂದಿಷ್ಟು ನೆರವು ಇರಲಿ ಎಂಬ ಉದ್ದೇಶರಿಂದ ಸುಮಾರು 800 ಪ್ಯಾಡ್ ಗಳನ್ನು ಉಚಿತವಾಗಿ ಕಳಿಸಿದ್ದೇನೆ ಎಂದು ಭಾರತಿ ಗುಡ್ಲಾನೂರು ತಿಳಿಸಿದ್ದಾರೆ.