ETV Bharat / state

ಶ್ರೀಮಂತ್​ ಪಾಟೀಲ್​ 2 ವರ್ಷದಿಂದ ಕಬ್ಬು ಬಾಕಿ ನೀಡಿಲ್ಲ, ಮತ ಹಾಕಿದ್ರೆ ಏನು ಪ್ರಯೋಜನ?: ನಾಡಗೌಡ - ಕರ್ನಾಟಕ ಉಪಚುನಾವಣೆ

ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳನ್ನು ಹೇಳಿ, ಮತಯಾಚಿಸುತ್ತೇವೆ ಎಂದು ಶಾಸಕ ವೆಂಕಟರಾವ್ ರೆಡ್ಡಿ ಹೇಳಿದರು.

Ours party is a pro farmers: mla nadagouda
ಶಾಸಕ ವೆಂಕಟರಾವ್ ರೆಡ್ಡಿ
author img

By

Published : Nov 26, 2019, 3:12 PM IST

ಕಾಗವಾಡ: ಜೆಡಿಎಸ್ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ. ಸಾಲಮನ್ನಾ ಸೇರಿದಂತೆ ಅವರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದೆ. ಇದನ್ನೆ ಹೇಳಿ ಮತ ಕೇಳುತ್ತೇವೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಶಾಸಕ ವೆಂಕಟರಾವ್ ರೆಡ್ಡಿ

ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತುಗಶೆಟ್ಟಿ ಪರ ಮತಯಾಚಿಸಿದ ಮಾತನಾಡಿದ ಅವರು, ಶುಗರ್ ಕಾರ್ಖಾನೆ ಮಾಲೀಕರಾದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಎರಡು ವರ್ಷದಿಂದ ರೈತರ ಕಬ್ಬಿನ ಹಣ ಪಾವತಿಸಿಲ್ಲ. ಅವರಿಗೆ ಮತ ಹಾಕಿದರೆ ಆಗುವ ಪ್ರಯೋಜನವಾದರೂ ಏನು? ಪ್ರವಾಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಿಜೆಪಿ ನಾಯಕರು ಯಾವುದೇ ರೀತಿ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಹೇಳಿದರು.

ಶ್ರೀಮಂತ ಪಾಟೀಲ ಸುಳ್ಳು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಅವರಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದರು.

Intro:ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ ಶ್ರೀಮಂತ ಪಾಟೀಲ : ವೆಂಕಟರಾವ್‌ ನಾಡಗೌಡ
Body:
ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ ಶ್ರೀಮಂತ ಪಾಟೀಲರಿಗೆ ಕಾಗವಾಡ ಮತಕ್ಷೇತ್ರ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಾಸಕ ನಾಡಗೌಡ ಹೇಳಿದರು.

ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತುಗಶೆಟ್ಟಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ಶುಗರ್ ಕಾರ್ಖಾನೆ ಮಾಲೀಕರಾದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಎರಡು ವರ್ಷದಿಂದ ರೈತರ ಕಬ್ಬಿನ ಬಿಲ್ಲು ಪಾವತಿಸಿಲ್ಲ ,ರೈತರಿಗೆ ಸ್ಪಂದಿಸದ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಮತ ನೀಡಬಾರದು, ಪ್ರವಾಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಬಿಜೆಪಿ ನಾಯಕರು ಯಾವುದೇ ರೀತಿ ಜನರ ಕಷ್ಟಕ್ಕೆ ದಾವಿಸಿಲ್ಲ. ಇಂತಹ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬಾರದು ಎಂದು ಮನವಿ ಮಾಡಿದರು.

ಕಾಗವಾಡ ಮತ ಕ್ಷೇತ್ರದ ಅಭಿವೃದ್ಧಿಗೆ ೨೫೦ ಕೋಟಿ ಅನುದಾನವನ್ನು ಸಿಎಂ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳುವ ಶ್ರೀಮಂತ ಪಾಟೀಲ ಸುಳ್ಳು ಹೇಳುತ್ತಿದ್ದಾರೆ, ಅಷ್ಟು ಅನುದಾನ ಬಿಡುಗಡೆ ಮಾಡಿದ್ದು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಂದರು.

ರೈತರ ಕಷ್ಟಗಳಿಗೆ ಸ್ಪಂದಿಸುವ ಜೆಡಿಎಸ್ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ರೈತರ ಪರವಾದ ಕೆಲಸ ಮಾಡುತ್ತಾರೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿಯಾದ ಶ್ರೀಶೈಲ ತುಗಶೆಟ್ಟಿ ಬೆಂಬಲಿಸಿ ಕುಮಾರಸ್ವಾಮಿ ಕೈ ಬಲ ಪಡಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ, ಕಲ್ಲಪ್ಪ ಮಗ್ಗೆಣ್ಣವರ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.