ಬೆಳಗಾವಿ: ಬಿಜೆಪಿಯಲ್ಲಿ ಭಿನ್ನಮತವಿದ್ದು, ಸರ್ಕಾರ ತಾನೇ ಕುಸಿತವಾಗಲಿದೆ ಎಂಬ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಸೂರ್ಯ ,ಚಂದ್ರರಷ್ಟೇ ಸುಭದ್ರವಾಗಿರಲಿದೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ, ಕಾಂಗ್ರೆಸ್ನವರು ತಮಗಾದ ಆಘಾತ ಬೇರೆಯವರಿಗೂ ಆಗುತ್ತೆ ಎಂಬ ಭ್ರಮೆಯಲ್ಲಿದೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ತೊಂದರೆ ಇಲ್ಲ. ಒಗ್ಗಟ್ಟಾಗಿ ಹೋಗುತ್ತೇವೆ ಎಂದು ತಿರುಗೇಟು ನೀಡಿದರು.
2023ವರೆಗೂ ಸರ್ಕಾರ ಸುಭದ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಅಧಿಕಾರ ನಡೆಸಲಿದೆ. ಕೊರೊನಾ ವೈರಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚಾಲಕರು ಮತ್ತು ನಿರ್ವಾಹಕರಿಗೆ ಮಾಸ್ಕ್ ಕೊಡುತ್ತೇವೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ಹಾನಿಯಲ್ಲಿವೆ. ನಮಗೆ ಲಾಭ ಗಳಿಸಬೇಕೆಂಬ ಉದ್ದೇಶವಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶವಿದೆ ಎಂದರು.