ETV Bharat / state

ಸರ್ಕಾರದಲ್ಲಿ ಹಣ ಇದೆಯಾ ಇಲ್ವಾ ಅಂತಾ ಸಿಎಂ ಅವರನ್ನ ಕೇಳುತ್ತೇನೆ : ಸಿದ್ದರಾಮಯ್ಯ - ವಿಪಕ್ಷ ನಾಯಕ ಸಿದ್ದರಾಮಯ್ಯ

2019, 2020ರಲ್ಲಿ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಗೋಕಾಕ್, ರಾಯಬಾಗ ಸೇರಿ ಅನೇಕ ಕಡೆ ಪರಿಹಾರ ಕೊಟ್ಟಿಲ್ಲ. ಒಂದೇ ಕಂತಿನ ಹಣ‌ ಮಾತ್ರ ಬಿಡುಗಡೆ ಆಗಿದೆ. ಸರ್ಕಾರದಲ್ಲಿ ಹಣ ಇದೆಯಾ ಇಲ್ವಾ ಅಂತಾ ನಾಳೆ ಸದನದಲ್ಲಿ ಕೇಳುತ್ತೇನಿ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡುತ್ತೇ‌ನೆ..

ಪಕ್ಷ ನಾಯಕ ಸಿದ್ದರಾಮಯ್ಯ
ಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Dec 12, 2021, 10:14 PM IST

ಬೆಳಗಾವಿ : ಅಧಿವೇಶನದಲ್ಲಿ ನೆರೆ ಪರಿಹಾರ, ಉತ್ತರಕರ್ನಾಟಕ ಸಮಸ್ಯೆ, ಕಬ್ಬಿನ ಬಿಲ್ ಬಾಕಿ, ಮನೆ ನಿರ್ಮಾಣ, ಮತಾಂತರ ಕಾಯ್ದೆ, ಭ್ರಷ್ಟಾಚಾರ ಸೇರಿದಂತೆ 40ರಷ್ಟು ಕಮಿಷನ್ ವಿಚಾರಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಾಳಿಯಿಂದ ನಡೆಯುವ ಅಧಿವೇಶನ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು..

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ರೈತರು ಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ, ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಅದರಲ್ಲಿ ನೆರೆ ಪರಿಹಾರ, ಉತ್ತರಕರ್ನಾಟಕ ಸಮಸ್ಯೆ, ಕಬ್ಬಿನ ಬಿಲ್ ಬಾಕಿ, ಮನೆ ನಿರ್ಮಾಣ, ಮತಾಂತರ ಕಾಯ್ದೆ, ಭ್ರಷ್ಟಾಚಾರ, ಶೇ. 40ರಷ್ಟು ಕಮಿಷನ್ ವಿಚಾರ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದರು‌.

ಎಸ್ ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು : ಭ್ರಷ್ಟಾಚಾರ ವಿಚಾರದಲ್ಲಿ ಸೂಕ್ತ ತನಿಖೆ ಮಾಡಲಿ. ನಾನು ಸುಮ್ಮನೆ ಆರೋಪ ಮಾಡಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇದು ಸುಳ್ಳಾ?.. ಕೆಂಪಣ್ಣ ಬರೆದ ಪತ್ರದ ಪ್ರತಿ ನನ್ನ ಬಳಿ ಇದೆ. ಕಾಂಗ್ರೆಸ್ ಶೇ 10ರಷ್ಟು ಭ್ರಷ್ಟಾಚಾರ ಎಂದು ಪ್ರಧಾನಿ ಮೋದಿ ಆರೋಪ ಮಾಡಿದರು. ಅವರ ಬಳಿ ಏನು ದಾಖಲೆ ಇತ್ತು ಎಂದು ಪ್ರಶ್ನಿಸಿದರು.

ಎಪಿಎಂಸಿ ಕಾಯ್ದೆ ವಾಸಪ್ ಬಗ್ಗೆ ಸಚಿವ ಸೋಮಶೇಖರ್​​ ಹೇಳಿಕೆ ವಿಚಾರಕ್ಕೆ ಮಾತನಾಡಿ, ಕಾಯ್ದೆ ಬಗ್ಗೆ ಏನು ಅನಕೂಲ ಆಗಿದೆ ಅಂತಾ ರೈತರು ಹೇಳಿದ್ದಾರಾ?. ರೈತರು ಹೇಳಬೇಕಲ್ಲ. ಸೋಮಶೇಖರ್ ಸಮರ್ಥನೆಗೆ ಹೇಳೋದು ಅಲ್ಲ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಬಂದಿಲ್ಲ.

2019, 2020ರಲ್ಲಿ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಗೋಕಾಕ್, ರಾಯಬಾಗ ಸೇರಿ ಅನೇಕ ಕಡೆ ಪರಿಹಾರ ಕೊಟ್ಟಿಲ್ಲ. ಒಂದೇ ಕಂತಿನ ಹಣ‌ ಮಾತ್ರ ಬಿಡುಗಡೆ ಆಗಿದೆ. ಸರ್ಕಾರದಲ್ಲಿ ಹಣ ಇದೆಯಾ ಇಲ್ವಾ ಅಂತಾ ನಾಳೆ ಸದನದಲ್ಲಿ ಕೇಳುತ್ತೇನಿ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡುತ್ತೇ‌ನೆ ಎಂದರು.

ರೈತರ ಸಮಸ್ಯೆ ಬಗ್ಗೆ ಸಿಎಂ ಹಗುರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಟ್ ಕಾಯಿನ್ ಬಗ್ಗೆ ಸದನದಲ್ಲಿ ಪ್ರಸ್ತಾಪದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಅಕಾಲಿಕ ಮಳೆಯಿಂದ 6 ಲಕ್ಷ ಹೆಕ್ಟೇರ್ ‌ಪ್ರದೇಶದಲ್ಲಿ ಭತ್ತ ನಾಶವಾಗಿದೆ. 1 ಗುಂಟೆಗೆ 67 ರೂಪಾಯಿ ಪರಿಹಾರ ಯಾವುದಕ್ಕೂ ಸಾಕಾಗಲ್ಲ. ಒಟ್ಟಾರೆ ಬಿಜೆಪಿ ಸರ್ಕಾರ ರೈತ ವಿರೋಧಿ ಎನ್ನುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆಯಾ ವಿವಾದಿತ ಮತಾಂತರ ನಿಷೇಧ ಮಸೂದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.