ETV Bharat / state

ಹುಕ್ಕೇರಿ ಪುರಸಭೆಯಲ್ಲಿ ಆಪರೇಶನ್ ಕಮಲ ಯಶಸ್ವಿ : ಬಿಜೆಪಿ ತೆಕ್ಕೆಗೆ ಆಡಳಿತ - Hukkeri Municipal Congress Members joined BJP

ಹುಕ್ಕೇರಿಯಲ್ಲಿ 8 ಜನ ಬಿಜೆಪಿ ಹಾಗೂ 12 ಜನ ಕಾಂಗ್ರೆಸ್​ ಪಕ್ಷದಿಂದ ಪುರಸಭೆಗೆ ಆಯ್ಕೆಯಾಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಸ್ಟರ್ ಪ್ಲಾನ್​ನಂತೆ ನಾಲ್ಕು ಜನ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್​ ಪಕ್ಷಕ್ಕೆ ಹಿನ್ನಡೆಯಾಗಿದೆ.

Operation Kamala in Hukkeri Municipality
ಹುಕ್ಕೇರಿ ಪುರಸಭೆ ಬಿಜೆಪಿ ತೆಕ್ಕೆಗೆ
author img

By

Published : Oct 28, 2020, 5:47 PM IST

ಚಿಕ್ಕೋಡಿ : ಆಪರೇಷನ್ ಕಮಲದ ಮೂಲಕ ಹುಕ್ಕೇರಿ ಪುರಸಭೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಚುನಾವಣೆಯ ಕೊನೆಗಳಿಗೆಯಲ್ಲಿ ಭಾರೀ ಹೈಡ್ರಾಮ ನಡೆದು, ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವಂತಾಯಿತು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 23 ಜನ ಪುರಸಭೆ ಸದಸ್ಯರ ಪೈಕಿ 8 ಜನ ಬಿಜೆಪಿ ಹಾಗೂ 12 ಜನ ಕಾಂಗ್ರೆಸ್​ ಪಕ್ಷದಿಂದ ಪುರಸಭೆಗೆ ಆಯ್ಕೆಯಾಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಸ್ಟರ್ ಪ್ಲಾನ್​ನಂತೆ ನಾಲ್ಕು ಜನ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್​ ಪಕ್ಷಕ್ಕೆ ಹಿನ್ನಡೆಯಾಗಿದೆ.

ಹುಕ್ಕೇರಿ ಪುರಸಭೆ ಬಿಜೆಪಿ ತೆಕ್ಕೆಗೆ

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ‌ ಉಮೇಶ್​ ಕತ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಅಣ್ಣಪ್ಪಾ ಪಾಟೀಲಗೆ ಅಧ್ಯಕ್ಷ ಹಾಗೂ ಪಕ್ಷೇತರ ಸದಸ್ಯ ಆನಂದ ಗಂಧ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ಹುಕ್ಕೇರಿ ಪುರಸಭೆಯಲ್ಲಿ ಆಪರೇಶನ್ ಕಮಲ ಯಶಸ್ವಿಯಾಗಿದ್ದು, ಪುರಸಭೆಯ ಆಡಳಿತ ಬಿಜೆಪಿ ಪಾಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.