ಗೋಕಾಕ: ಆಪರೇಷನ್ ಬೃಹತ್ ಬಂಡೆ ಕಾರ್ಯಾಚರಣೆ ಮುಂದುವರೆದಿದ್ದು, ಇಂದು 210 ಟನ್ ತೂಕದ ಬಂಡೆಗಲ್ಲನ್ನು ಯಶಸ್ವಿಯಾಗಿ ಸ್ಫೋಟಿಸಲಾಗಿದೆ.
ನಗರದ ಮಲ್ಲಿಕಾರ್ಜುನ ಬೆಟ್ಟದ ಮೇಲಿರುವ ಬಂಡೆಯನ್ನು ಮೊದಲ ಹಂತದಲ್ಲಿ ರಾಜಸ್ಥಾನ, ಇಳಕಲ್ ಮತ್ತು ಗೋಕಾಕ್ ಮೂಲದ ಬಂಡೆ ಒಡೆಯುವ ತಜ್ಞರಿಂದ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ, ಬಂಡೆಯನ್ನು ಯಶಸ್ವಿಯಾಗಿ ಸ್ಫೋಟಿಸಲಾಗಿದೆ. ನಾಲ್ಕು ರಂಧ್ರಗಳಲ್ಲಿ ಮದ್ದು ತುಂಬಿ ಬ್ಲಾಸ್ಟ್ ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹಿಟಾಚಿಯಿಂದ ಒಡೆದ ಬಂಡೆಗಲ್ಲಿನ ಚೂರುಗಳನ್ನ ಸಿಬ್ಬಂದಿ ಹೊರತೆಗೆಯುತ್ತಿದ್ದಾರೆ. ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಸಾಥ್ ನೀಡಿದರು. ಸಂಜೆ ವೇಳೆಗೆ ಆಪರೇಷನ್ ಬೃಹತ್ ಬಂಡೆ ಕಾರ್ಯಾಚರಣೆ ಮುಗಿಯುವ ಸಾಧ್ಯತೆಯಿದೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.