ಬೆಳಗಾವಿ/ನವದೆಹಲಿ: ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೆಹಲಿಯ ದ್ವಾರಕಾ ಪ್ರದೇಶದ ಸೆಕ್ಟರ್ ನಂಬರ್ 24ರಲ್ಲಿರುವ ಲಿಂಗಾಯತ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 25 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
![Suresh Angadi Cremation, Suresh Angadi Cremation in Delhi, Suresh Angadi Cremation news, Suresh Angadi news, Suresh Angadi no more news, ಸುರೇಶ್ ಅಂಗಡಿ ಅಂತ್ಯಕ್ರಿಯೆ, ದೆಹಲಿಯಲ್ಲಿ ಸುರೇಶ್ ಅಂಗಡಿ ಅಂತ್ಯಕ್ರಿಯೆ, ಸುರೇಶ್ ಅಂಗಡಿ ಅಂತ್ಯಕ್ರಿಯೆ ಸುದ್ದಿ, ಸುರೇಶ್ ಅಂಗಡಿ ಸುದ್ದಿ, ಸುರೇಶ್ ಅಂಗಡಿ ಸಾವು ಸುದ್ದಿ,](https://etvbharatimages.akamaized.net/etvbharat/prod-images/kn-bgm-08-24-angadi-cremation-preparation-7201786_24092020145801_2409f_1600939681_473.jpg)
ಮತ್ತೊಂದೆಡೆ ಸುರೇಶ್ ಅಂಗಡಿ ಅವರ ಹಿರಿಯ ಪುತ್ರಿ ಸ್ಫೂರ್ತಿ, ಮೊಮ್ಮಗಳು ರಿದ್ದಿಶಾ ಏಮ್ಸ್ ಆಸ್ಪತ್ರೆ ತಲುಪಿದ್ದಾರೆ. ಸಂಜೆ 4 ಗಂಟೆಗೆ ಲಿಂಗಾಯತ ಸಮುದಾಯದ ಧಾರ್ಮಿಕ ವಿಧಿ ವಿಧಾನ ಪ್ರಕಾರ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಧಾರ್ಮಿಕ ವಿಧಿವಿಧಾನ ನೆರವೇರಿಸಲು ಬಾಳಯ್ಯ ಹಿರೇಮಠ ಕೂಡ ವಿಶೇಷ ವಿಮಾನದಲ್ಲಿ ಅಂಗಡಿ ಅವರ ಕುಟುಂಬ ಸದಸ್ಯರ ಜೊತೆಗೆ ದೆಹಲಿಗೆ ತೆರಳಿದ್ದಾರೆ.
![Suresh Angadi Cremation, Suresh Angadi Cremation in Delhi, Suresh Angadi Cremation news, Suresh Angadi news, Suresh Angadi no more news, ಸುರೇಶ್ ಅಂಗಡಿ ಅಂತ್ಯಕ್ರಿಯೆ, ದೆಹಲಿಯಲ್ಲಿ ಸುರೇಶ್ ಅಂಗಡಿ ಅಂತ್ಯಕ್ರಿಯೆ, ಸುರೇಶ್ ಅಂಗಡಿ ಅಂತ್ಯಕ್ರಿಯೆ ಸುದ್ದಿ, ಸುರೇಶ್ ಅಂಗಡಿ ಸುದ್ದಿ, ಸುರೇಶ್ ಅಂಗಡಿ ಸಾವು ಸುದ್ದಿ,](https://etvbharatimages.akamaized.net/etvbharat/prod-images/kn-bgm-08-24-angadi-cremation-preparation-7201786_24092020145801_2409f_1600939681_983.jpg)