ಚಿಕ್ಕೋಡಿ: ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಈರುಳ್ಳಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಸರ್ಕಾರ ನೀಡುವ ಹಣದಲ್ಲಿ ಈರುಳ್ಳಿ ಕೊಳ್ಳಲಾಗದೆ ಹಾಗೇ ಈರುಳ್ಳಿ ಇಲ್ಲದೆ ಅಡುಗೆ ಕೂಡ ಮಾಡಲಾಗದೆ ಶಿಕ್ಷಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ. ಮಾಡುವ ಅಡುಗೆಯಲ್ಲಿ ಈರುಳ್ಳಿ ಪ್ರಮಾಣ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ರುಚಿಯಾದ ಅಡುಗೆ ಸಿಗುತ್ತಿಲ್ಲವಂತೆ.
ಇದು ಈ ಒಂದು ಶಾಲೆಯ ಕಥೆಯಲ್ಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.