ETV Bharat / state

ಕೃಷ್ಣಾ ನದಿಗೆ ನೀರು ಬಿಡಿಸುವಂತೆ ಒತ್ತಾಯಿಸಿ ಮುಂದುವರಿದ ರೈತರ ಪ್ರತಿಭಟನೆ - Kannada news

ಕೃಷ್ಣ ನದಿ ತೀರದ ರೈತರ ಹೋರಾಟ ಮುಂದುವರಿದಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿದೇಶ ಪ್ರವಾಸದಿಂದ ಹಿಂದಿರುಗಿದ್ದು, ತಕ್ಷಣ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕೃಷ್ಣಾ ನದಿ ನೀರು ಹೋರಾಟ ಸಮಿತಿ ಆಗ್ರಹಿಸಿದೆ.

ಒಂಬತ್ತನೇ ದಿನಕ್ಕೆ ಕಾಲಿಟ್ಟ ಕೃಷ್ಣಾ ನದಿ ನೀರು ಹೋರಾಟ
author img

By

Published : May 28, 2019, 10:33 PM IST

Updated : May 28, 2019, 11:50 PM IST

ಚಿಕ್ಕೋಡಿ: ಶಾಶ್ವತ ನೀರಿಗಾಗಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಒಂಭತ್ತನೆಯ ದಿನವೂ ಮುಂದುವರಿದಿದೆ. ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಇದುವರೆಗೂ ಸರ್ಕಾರದಿಂದ ಯಾವ ಭರವಸೆ ಸಹ ಸಿಕ್ಕಿಲ್ಲ ಎನ್ನಲಾಗ್ತಿದೆ.

ಒಂಬತ್ತನೇ ದಿನಕ್ಕೆ ಕಾಲಿಟ್ಟ ಕೃಷ್ಣಾ ನದಿ ನೀರು ಹೋರಾಟ

ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಿಂದ ವಾಪಸಾಗಿದ್ದು, ಅವರು ತಕ್ಷಣ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು‌ ಬಿಡಿಸಬೇಕೆಂದು ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ. ಮೂರು ತಿಂಗಳುಗಳಿಂದ ಕೃಷ್ಣಾ ನದಿ ಬತ್ತಿರುವುದರಿಂದ ಸುಮಾರು 300ಕ್ಕೂ ಹೆಚ್ಚು ಗ್ರಾಮಳಿಗೆ ಕುಡಿಯಲು ನೀರಿಲ್ಲ ಎಂದು ರೈತರು ಹೇಳಿದರು.

ಪ್ರತಿ ವರ್ಷವೂ ಇದೇ ಗೋಳು, ಅದಕ್ಕಾಗಿ ಶಾಶ್ವತ ಪರಿಹಾರ ಕೋರಿ, ನಿರಂತರ ಪ್ರತಿಭಟನೆಗೆ ಕೃಷ್ಣಾ ನದಿ ನೀರು ಹೋರಾಟ ಸಮಿತಿ ಮುಂದಾಗಿದೆ. ಭಜನೆ ಮೂಲಕ‌ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

Intro:ಒಂಬತ್ತನೇ ದಿನಕ್ಕೆ ಕಾಲಿಟ್ಟ ಕೃಷ್ಣಾ ನದಿ ನೀರು ಹೋರಾಟBody:

ಚಿಕ್ಕೋಡಿ :

ಶಾಶ್ವತ ನೀರಿನ ಪರಿಹಾರಕ್ಕಾಗಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಸಮಿತಿಯ ಒಂಭತ್ತನೆಯ ದಿನಕ್ಕೆ ಕಾಲಿಟ್ಟಿದೆ.

ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಇನ್ನು ಸರ್ಕಾರದಿಂದ ಯಾವ ಅಧಿಸೂಚನೆ ದೊರಕಿಲ್ಲಿ. ಸಚಿವ ಡಿ ಕೆ ಶಿವಕುಮಾರ್ ವಿದೇಶ ಪ್ರವಾಸದಿಂದ ವಾಪಸಾಗಿದ್ದು ಅವರು ತಕ್ಷಣ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿ ಮಹಾರಾಷ್ಟ್ರದ ಕೋಯ್ನಾ ನದಿಯಿಂದ ಕೃಷ್ಣಾ ನದಿಗೆ ನೀರು‌ ಹರಿಸಬೇಕೆಂದು ಸಮಿತಿಯ ಕೋರಿಕೆಯಾಗಿದೆ.

ಮೂರು ತಿಂಗಳುಗಳಿಂದ ಕೃಷ್ಣಾ ನದಿ ಬತ್ತಿರಿವುದರಿಂದ ಸುಮಾರು ೩೦೦ಕ್ಕೂ ಹೆಚ್ಚು ಗ್ರಾಮಳಿಗೆ ಕುಡಿಯಲು ನೀರಿಲ್ಲ. ಪ್ರತಿ ವರ್ಷವೂ ಇದೇ ಗೋಳಿನ ಬದಲು ಶಾಶ್ವತ ಪರಿಹಾರ ಕೋರಿ ನಿರಂತರ ಪ್ರತಿಭಟನೆಗೆ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಮನವಿಯಾಗಿದೆ.

ಮಂಗಳವಾರ ಒಂಬತ್ತನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಭಜನೆ ಮೂಲಕ‌ ರೈತರು ವಿನೂತನವಾಗಿ ಪ್ರತಿಭಟನೆ ಮಾಡಿ ಸರಕಾರಕ್ಕೆ ಭಜನೆ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
Last Updated : May 28, 2019, 11:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.