ETV Bharat / state

ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವು

ಮನೆಯೊಂದರ ಮೇಲ್ಛಾವಣಿ ಬಿದ್ದು ವೃದ್ಧೆ ಮೃತಪಟ್ಟಿರುವ ಘಟನೆ ನಡೆದಿದೆ.

author img

By

Published : Feb 14, 2023, 2:13 PM IST

ಮನೆ ಮೇಲ್ಚಾವಣಿ ಕುಸಿದು ವೃದ್ಧೆ ಸಾವು
ಮನೆ ಮೇಲ್ಚಾವಣಿ ಕುಸಿದು ವೃದ್ಧೆ ಸಾವು

ಬೆಳಗಾವಿ: ಹಠಾತ್ತನೆ ಮನೆಯ ಮೇಲ್ಛಾವಣಿ ಬಿದ್ದು ವೃದ್ಧೆ ಓರ್ವರು ಮೃತಪಟ್ಟಿರುವ ಘಟನೆ ಇಲ್ಲಿಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಶಾಂತವ್ವ ಶಿವಮೂರ್ತಯ್ಯ ಹಿರೇಮಠ್ ವಯಸ್ಸು (60) ಸಾವನ್ನಪ್ಪಿದ ವೃದ್ಧೆ. ಮುಂಜಾನೆ 7 ಗಂಟೆ 30 ನಿಮಿಷಕ್ಕೆ ಹಠಾತ್ತನೆ ಮೇಲ್ಚಾವಣಿ ಕುಸಿದ ಪರಿಣಾಮವಾಗಿ ಮನೆಯ ಮಧ್ಯ ಭಾಗದಲ್ಲಿಯೇ ಶಾಂತವ್ವ ಜೀವಂತ ಸಮಾಧಿ ಆಗಿದ್ದಾರೆ. ಸವದತ್ತಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಕರಕಲಾದ ಮನೆ : ಹಣ, ದವಸ ಧಾನ್ಯ ಭಸ್ಮ

ಚಿಕ್ಕೋಡಿ: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಕಕಮರಿ ಗ್ರಾಮದಲ್ಲಿ ನಡೆದಿದೆ. ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ನಿವಾಸ ಸುಟ್ಟು ಕರಕಲಾಗಿದೆ. ಮಲ್ಲಪ್ಪ ಶಿವಪ್ಪ ಬಸರಗಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಬೆಳಗ್ಗೆ ಸಮಯ ಮನೆಯ ಸದಸ್ಯರೆಲ್ಲ ಸೇರಿ ತೋಟದಲ್ಲಿ ಗೋದಿ ಬೆಳೆ ಕಟಾವು ಮಾಡುಲು ತೆರಳಿದ್ದಾರೆ. ಈ ಸಂದರ್ಭದಲ್ಲಿ, ಕುಟುಂಬ ಸದಸ್ಯ ಮನೆಯಲ್ಲಿ ಚಹಾ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾರೆ. ಅದರಂತೆ ಚಹಾ ಮಾಡಿ ಕೊಂಡ ಹೋದ ಬಳಿಕ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬಳಿಕ ಬೆಂಕಿ ಇಡೀ ಮನೆಗೆ ಆವರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಬೆಂಕಿಯಲ್ಲಿ ಭಸ್ಮವಾಗಿದೆ. ಘಟನೆಯಲ್ಲಿ ಬಂಗಾರ, ಮನೆಯಲ್ಲಿ ಇಟ್ಟ 60 ಸಾವಿರ ನಗದು, ಒಂದು ನೂತನವಾದ ದ್ವಿಚಕ್ರ ವಾಹನ, ದವಸ ಧಾನ್ಯ, ಬಟ್ಟೆ ಪಾತ್ರೆ, ಕಾಗದ ಪತ್ರಗಳು ಎಲ್ಲವೂ ಬೆಂಕಿಯಲ್ಲಿ ಭಸ್ಮವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಸ್ಥಳಕ್ಕೆ ಐಗಳಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಪೌಂಡ್ ಕುಸಿದು ಇಬ್ಬರು ಕಾರ್ಮಿಕರು ಸಾವು: ಮೃತ ಪತ್ನಿ ನೋಡಲು ಬರುತ್ತಿದ್ದ ಪತಿಗೆ ಅಪಘಾತ

ದುರಸ್ತಿ ಕೆಲಸದ ವೇಲೆ ಮನೆ ಕಂಪೌಂಡ್​ ಕುಸಿದು ಇಬ್ಬರು ಕಾರ್ಮಿಕರ ಸಾವು:

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಕಂಪೌಂಡ್​ ದುರಸ್ತಿ ಕೆಲಸದ ವೇಳೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಇಲ್ಲಿಯ ಭಾರತಿ ನಗರದ ಎಂಇಜಿ‌ ಆಫೀಸರ್ಸ್ ಕಾಲೋನಿ ಆವರಣದಲ್ಲಿ ಘಟನೆ ಸಂಭವಿಸಿತ್ತು. ಪಶ್ಚಿಮ ಬಂಗಾಳದ ಕಾರ್ಮಿಕ ಅಕ್ರಮ್ ಉಲ್ ಹಕ್ ಹಾಗೂ ಚಳ್ಳಕೆರೆ ನಿವಾಸಿ ಆಶಮ್ಮ ಮೃತಪಟ್ಟಿದ್ದರು. ಗೋಡೆ ಕಂಪೌಂಡ್​ಗೆ ಮರ ಇರುವುದರಿಂದ ದುರಸ್ತಿ ಕಾರ್ಯ ನಡೆಸಲಾಗುತಿತ್ತು. ಇನ್ನು ಮೃತ ಆಶಮ್ಮ ಮದುವೆಯಾಗಿ ಕೆಲ ದಿನಗಳಷ್ಟೇ ಆಗಿದ್ದವು. ಅಷ್ಟರಲ್ಲಾಗಲೇ ದುರ್ಘಟನೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿಷಯ ತಿಳಿದು ಆಶಮ್ಮ ಅವರ ಪತಿ ಬೈಕ್​ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.