ಚಿಕ್ಕೋಡಿ : ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಪದೆ ಪದೇ ಹೇಳುತ್ತಿದೆ. ಆದರೆ, ಇತ್ತ ಬ್ಯಾಂಕು ಅಧಿಕಾರಿಗಳು ಮಾತ್ರ ರೈತರಿಗೆ ನೋಟಿಸ್ ನೀಡಿ ಸಾಲ ತುಂಬುವಂತೆ ಕಿರುಕುಳ ನೀಡುತ್ತಿರುವುದು ಮಾತ್ರ ತಪ್ಪಿಲ್ಲ. ಇದರಿಂ ಆಕ್ರೋಶಗೊಂಡ ರೈತರು ಬ್ಯಾಂಕ್ಗಳ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪದೇ ಪದೇ ಬ್ಯಾಂಕ್ ಅಧಿಕಾರಿಗಳು ಸಾಲ ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆಂದು ಅಥಣಿ ತಾಲೂಕಿನ ಹುಲಗಬಾಳ, ದರೂರ, ಸಂಕೋನಟ್ಟಿ , ಹಲ್ಯಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಅಥಣಿಯ ಸಿಂಡಿಕೇಟ್ ಬ್ಯಾಂಕ್ ಮುಂದೆ ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳಿದರು ಕೂಡಾ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಮೂಲಕ ಒಂದೇ ಕಂತಿನಲ್ಲಿ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಒಂದೆಡೆ ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಬೆಳೆಗಳು ಒಣಗಿ ಹೋಗಿವೆ. ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದರೆ ಇತ್ತ ಬ್ಯಾಂಕ್ ಅಧಿಕಾರಿಗಳ ಕಾಟದಿಂದ ಮತ್ತಷ್ಟು ಬೇಸತ್ತಿದ್ದೇವೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.