ಬೆಳಗಾವಿ : ಬ್ರಿಟನ್‌ನಿಂದ ಬೆಳಗಾವಿಗೆ ಆಗಮಿಸಿದ್ದ ಮಹಿಳೆಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಇದರಿಂದ ಆತಂಕದಲ್ಲಿದ್ದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಡಿ.14 ರಂದು 35 ವರ್ಷದ ಮಹಿಳೆ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿಗೆ ತೆರಳಿದ್ದ ಅವರು ಡಿ.14ರಿಂದ ಡಿ.21ರವರೆಗೆ ಜಮಖಂಡಿಯಲ್ಲೇ ಇದ್ದರು. ಎರಡು ದಿನಗಳ ಹಿಂದೆ ಜಮಖಂಡಿಯಿಂದ ಬೆಳಗಾವಿಗೆ ಬಂದು ಇಲ್ಲಿನ ಖಡೇಬಜಾರ್ ಪ್ರದೇಶದಲ್ಲಿ ವಾಸವಿದ್ದರು. ಲಂಡನ್ನಲ್ಲಿ ಕೊರೊನಾದ ರೂಪಾಂತರ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಅಧಿಕಾರಿಗಳು ಮಹಿಳೆಗೆ ಕೋವಿಡ್ ಟೆಸ್ಟ್ ನಡೆಸಲು ಸೂಚಿಸಿದ್ದರು.
ಇದನ್ನೂ ಓದಿ ಲಂಡನ್‌ನಿಂದ ಬೆಳಗಾವಿಗೆ ಬಂದ ಮಹಿಳೆ: ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ
ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಮಹಿಳೆಯ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಂ.ಜಿ. ಹಿರೇಮಠ ಸ್ಪಷ್ಟಪಡಿಸಿದ್ದಾರೆ.