ETV Bharat / state

ಗೋಕಾಕ್​ ತಾಲೂಕನ್ನು ಜಿಲ್ಲೆ ಮಾಡಲು ತಕರಾರಿಲ್ಲ: ಸತೀಶ್​​ ಜಾರಕಿಹೊಳಿ - Satish Zarakiholi speak on gokak district

ಗೋಕಾಕ್ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ‌ ಸರ್ಕಾರ ಇದ್ದಾಗಲೂ ಹೇಳಿದ್ದೆವು. ಸದನದಲ್ಲೂ ಸಾಕಷ್ಟು ಬಾರಿ ಜಿಲ್ಲೆ ಮಾಡಬೇಕೆಂದು ಹೇಳಿದ್ದೇವೆ. ಗೋಕಾಕ್​ ಜಿಲ್ಲೆ ಆದ್ರೆ ಒಳ್ಳೆಯದು. ಆ ಶ್ರೇಯಸ್ಸು ರಮೇಶ್​​ ಅವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ‌ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ‌

author img

By

Published : Jan 4, 2021, 5:50 PM IST

Updated : Jan 4, 2021, 10:39 PM IST

ಬೆಳಗಾವಿ: ಗೋಕಾಕ್​​ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮದೇನು ತಕರಾರಿಲ್ಲ. ಆದಷ್ಟು ಬೇಗ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ‌ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಕಾಕ್ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ‌ ಸರ್ಕಾರ ಇದ್ದಾಗಲೂ ಹೇಳಿದ್ದೆವು. ಸದನದಲ್ಲೂ ಸಾಕಷ್ಟು ಬಾರಿ ಜಿಲ್ಲೆ ಮಾಡಬೇಕೆಂದು ಹೇಳಿದ್ದೇವೆ. ಗೋಕಾಕ್​ ಜಿಲ್ಲೆ ಆದ್ರೆ ಒಳ್ಳೆಯದು. ಆ ಶ್ರೇಯಸ್ಸು ರಮೇಶ್​​ ಅವರಿಗೆ ಸಲ್ಲುತ್ತದೆ ಎಂದರು.

ಓದಿ:ಬೆಳಗಾವಿ ಗ್ರಾಮೀಣ ಭಾಗದಲ್ಲಿ ನಮ್ಮ ಅಭ್ಯರ್ಥಿಯೇ ಪ್ರಬಲ : ಸಚಿವ ರಮೇಶ್‌ಗೆ ಸತೀಶ್ ತಿರುಗೇಟು

ಕೋರ್ಟ್​ಗೂ ಬೆಳಗಾವಿ ಜಿಲ್ಲಾ ವಿಭಜನೆಗೆ ಯಾವುದೇ ರೀತಿಯ ಸಂಬಂಧವಿಲ್ಲ. ಬಹಳಷ್ಟು ದೊಡ್ಡದಾಗಿರುವ ಬೆಳಗಾವಿಯನ್ನು ವಿಭಜನೆ ಮಾಡಲೇಬೇಕು. ಇಲ್ಲವಾದ್ರೆ ಅಭಿವೃದ್ಧಿ ಮಾಡಲು‌ ಕಷ್ಟವಾಗುತ್ತದೆ. ಈ ಹಿಂದೆ ಗೋಕಾಕ್​ ಜಿಲ್ಲೆ ಘೋಷಣೆ ವಾಪಸ್ ಪಡೆಯಲು ಕೋರ್ಟ್ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಾಪಸ್ ಪಡೆಯಲಾಗಿತ್ತು. ಇದೀಗ ಸಚಿವ ರಮೇಶ್​​ ಜಾರಕಿಹೊಳಿ ಹೇಗಾದರೂ ಮಾಡ್ಲಿ, ಏನಾರ ಮಾಡ್ಲಿ... ಆದ್ರೆ, ಗೋಕಾಕ್​​ ತಾಲೂಕನ್ನು ಜಿಲ್ಲೆ ಮಾಡಿದ್ರೆ ಸಾಕು. ಇದಲ್ಲದೇ ಬೆಳಗಾವಿ ತಾಲೂಕನ್ನು ಕೂಡ ವಿಭಜನೆ ಮಾಡಬೇಕು ಎಂದರು.

Last Updated : Jan 4, 2021, 10:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.