ಅಥಣಿ(ಬೆಳಗಾವಿ): ಮಹಾರಾಷ್ಟ್ರದ ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಿತಿ ಮೀರಿದೆ. ಆದರೆ ಅಥಣಿ ಮಹಾರಾಷ್ಟ್ರದ ಗಡಿ ಸಮೀಪದಲ್ಲೇ ಇದ್ದರೂ ಅದೃಷ್ಟವಶಾತ್ ಅಲ್ಲಿನ ಸೋಂಕು ಅಥಣಿಗೆ ಅಂಟಿಲ್ಲ.
ಜಾರ್ಖಂಡ್ ಪ್ರವಾಸದಿಂದ ಮರಳಿರುವ 44 ಜನರ ಪೈಕಿ 12 ಜನರಲ್ಲಿ ಮೇ 26 ರಂದು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಮೊದಲ ಕೊವಿಡ್-19 ಪ್ರಕರಣ ದಾಖಲಾಗಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಅದರ ಬಳಿಕ ಇವತ್ತಿನವರೆಗೆ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗದಿರುವುದು ಖುಷಿಯ ಸಂಗತಿ.
ಕೊರೊನಾ ತಡೆಯುವಲ್ಲಿ ಅಥಣಿ ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಹಾಗೂ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಿದೆ. ಮುಂಬೈನಿಂದ ಜೂನ್ 4 ರಂದು 30 ಜನರು ತಾಲೂಕಿಗೆ ವಾಪಸ್ ಬಂದಿದ್ದು, ತಾಲೂಕಾಡಳಿತವು ಅವರನ್ನೆಲ್ಲ ತೇಲಸಂಗ ಗ್ರಾಮದಲ್ಲಿ ಕ್ವಾರಂಟೈನ್ ಮಾಡಿದೆ.