ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಕಾಗವಾಡ ನೂತನ ತಾಲೂಕಿನಲ್ಲಿ ಮೊದಲ ಬಾರಿಗೆ ಗ್ರಾ.ಪಂ. ಚುನಾವಣೆ ನಡಯಲಿದ್ದು, ಈ ಎರಡು ತಾಲೂಕಿನಲ್ಲಿ ಡಿ.27 ರಂದು ಚುನಾವಣೆ ನಡೆಯಲಿದೆ.
ಹೊಸ ತಾಲೂಕು ಕೇಂದ್ರವಾದ ನಿಪ್ಪಾಣಿಯಲ್ಲಿ 27 ಗ್ರಾಮ ಪಂಚಾಯತ್ಗಳಿಗೆ ಹಾಗೂ ಕಾಗವಾಡ ತಾಲೂಕಿನಲ್ಲಿ 8 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಈ ಎರಡು ತಾಲೂಕು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿವೆ. ನೂತನ ನಿಪ್ಪಾಣಿ, ಕಾಗವಾಡ ತಾಲೂಕುಗಳಿಗೆ ಮೊದಲ ಚುನಾವಣೆಯಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತಿ ಜಾರಿಯಾಗಿದೆ. ಪ್ರತಿಷ್ಠೆ ಕಣವಾಗಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸ್ಥಳೀಯ ನಾಯಕರು, ಮುಖಂಡರು ಮತ್ತು ಆಯಾ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಪ್ಯಾನಲ್ ರಚನೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ.
ಓದಿ : 3ನೇ ದಿನಕ್ಕೆ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ.. ಮಕ್ಕಳನ್ನ ಭುಜದ ಮೇಲೆ ಕೂರಿಸಿಕೊಂಡು ಪ್ರತಿಭಟನೆ
ಎರಡು ತಾಲೂಕುಗಳಿಗೆ ಮೊದಲ ಚುನಾವಣೆ:
ನಿಪ್ಪಾಣಿ ತಾಲೂಕಿನಲ್ಲಿ 27 ಗ್ರಾಮ ಪಂಚಾಯಯತ್ಗಳಿಗೆ 498 ಸದಸ್ಯರು ಚುನಾಯಿತರಾಗಲಿದ್ದಾರೆ. ಸದ್ಯ ತಾಲೂಕಿನಲ್ಲಿ ನಗರ ಹಾಗೂ ಪಟ್ಟಣ ಪ್ರದೇಶ ಹೊರತು ಪಡಿಸಿ 1,52,732 ಜನ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 78,279 ಪುರುಷ ಮತದಾರರು ಹಾಗೂ 74,483 ಮಹಿಳಾ ಮತದಾರರಿದ್ದಾರೆ. 27 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ 180 ಮತಗಟ್ಟೆ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದಾರೆ.
ಕಾಗವಾಡ ತಾಲೂಕಿನಲ್ಲಿ 8 ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 93 ವಾರ್ಡ್ಗಳಿಂದ 202 ಸದಸ್ಯರು ಆಯ್ಕೆಯಾಗಲಿದ್ದಾರೆ. ಒಟ್ಟು 73,5,70 ಮತದಾರರಿದ್ದು, ಇದರಲ್ಲಿ 37,758 ಪುರುಷ ಹಾಗೂ 35,812 ಮಹಿಳೆಯರು ಸೇರಿದಂತೆ 8 ಗ್ರಾಮ ಪಂಚಾಯತ್ಗಳ 93 ವಾರ್ಡ್ಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.