ಬೆಳಗಾವಿ: ಒಮ್ರಿಕಾನ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿಗೆ ಬರಲಿದೆ.
ಅವಧಿಗೂ ಮುನ್ನವೇ ಬೆಳಗಾವಿಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಸ್ಥರು ಬಂದ್ ಮಾಡುತ್ತಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೊಲೀಸ್ ಪೆಟ್ರೊಲಿಂಗ್ ಆರಂಭ ಮಾಡಲಿದ್ದಾರೆ.
ಅವಧಿಗೂ ಮುನ್ನವೇ ಫೀಲ್ಡಿಗಿಳಿದ ಪೊಲೀಸರು
10 ಗಂಟೆಯೊಳಗೆ ಅಂಗಡಿ ಬಂದ್ ಮಾಡುವಂತೆ ವ್ಯಾಪಾರಸ್ಥರಿಗೆ ಪೊಲೀಸರು ಸೂಚಿಸಿದ್ದು, ಅವಧಿಗೆ ಮುನ್ನವೇ ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಮನೆಗೆ ತೆರಳುತ್ತಿದ್ದಾರೆ.
ಬೆಳಗಾವಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಯ್ಸಳ ವಾಹನಗಳು
ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆಗಳುಮ, ಡೇ ಬಜಾರ್, ಸಮಾದೇವಿ ಗಲ್ಲಿ, ಗಣಪತಿ ಬೀದಿ, ಶನಿವಾರ ಕೂಟ್‌ನಲ್ಲಿ ಪೊಲೀಸರು ರೌಂಡ್ಸ್ ಹಾಕುತ್ತಿದ್ದಾರೆ.
ಓದಿ: ಡಿ. 31 ರಂದು ಕರ್ನಾಟಕ ಬಂದ್ ನಡೆದೇ ನಡೆಯುತ್ತೆ.. ವಾಟಾಳ್ ನಾಗರಾಜ್