ಚಿಕ್ಕೋಡಿ: ನದಿಯ ದಡದಲ್ಲಿ ಕಾಲು ಜಾರಿ ಬಿದ್ದ ಯುವಕನೋರ್ವ ನೀರಿನ ಹರಿವಿನಲ್ಲಿ ಸಿಲುಕಿಕೊಂಡು, ನದಿಯ ನಡುವೆ ಇರುವ ಮರದ ಮೇಲೆ ಹತ್ತಿ ಕುಳಿತಿದ್ದ. ಆತನನ್ನು ರಕ್ಷಣೆ ಮಾಡಿ, ದಡ ಸೇರಿಸುವಲ್ಲಿ ಸ್ಥಳೀಯರು, ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ಯಶಸ್ವಿಯಾಗಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಹತ್ತಿರ ವೇದಗಂಗಾ ನದಿಯಲ್ಲಿ ಕಾಲು ಜಾರಿ ಬಿದ್ದ ಪ್ರಜ್ವಲ್ ಕುಲಕರ್ಣಿ ಎಂಬ ಯುವಕ, ನದಿಯ ಮಧ್ಯದಲ್ಲಿದ್ದ ಮರ ಹತ್ತಿ ಕುಳಿತಿದ್ದ. ಅಲ್ಲದೇ, ರಕ್ಷಣೆಗಾಗಿ ಅಂಗಲಾಚುತ್ತಿದ್ದ. ಇದನ್ನು ಕಂಡ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬಳಿಕ ಯುವಕನ ರಕ್ಷಣೆಗೆ ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಮುಂದಾಗಿ, ಆತನನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ತಡೆಯಿರಿ, ನಮ್ಮ ಸಹಕಾರ ಇರಲಿದೆ: ಡಿಕೆಶಿ